ETV Bharat / state

ಕಳೆದ ವರ್ಷದಲ್ಲಿ, ಪೊಲೀಸ್ ಇಲಾಖೆಯ ಕಾರ್ಯವೈಖರಿ ತೃಪ್ತಿ ತಂದಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ - ಸಳ್ಯದ ಪ್ರವೀಣ್​​ ನೆಟ್ಟಾರು

ಪೊಲೀಸ್ ಇಲಾಖೆಯ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಗೃಹ ಸಚಿವರು - ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಸರ್ಕಾರವೂ ಆದ್ಯತೆ ನೀಡಿದೆ

araga-jnanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Jan 4, 2023, 10:06 PM IST

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಕಳೆದ ವರ್ಷದ ಸಾಧನೆಗಳು, ಎದುರಿಸಿದ ಸವಾಲುಗಳು, ಕ್ರಮಿಸಬೇಕಾದ ಹಾದಿಗಳು ಹಾಗೂ ಇನ್ನೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರು, ಸಚಿವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯ ದಕ್ಷತೆಯಿಂದ, ಹತ್ತು ಹಲವು ಸವಾಲುಗಳನ್ನು, ಸಮರ್ಥವಾಗಿ ಎದುರಿಸಲು ಸಹಾಯವಾಯಿತು ಎಂದು ಹೇಳಿದರು.

ಈ ವೇಳೆ ಮಾತನಾಡಿದ ಸಚಿವರು, ಪೊಲೀಸ್ ಸಿಬ್ಬಂದಿಗಳು, ಹಗಲಿರುಳು ಶ್ರಮಿಸಿದ ಫಲವಾಗಿ, ಅತ್ಯುತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಸರಕಾರಕ್ಕೂ ಒಳ್ಳೆಯ ಹೆಸರು ಬಂದಿದೆ. ಕಳೆದ ಒಂದು ವರ್ಷದಲ್ಲಿ, ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಸರಕಾರವೂ ಆದ್ಯತೆ ನೀಡಿದೆ. ಒಂದು ಲಕ್ಷ ಸಿಬ್ಬಂದಿ ಹೊಂದಿದ, ಗೃಹ ಇಲಾಖೆ, ಎಲ್ಲಾ ಸವಾಲುಗಳನ್ನೂ ಯಶಸ್ವಿಯಾಗಿ ನಿಭಾಯಿಸಿದೆ. ನೇಮಕಾತಿ ಹಗರಣವನ್ನು ಬಯಲುಗೊಳಿಸಿ, ಇಲಾಖೆಗೆ ಭ್ರಷ್ಟ ಅಧಿಕಾರಿಗಳ ಸೇರ್ಪಡೆಗೆ ತಡೆಯೊಡ್ಡಿದಂತಹ ಘಟನೆಯೂ ನಡೆದಿದೆ ಎಂದರು.

ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಆತ್ಮ ವಿಶ್ವಾಸ ಹೆಚ್ಚಿಸುವ ಪೂರಕ ಕಾರ್ಯಕ್ರಮಗಳಿಗೆ, ಆದ್ಯತೆ ನೀಡಿದ್ದು, ತೃಪ್ತಿ ತಂದಿದೆ. ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಪೋಲಿಸ್ ಸಿಬ್ಬಂದಿಗಳಿಗೆ ಉತ್ತಮ ವಸತಿ ಗೃಹಗಳು, ಕರ್ತವ್ಯ ನಿರ್ವಹಿಸಲು ಅತ್ಯುತ್ತಮ ಕಟ್ಟಡಗಳು ಹಾಗೂ ಇನ್ನಿತರ ಮೂಲ ಸೌಕರ್ಯ ಅಭಿವೃದ್ಧಿ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಕಳೆದ ವರ್ಷದಲ್ಲಿ, ಸರ್ಕಾರ ಮತಾಂತರ ನಿಷೇಧ ಹಾಗೂ ಗೋ ವಧೆ ನಿಷೇಧ ಕಾಯ್ದೆಗಳನ್ನು ಬಲ ಗೊಳಿಸಲು ಕ್ರಮ ಕೈಗೊಂಡಿದೆ. ಆದರೆ ಅದರ ಅನುಷ್ಠಾನ ಸಮರ್ಪಕವಾಗಿ ಆಗಬೇಕಿದೆ. ಬೀಟ್ ವ್ಯವಸ್ಥೆ ಇನ್ನಷ್ಟು ಚುರುಕು ಗೊಳ್ಳಬೇಕು. ವಿಧಾನ ಸಭಾ ಚುನಾವಣೆಯಲ್ಲಿ ಹತ್ತಿರವಿರುವುದರಿಂದ ಇನ್ನಷ್ಟು ಎಚ್ಚರಿಕೆಯಿಂದ ಸವಾಲುಗಳನ್ನೂ ಎದುರಿಸಲು ಸಿದ್ಧರಾಗಬೇಕಿದೆ ಎಂದು ಸೂಚನೆ ನೀಡಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ, ರಜನೀಶ್ ಗೋಯಲ್, ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ಅಲೋಕ್ ಮೋಹನ್ ಡಿಜಿ, ಕಾರಾಗೃಹ, ನಗರ ಪೊಲೀಸ್ ಆಯುಕ್ತ ಶ್ರೀ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

