ಬೆಂಗಳೂರು: ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಹತ್ತು ದಿನಗಳ ಹಿಂದೆ ಇರ್ಷಾದ್ ಎಂಬಾತನ ಹತ್ಯೆ ನಡೆದಿತ್ತು. ಇದರ ಸೇಡಿಗಾಗಿ ನಿನ್ನೆ ರಾತ್ರಿ ಅಬು ಸೂಫಿಯಾನ್ ಎಂಬಾತನ ಮೇಲೆ ಆರೋಪಿಗಳು ಲಾಂಗು-ಮಚ್ಚುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಪುಲಕೇಶಿ ನಗರದ ಡಬಲ್ ರಸ್ತೆಯಲ್ಲಿ ಸಾರ್ವಜನಿಕವಾಗಿಯೇ ಆರೋಪಿಗಳು ಭೀಕರ ಕೃತ್ಯ ಎಸಗಿದ್ದಾರೆ. 'ರೌಡಿ ಫೈವ್' ತಂಟೆಗೆ ಬಂದರೆ ಮುಗೀತು ಎಂದು ದುಷ್ಕರ್ಮಿಗಳು ಅವಾಜ್ ಹಾಕಿದ್ದಾರೆ. ಸದ್ಯ ಹಲ್ಲೆ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಆಧಾರದ ಮೇಲೆ ಪುಲಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.