ETV Bharat / state

ರಾಜ್ಯದಲ್ಲಿ ಕೋವಿಡ್​ಗೆ ಬಲಿಯಾಗುತ್ತಿರುವವರ ಪ್ರಮಾಣ ಶೇ.1.56: ಸಚಿವ ಸುಧಾಕರ್

ಕೊರೊನಾ ಸೋಂಕಿತರ ಮರಣದ ಪ್ರಮಾಣ ದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕಡಿಮೆ ಇದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಪ್ರಮಾಣ ಶೇ.3 ಆಗಿದ್ದರೆ ಕರ್ನಾಟಕದ ಪ್ರಮಾಣ ಶೇ.1.56 ಮಾತ್ರ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

Minister Sudhakar
ಸಚಿವ ಡಾ.ಸುಧಾಕರ್
author img

By

Published : Jun 29, 2020, 7:34 AM IST

ಬೆಂಗಳೂರು: ಕೋವಿಡ್-19ಗೆ ಬಲಿಯಾಗುತ್ತಿರುವವರ ಪ್ರಮಾಣ ದೇಶದಲ್ಲಿ ಶೇ.3 ರಷ್ಟು ಇದ್ದರೆ, ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.56 ಮಾತ್ರ ಆಗಿದೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸಾಕಷ್ಟು ಮುಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ.57 ಆಗಿದೆ. ಒಟ್ಟು ಸೋಂಕಿತರಲ್ಲಿ 7,507 ಜನ ಗುಣಮುಖರಾಗಿದ್ದು, 5,472 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 5,95,470 ಜನರ ಕೊರೊನಾ ಪರೀಕ್ಷೆ ಮಾಡಿದ್ದು ಇದರಲ್ಲಿ 5,66,543 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ಪರೀಕ್ಷೆ ನಡೆಸಿದವರಲ್ಲಿ ಪಾಸಿಟಿವ್ ಬಂದವರ ಪ್ರಮಾಣ ಶೇ.2.21 ಮಾತ್ರ. ಕೊರೊನಾ ಸೋಂಕಿತರ ಮರಣದ ಪ್ರಮಾಣವೂ ದೇಶಕ್ಕೆ ಹೋಲಿಸಿದರೆ ಕಡಿಮೆ ಇದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಪ್ರಮಾಣ ಶೇ.3 ಆಗಿದ್ದರೆ ಕರ್ನಾಟಕದ ಪ್ರಮಾಣ ಶೇ.1.56 ಮಾತ್ರ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

  • Karnataka COVID recovery rate stands at 57% with 7507 discharges & 5472 active cases. So far we tested 5,95,470 samples and 5,66,543 of them are negative with positivity rate of 2.21%. Our state's mortality rare remains low at 1.56% while national mortality rate is 3%. @PMOIndia

    — Dr Sudhakar K (@mla_sudhakar) June 28, 2020 " class="align-text-top noRightClick twitterSection" data=" ">
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರಿನಲ್ಲಿ ಕೋವಿಡ್​ ಆರೈಕೆ ಕೇಂದ್ರಗಳನ್ನು ಹೆಚ್ಚಿಸುವ ಅಗತ್ಯವಿದ್ದು, ಸೋಂಕು ಲಕ್ಷಣ ರಹಿತ ವ್ಯಕ್ತಿಗಳನ್ನು ನೋಡಿಕೊಳ್ಳಲಾಗುತ್ತದೆ. 1,500 ಹೆಚ್ಚಿನ ಸೌಕರ್ಯ ಕಲ್ಪಿಸಲು ಸಂಸ್ಥೆಗಳನ್ನು ಸಿಸಿಸಿಗಳನ್ನಾಗಿ ರಾಜ್ಯ ಸರ್ಕಾರ ಸೂಚಿಸಿದೆ ಎಂದು ಸಚಿವ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.