ಬೆಂಗಳೂರು : ಏರಿಕೆಯಾಗಿರುವ ಪೆಟ್ರೋಲ್, ಡೀಸೆಲ್ ದರ ಸದ್ಯ ಸ್ಥಿರವಾಗಿದೆ. ಮಾರ್ಚ್ 22ರಿಂದ ನಿರಂತರವಾಗಿ ದರ ಏರಿಕೆ ಮಾಡಲಾಗಿತ್ತು. ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಇಂಧನ ದರ ಎಷ್ಟಿದೆ? ಈ ಕುರಿತ ಮಾಹಿತಿ ಇಲ್ಲಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ ₹ 96.72 ಇದ್ದು, ಲೀಟರ್ ಡೀಸೆಲ್ ಬೆಲೆ ₹ 89.62 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹111.35, ಡೀಸೆಲ್ ₹97.28ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.63 ರೂ. ಹಾಗೂ ಲೀಟರ್ ಡೀಸೆಲ್ ದರ 94.24 ರೂ. ಇದೆ.
ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 106.03ರೂ. ಡೀಸೆಲ್ ಬೆಲೆ ಲೀಟರ್ಗೆ 92.76 ರೂ. ಆಗಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 109.66 ರೂ. ಹಾಗೂ ಲೀಟರ್ ಡೀಸೆಲ್ ದರ 97.82 ರೂ.ನಿಗದಿಯಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿನ ದರ ಪಟ್ಟಿ:
ನಗರಗಳು | ಪೆಟ್ರೋಲ್ ದರ | ಡೀಸೆಲ್ ದರ |
ಬೆಂಗಳೂರು | 101.96 ರೂ. | 87.91 ರೂ. |
ದಾವಣಗೆರೆ | 103.95 ರೂ. | 89.52 ರೂ. |
ಮೈಸೂರು | 101.44 ರೂ. | 87.43 ರೂ. |
ಶಿವಮೊಗ್ಗ | 103.39 ರೂ. | 89.12 ರೂ. |
ಮಂಗಳೂರು | 101.34 ರೂ. | 87.31 ರೂ. |
ಇದನ್ನೂ ಓದಿ: ಮಳೆ ಅವಾಂತರ: ಗಗನಕ್ಕೇರಿದೆ ತರಕಾರಿ ದರ, ಗ್ರಾಹಕರು ಕಂಗಾಲು