ETV Bharat / state

ಡ್ರೈವಿಂಗ್ ಟೆಸ್ಟ್ ಸರಿಯಾಗಿ ನಡೆಸದ ಆರ್​ಟಿಒ ಅಧಿಕಾರಿಗಳ ವಿರುದ್ಧ ಪಿಐಎಲ್ : ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್ - Central Motor Vehicle Rule -1989

ಎಲ್ಲ ಮಾರ್ಗಸೂಚಿಗಳ ಪ್ರಕಾರ ಚಾಲಕನ ಚಾಲನಾ ಸಾಮರ್ಥ್ಯವನ್ನು ಪರೀಕ್ಷಿಸಿದ ನಂತರವೇ ಡಿಎಲ್ ನೀಡುವ ಕುರಿತು ನಿರ್ಣಯಿಸಬೇಕು. ಆದರೆ, ಕೆಲ ಆರ್​ಟಿಒ ಅಧಿಕಾರಿಗಳು ದಿನಕ್ಕೆ 75 ರಿಂದ 100 ಮಂದಿಯನ್ನು ಪರೀಕ್ಷೆ ಮಾಡಿ ಮುಗಿಸುತ್ತಿದ್ದಾರೆ. ಇದನ್ನು ಗಮನಿಸಿದರೆ, ಅಧಿಕಾರಿಗಳು ನಿಯಮ 15ನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು..

High court
ಹೈಕೋರ್ಟ್
author img

By

Published : Jul 14, 2021, 8:10 PM IST

ಬೆಂಗಳೂರು : ಸಾರಿಗೆ ಇಲಾಖೆ ಅಧಿಕಾರಿಗಳು ಡ್ರೈವಿಂಗ್ ಲೈಸೆನ್ಸ್ ಕೊಡುವ ಸಂದರ್ಭದಲ್ಲಿ ಚಾಲಕನ ಸಾಮರ್ಥ್ಯ ಪರೀಕ್ಷಿಸುವ ಸಂಬಂಧ ರೂಪಿಸಿರುವ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ತನ್ನ ಪ್ರತಿಕ್ರಿಯೆ ತಿಳಿಸುವಂತೆ ಹೈಕೋರ್ಟ್ ಸೂಚಿಸಿದೆ.

ಡ್ರೈವಿಂಗ್ ಟೆಸ್ಟ್ ವೇಳೆ ಚಾಲಕನನ್ನು ಸರಿಯಾಗಿ ಪರೀಕ್ಷಿಸುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಕಗ್ಗದಾಸಪುರ ನಿವಾಸಿ ಎಸ್. ಗೌರಿ ಶಂಕರ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಅರ್ಜಿದಾರರು ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಕುರಿತು ಸರ್ಕಾರ ತನ್ನ ಪ್ರತಿಕ್ರಿಯೆ ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.

ಇದೇ ವೇಳೆ ಸಾರಿಗೆ ಇಲಾಖೆ ಅಧಿಕಾರಿಗಳು ಚಾಲನಾ ಪರವಾನಿಗೆ ನೀಡುವ ವೇಳೆ ಅಭ್ಯರ್ಥಿಗಳನ್ನು ಹೇಗೆ ಪರೀಕ್ಷಿಸುತ್ತಾರೆ ಎಂಬುದನ್ನು ತಿಳಿಯಲು ಏಜೆನ್ಸಿ ನೇಮಿಸುವ ಅಗತ್ಯವಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಅರ್ಜಿದಾರರು ವಾದಿಸಿ, ಕೇಂದ್ರ ಮೋಟಾರು ವಾಹನ ನಿಯಮ-1989ರ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ನಿಯಮ 15ರಡಿ 25 ಮಾರ್ಗಸೂಚಿಗಳಿದ್ದು, ಅವುಗಳ ಪ್ರಕಾರ, ಡಿಎಲ್ ಟೆಸ್ಟ್ ನಡೆಸುವ ವೇಳೆ ಚಾಲಕನ ಸಾಮರ್ಥ್ಯವನ್ನು ಕೂಲಂಕಷವಾಗಿ ಪರೀಕ್ಷಿಸಬೇಕು.

ಎಲ್ಲ ಮಾರ್ಗಸೂಚಿಗಳ ಪ್ರಕಾರ ಚಾಲಕನ ಚಾಲನಾ ಸಾಮರ್ಥ್ಯವನ್ನು ಪರೀಕ್ಷಿಸಿದ ನಂತರವೇ ಡಿಎಲ್ ನೀಡುವ ಕುರಿತು ನಿರ್ಣಯಿಸಬೇಕು. ಆದರೆ, ಕೆಲ ಆರ್​ಟಿಒ ಅಧಿಕಾರಿಗಳು ದಿನಕ್ಕೆ 75 ರಿಂದ 100 ಮಂದಿಯನ್ನು ಪರೀಕ್ಷೆ ಮಾಡಿ ಮುಗಿಸುತ್ತಿದ್ದಾರೆ. ಇದನ್ನು ಗಮನಿಸಿದರೆ, ಅಧಿಕಾರಿಗಳು ನಿಯಮ 15ನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಏನಿದು ನಿಯಮ 15?: ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ನಿಯಮ 15 ಚಾಲನಾ ಪರವಾನಿಗೆ ಬಯಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯನ್ನು ಪರೀಕ್ಷಿಸುವ ನಿಯಮಗಳ ಕುರಿತು ಹೇಳುತ್ತದೆ. ಚಾಲಕ ತನ್ನ ವಾಹನವನ್ನು ಹೇಗೆ ಚಲಾಯಿಸುತ್ತಾನೆ ಎಂಬುದರ ಜತೆಗೆ ವಾಹನ ಚಾಲನೆಗೆ ಮುನ್ನ ಮಿರರ್ ಹೊಂದಿಸಿಕೊಳ್ಳುವುದು, ಎಂಜಿನ್ ಸ್ಟಾರ್ಟ್ ಮಾಡುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು, ನಿಧಾನವಾಗಿ ಮತ್ತು ಸುಲಲಿತವಾಗಿ ವಾಹನವನ್ನು ಮುಂದಕ್ಕೆ ಬಿಡುವುದು, ಗೇರ್‌ನ ಸೂಕ್ತ ರೀತಿ ಬದಲಾಯಿಸುವುದು, ಟ್ರಾಫಿಕ್ ಸಂದರ್ಭದಲ್ಲಿ ಇಳಿಜಾರು ಮತ್ತು ದಿಬ್ಬಗಳು ಎದುರಾದ ವೇಳೆ ವಾಹನದ ಮೇಲಿನ ನಿಯಂತ್ರಣ, ಓವರ್ ಟೇಕ್ ಮಾಡುವುದು, ಸಿಗ್ನಲ್ ನೀಡುವುದು ಸೇರಿ ಒಟ್ಟು 25 ವಿಷಯಗಳಲ್ಲಿ ಅಭ್ಯರ್ಥಿಯನ್ನು ಸೂಕ್ಷ್ಮವಾಗಿ ಪರೀಕ್ಷಿಸಬೇಕು ಎಂದು ತಿಳಿಸುತ್ತದೆ.

ಓದಿ: ಶಾಲೆ ಆಸ್ತಿ ಕಬಳಿಕೆ ಆರೋಪ : ಶಿವಗಂಗಾ ಮಠಾಧೀಶರ ಹಾಜರಿಗೆ ಕೋರ್ಟ್ ನಿರ್ದೇಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.