2022ರ ಪೊಲೀಸ್ ಟಾಸ್ಕ್​ ಕೆಲಸಗಳು: ಈ ವರ್ಷ ಪೊಲೀಸರನ್ನು ಮೊದಲ ತಿಂಗಳಿಂದಲೇ ಹಿಜಬ್​ ವಿವಾದ ಕಾಡಿತು. ಕುಂದಾಪುರದ ಒಂದು ಶಾಲೆಯಲ್ಲಿ ಆರಂಭವಾದ ವಿವಾದ ರಾಜ್ಯದ ಎಲ್ಲಾ ಶಾಲೆಗಳಿಗೂ ಹರಡಿತ್ತು. ದಕ್ಷಿಣ ಕನ್ನಡ, ಉಡುಪಿಗಳಲ್ಲಿ ವಿವಾದ ತಾರಕಕ್ಕೇರಿ ಕೋರ್ಟ್​ ಮೆಟ್ಟಿಲೇರಿತ್ತು ಸದ್ಯ ವಿವಾದ ಹೈಕೋರ್ಟ್​ ಅಂಗಳದಲ್ಲಿದೆ. ಫೆಬ್ರವರಿಯಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆಯಾಯಿತು. ಈ ಕೇಸನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಣಿಸಿದ್ದರು. ಅಲ್ಲದೇ ರಾಜ್ಯದಲ್ಲಿ ಈ ಪ್ರಕರಣ ಸಂಚಲನ ಮೂಡಿಸಿತ್ತು. ಹಾಗೇ ಸುಳ್ಯದ ಪ್ರವೀಣ್​​ ನೆಟ್ಟಾರು ಅವರ ಹತ್ಯೆಯೂ ಜೂನ್​ ತಿಂಗಳಿನಲ್ಲಿ ನಡೆಯಿತು. ಅದರ ಬೆನ್ನಲ್ಲೇ ಸುರತ್ಕಲ್​ನಲ್ಲಿ ಫಾಜಿಲ್​ ಎಂಬುವವನ ಹತ್ಯೆಯೂ ನಡೆದಿತ್ತು. ನೆಟ್ಟಾರು ಪ್ರಕರಣ ಮತ್ತು ಹರ್ಷನ ಹತ್ಯೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಹಾಗೇ ಪ್ರಕರಣ ಐಎನ್​ಎಗೆ ವಹಿಸಲಾಗಿದೆ.

ಶಿವಮೊಗ್ಗದಲ್ಲಿ ಟ್ರಯಲ್​ ಬಾಂಬ್​ ಸ್ಫೋಟ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್​ನಲ್ಲಿ ಮಂಗಳೂರಿನಲ್ಲಿ ಕೊಕ್ಕರ್​ ಬಾಂಬ್​ ಸ್ಫೋಟವೂ ಪೊಲೀಸರಿಗೆ ಎದುರಾದ ಕಠಿಣ ಸವಾಲುಗಳಲ್ಲಿ ಒಂದು. ಇದೆಲ್ಲದರ ನಡುವೆ ಹರ್ಷನ ಕೊಲೆ ಆರೋಪಿಗಳ ಮೊಬೈಲ್​ ಬಳಕೆ ಮಾಡುತ್ತಿದ್ದರು ಎಂಬ ಆರೋಪ ಹಾಗೇ ಪಿಎಸ್​ಐ ಪರೀಕ್ಷೆಯಲ್ಲಿ ಇಲಾಖೆಯ ಅಧಿಕಾರಿಗಳ ಕೈವಾಡ ಇದ್ದದ್ದು ಖಾಕಿಗೆ ಕಪ್ಪು ಚುಕ್ಕೆಯಂತಾಗಿದೆ.

ಇದನ್ನೂ ಓದಿ: ಗುರುರಾಜ್ ಕೆ.ಟಿ ಅವರಿಗೆ 'ಇಂಡಿಯನ್ ಸೈಬರ್ ಕಾಪ್ ಆಫ್ ದಿ ಇಯರ್' ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.