ETV Bharat / state

ವಲಸೆ ಕಾರ್ಮಿಕರಿಂದ ಹಣ ಪೀಕುತ್ತಿದ್ದ ವಂಚಕನ ಬಂಧನ - migrant labors bengaluru

ತಮ್ಮೂರುಗಳಿಗೆ ತೆರಳಬೇಕು ಎಂಬ ಬಡಪಾಯಿ ವಲಸೆ ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದ ವಂಚಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

sampigehalli_arrest
ವಂಚಕನ ಬಂಧನ
author img

By

Published : May 22, 2020, 7:17 PM IST

ಬೆಂಗಳೂರು: ನಿಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ಜಾರ್ಖಂಡ್, ಬಿಹಾರ, ಯುಪಿ, ಒಡಿಶಾ, ಮಧ್ಯ ಪ್ರದೇಶದ ಕಾರ್ಮಿಕರನ್ನು ನಂಬಿಸಿ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಮೂಲದ ಶ್ರೀರಾಂಪುರ ನಿವಾಸಿ‌ ಬಸವರಾಜು ಬಂಧಿತ ಆರೋಪಿಯಾಗಿದ್ದಾನೆ. ಈತ ಪೊಲೀಸರು ನನಗೆ ಚೆನ್ನಾಗಿ ಗೊತ್ತು. ಅವರಿಗೆ ಹೇಳಿ ನಿಮ್ಮನ್ನು ನಿಮ್ಮ‌ ಊರುಗಳಿಗೆ ಹೋಗುವ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆಸೆಗಣ್ಣಿನಿಂದ ಕಾಯುತ್ತಿದ್ದ ನೂರಾರು ಕಾರ್ಮಿಕರು ಸುಲಿಗೆಕೋರನ ಮಾತನ್ನು ನಂಬಿ ಹಣ ನೀಡಿದ್ದಾರೆ.

ವಂಚನೆ‌ ಪ್ರಕರಣದಲ್ಲಿ ಸದ್ಯ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.