ETV Bharat / state

ಸೆ. 28 ರಿಂದ ಹಂತ ಹಂತವಾಗಿ ಫಿಸಿಕಲ್ ಕೋರ್ಟ್ ಆರಂಭ : ಹೈಕೋರ್ಟ್ ಮಾರ್ಗಸೂಚಿ

ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನದ ಕಲಾಪದಲ್ಲಿ ತಲಾ 15 ಸೇರಿ ದಿನಕ್ಕೆ ಒಟ್ಟು 30 ಕೇಸುಗಳನ್ನಷ್ಟೇ ವಿಚಾರಣೆ ನಡೆಸಬೇಕು. ಕೋರ್ಟ್ ಹಾಲ್ ಗಳಲ್ಲಿ ವಿಚಾರಣೆ ವೇಳೆ ವಕೀಲರು, ಸಿಬ್ಬಂದಿ ಸೇರಿ 20ಕ್ಕಿಂತ ಹೆಚ್ಚು ಜನ ಇರಬಾರದು. ಸಾಕ್ಷಿಗಳು ಸಮನ್ಸ್ ಇದ್ದರಷ್ಟೇ ವಿಚಾರಣೆಗೆ ಹಾಜರಾಗಬೇಕು..

Highcourt
Highcourt
author img

By

Published : Sep 19, 2020, 10:08 PM IST

ಬೆಂಗಳೂರು : ಕೊರೊನಾ ಸೋಂಕಿನ ಪರಿಣಾಮ ಕಳೆದ ಮಾರ್ಚ್ ತಿಂಗಳಿಂದ ಸ್ಥಗಿತಗೊಂಡಿದ್ದ ಫಿಸಿಕಲ್ ಕೋರ್ಟ್ ಕಲಾಪಗಳು ಸೆ.28ರಿಂದ ಹಂತ ಹಂತವಾಗಿ ಪುನಾರಂಭಿಸಲು ಹೈಕೋರ್ಟ್ ಮಾರ್ಗಸೂಚಿ ಪ್ರಕಟಿಸಿದೆ.

ಈ ಸಂಬಂಧ ಹೈಕೋರ್ಟ್ 42 ಅಂಶಗಳ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ ರಾಜ್ಯದ 55 ತಾಲೂಕುಗಳಲ್ಲಿ ಸೆ.28ರಿಂದ ಫಿಸಿಕಲ್ ಕಲಾಪಗಳು ಆರಂಭಗೊಳ್ಳಲಿವೆ. ಎರಡನೆ ಹಂತದಲ್ಲಿ ದಾವಣಗೆರೆ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ರಾಮನಗರ, ಉಡುಪಿ, ಗದಗ, ಕೊಡಗು, ಚಾಮರಾಜನಗರ, ಯಾದಗಿರಿ ಜಿಲ್ಲೆಗಳಲ್ಲಿ ಅಕ್ಟೋಬರ್ 5ರಿಂದ ಫಿಸಿಕಲ್ ಕೋರ್ಟ್ ನಡೆಯಲಿವೆ. ಅಂತಿಮವಾಗಿ ಅ.12ರಿಂದ ಎಲ್ಲಾ ಜಿಲ್ಲೆಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಕಲಾಪಗಳು ಆರಂಭಗೊಳ್ಳಲಿವೆ ಎಂದು ಹೈಕೋರ್ಟ್‌ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ನ್ಯಾಯಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ನ್ಯಾಯಾಲಯಗಳು ದಿನಕ್ಕೆ ಐದು ಸಾಕ್ಷಿಗಳಿಗೆ ಮಾತ್ರ ವಿಚಾರಣೆ ಮಾಡಬೇಕೆಂದು ಸೂಚಿಸಲಾಗಿದೆ. ಸಾಕ್ಷಿಗಳು ಮತ್ತು ಆರೋಪಿಗಳು ಹಾಜರಾಗಬೇಕಿದ್ದಲ್ಲಿ ಅವರಿಗೆ ನೆಗೆಟಿವ್ ವರದಿ ಕಡ್ಡಾಯವಾಗಿದೆ.

ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನದ ಕಲಾಪದಲ್ಲಿ ತಲಾ 15 ಸೇರಿ ದಿನಕ್ಕೆ ಒಟ್ಟು 30 ಕೇಸುಗಳನ್ನಷ್ಟೇ ವಿಚಾರಣೆ ನಡೆಸಬೇಕು. ಕೋರ್ಟ್ ಹಾಲ್ ಗಳಲ್ಲಿ ವಿಚಾರಣೆ ವೇಳೆ ವಕೀಲರು, ಸಿಬ್ಬಂದಿ ಸೇರಿ 20ಕ್ಕಿಂತ ಹೆಚ್ಚು ಜನ ಇರಬಾರದು. ಸಾಕ್ಷಿಗಳು ಸಮನ್ಸ್ ಇದ್ದರಷ್ಟೇ ವಿಚಾರಣೆಗೆ ಹಾಜರಾಗಬೇಕು. ಪ್ರತಿಯೊಬ್ಬ ಸಾಕ್ಷಿಯ ವಿಚಾರಣೆ ಬಳಿಕ ಆ ಜಾಗವನ್ನು ಸ್ಯಾನಿಟೈಸ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನ್ಯಾಯಾಧೀಶರು ಕುಳಿತುಕೊಳ್ಳುವ ಸ್ಥಳಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಕೀಲರ ಕ್ಲಕ್ ಗಳಿಗೆ ಕೋರ್ಟ್ ಒಳಗೆ ಪ್ರವೇಶವಿಲ್ಲ. ನ್ಯಾಯಾಲಯಗಳ ಸಂಕೀರ್ಣದೊಳಗೆ ವಕೀಲರ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶವಿರಲಿದೆ. ತುರ್ತು ಸಂದರ್ಭಗಳಲ್ಲಿ ಯಾವುದಾದರೂ ನ್ಯಾಯಾಲಯಗಳಲ್ಲಿ ಸ್ಯಾನಿಟೈಸ್ ಮಾಡಬೇಕು ಅಥವಾ ಕೋರ್ಟ್ ಕಲಾಪ ಸ್ಥಗಿತಗೊಳಿಸಬೇಕು ಎಂಬ ಕುರಿತು ಹೈಕೋರ್ಟ್ ಸಿಜೆ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅದರಂತೆ ಕಳೆದ ಏಳು ತಿಂಗಳಿಂದ ಬಹುತೇಕ ಸ್ಥಗಿತಗೊಂಡಿದ್ದ ಫಿಸಿಕಲ್ ಕಲಾಪ ಮತ್ತೆ ಪುನಾರಂಭಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.