ETV Bharat / state

ಸಹಕಾರ ನಿಬಂಧಕರ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ಹೈಕೋರ್ಟ್​ನಿಂದ ವಜಾ - ನೋಟಿಸ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ

ಸಹಕಾರ ಸಂಘದ ಒಬ್ಬ ಸದಸ್ಯ ನೀಡಿದ್ದ ದೂರು ಪರಿಗಣಿಸಿ ಸಹಕಾರ ನಿಬಂಧಕರು ವಿಚಾರಣೆಗಾಗಿ ನೋಟಿಸ್​ ಹೊರಡಿಸಿದ್ದರು. ಈ ನೋಟಿಸ್ ಪ್ರಶ್ನಿಸಿ ಮೈಸೂರು ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Jan 25, 2022, 8:51 PM IST

ಬೆಂಗಳೂರು: ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಹಕಾರ ಸಂಘದ ಒಬ್ಬ ಸದಸ್ಯ ನೀಡಿದ್ದ ದೂರು ಪರಿಗಣಿಸಿ ಸಹಕಾರ ನಿಬಂಧಕರು ವಿಚಾರಣೆಗೆ ಹೊರಡಿಸಿದ್ದ ನೋಟಿಸ್ ಪ್ರಶ್ನಿಸಿ, ಮೈಸೂರು ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತು ನೋಟಿಸ್ ರದ್ದುಪಡಿಸುವಂತೆ ಕೋರಿ ಸೊಸೈಟಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ, ಸಹಕಾರ ನಿಬಂಧಕರ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಪ್ರಕರಣ ಸಂಬಂಧ ವಿಚಾರಣಾಧಿಕಾರಿ ನಡೆಸುವ ವಿಚಾರಣೆಯಲ್ಲಿ ತನ್ನ ವಾದ ಮಂಡಿಸಲು ಸೊಸೈಟಿಗೆ ಮುಕ್ತ ಅವಕಾಶವಿದೆ. ನೋಟಿಸ್ ಜಾರಿಯಾಗಿರುವ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು. ಅಲ್ಲದೆ, ಸೊಸೈಟಿ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿ 2015ರ ಅಕ್ಟೋಬರ್ 5ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಇದೇ ವೇಳೆ ತೆರವುಗೊಳಿಸಿದೆ.

ಇದನ್ನೂ ಓದಿ: ಮದುವೆಯಾಗುವ ಭರವಸೆ ಈಡೇರಿಸದಿರುವುದು ವಂಚನೆಯಲ್ಲ : ಹೈಕೋರ್ಟ್

ಪ್ರಕರಣದ ಹಿನ್ನೆಲೆ: ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದಸ್ಯರೊಬ್ಬರು ನೀಡಿದ್ದ ದೂರಿನ ಮೇರೆಗೆ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ಅರ್ಜಿದಾರ ಸೊಸೈಟಿಯ ಲೆಕ್ಕ ಪುಸ್ತಕಗಳ ಪರಿಶೀಲನೆ ನಡೆಸುವಂತೆ 2015ರ ಜನವರಿ 2ರಂದು ಆದೇಶಿಸಿದ್ದರು. ಫೆಬ್ರವರಿ 2ರಂದು ಸಹಕಾರ ಸಹಾಯಕ ನಿಬಂಧಕರು ಸೊಸೈಟಿ ವಿರುದ್ಧ ವಿಚಾರಣೆ ನಡೆಸಲು ಅಧಿಕಾರಿಯೊಬ್ಬರನ್ನು ನೇಮಿಸಿದ್ದರು. ವಿಚಾರಣೆ ಹಿನ್ನೆಲೆ ಸೊಸೈಟಿಗೆ ನೋಟಿಸ್ ಸಹ ಜಾರಿಯಾಗಿತ್ತು.

ನೋಟಿಸ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಸಂಘ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959ರ ಸೆಕ್ಷನ್ 64(2)ರ ಪ್ರಕಾರ ಸಹಕಾರ ಸಂಘಗಳ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದು ಭಾಗದಷ್ಟು ಸದಸ್ಯರು ವಿಚಾರಣೆಗೆ ಮನವಿ ಸಲ್ಲಿಸಿದಾಗ ಮಾತ್ರ ವಿಚಾರಣೆಗೆ ಆದೇಶಿಸಬಹುದು. ಈ ಪ್ರಕರಣದಲ್ಲಿ ಕೇವಲ ಒಬ್ಬ ಸದಸ್ಯನ ದೂರು ಆಧರಿಸಿ ವಿಚಾರಣೆಗೆ ಆದೇಶಿಸಿರುವುದು ಕಾನೂನು ಬಾಹಿರವಾಗಿದ್ದು, ನೋಟಿಸ್ ರದ್ದುಪಡಿಸಬೇಕು ಎಂದು ಕೋರಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ವಾದ ಒಪ್ಪಲು ನಿರಾಕರಿಸಿದ ಪೀಠ, ಓರ್ವ ಸದಸ್ಯರು ದೂರು ನೀಡಿದರೂ ವಿಚಾರಣೆ ನಡೆಸುವ ಮತ್ತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವ ಅಧಿಕಾರವನ್ನು ಸಹಕಾರ ನಿಬಂಧಕರು ಹೊಂದಿದ್ದಾರೆ ಎಂದು 2001ರಲ್ಲಿಯೇ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶ ಪರಿಗಣಿಸಿ ಅರ್ಜಿ ವಜಾಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.