ETV Bharat / state

ಒಳ ಉಡುಪಿನಲ್ಲಿ ಪೇಸ್ಟ್​ ರೂಪದ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಅಂದರ್​ - gold smuggling in bengaluru

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓರ್ವ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದು, ಸುಮಾರು 1,024 ಗ್ರಾಮ್ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

person-arrested-in-gold-smuggling-case
ಒಳ ಉಡುಪಿನಲ್ಲಿ ಪೇಸ್ಟ್​ ರೂಪದ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಅಂದರ್​
author img

By

Published : Jan 2, 2021, 12:28 AM IST

ದೇವನಹಳ್ಳಿ (ಬೆಂಗಳೂರು): ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವ ಮೂಲಕ ಬೆಂಗಳೂರು ಕಸ್ಟಂ ವಿಭಾಗದ ಅಧಿಕಾರಿಗಳು ಪೇಸ್ಟ್​ ರೂಪದಲ್ಲಿದ್ದ ಸುಮಾರು 53 ಲಕ್ಷ ರೂಪಾಯಿ ಮೌಲ್ಯದ 1,024 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ 38 ವರ್ಷದ ಪ್ರಯಾಣಿಕ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು. ಈತನ ಚಲನವಲನಗಳ ಮೇಲೆ ಅನುಮಾನಗೊಂಡ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೇಸ್ಟ್ ರೂಪದಲ್ಲಿರುವ ಚಿನ್ನವನ್ನು ತನ್ನ ಒಳ ಉಡುಪಿಯಲ್ಲಿ ಮರೆಮಾಚಿ ಪ್ಲಾಸ್ಟಿಕ್ ಕವರ್​ನಲ್ಲಿ ಚಿನ್ನ ಸಾಗಣಿಕೆ ಮಾಡುತ್ತಿದ್ದ, ಈತನಿಂದ 52,89,984 ರೂಪಾಯಿ ಮೌಲ್ಯದ 1,024 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.