ETV Bharat / state

ವ್ಯಾಕ್ಸಿನ್​​ಗಾಗಿ ಕೆ.ಸಿ‌‌‌.ಜನರಲ್ ಆಸ್ಪತ್ರೆಯೆದುರು ಜನರ ಸಾಲು - bangalore vaccination news

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದಂತೆ ಬೆಳಿಗ್ಗೆ 5 ಗಂಟೆಯಿಂದಲೇ ವ್ಯಾಕ್ಸಿನೇಷನ್‌ ಕೌಂಟರ್ ಮುಂದೆ ಸಾರ್ವಜನಿಕರ ಸರತಿ ಸಾಲು ಕಾಣಿಸಿತು.

people coming to KC general hospital for vaccination
ವ್ಯಾಕ್ಸಿನ್​​ಗಾಗಿ ಕೆ.ಸಿ‌‌‌. ಜನರಲ್ ಆಸ್ಪತ್ರೆಯೆದುರು ಸಾಲುಗಟ್ಟಿ ನಿಂತ ಸಾರ್ವಜನಿಕರು
author img

By

Published : May 21, 2021, 12:09 PM IST

ಬೆಂಗಳೂರು: ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಬೆಳಿಗ್ಗಿನಿಂದಲೇ ವ್ಯಾಕ್ಸಿನೇಷನ್‌ ಕೌಂಟರ್ ಮುಂದೆ ಜನರ ಕ್ಯೂ ಕಂಡು ಬಂದಿದೆ. 150 ಜನರಿಗೆ ಮಾತ್ರ ವ್ಯಾಕ್ಸಿನ್ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಘೋಷಣೆ ಮಾಡಿದ್ದಾರೆ.

ವ್ಯಾಕ್ಸಿನ್​​ಗಾಗಿ ಕೆ.ಸಿ‌‌‌. ಜನರಲ್ ಆಸ್ಪತ್ರೆಯೆದುರು ಸಾಲುಗಟ್ಟಿ ನಿಂತ ಸಾರ್ವಜನಿಕರು

ಆನ್ಲೈನ್ ರಿಜಿಸ್ಟರ್ ಮಾಡಿಕೊಂಡ 50 ಜನ ಹಾಗೂ ಆಸ್ಪತ್ರೆಗೆ ಬಂದು ರಿಜಿಸ್ಟರ್ ಮಾಡಿಸಿಕೊಂಡ 100 ಜನರಿಗೆ ಇಂದು ಲಸಿಕೆ ನೀಡಲಾಗುತ್ತದೆ. ಸಾಕಷ್ಟು ಜನರು ಬಂದು ಆಸ್ಪತ್ರೆ ಮುಂಭಾಗ ಸಾಲುಗಟ್ಟಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಗಲಾಟೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಜನಸಂದಣಿ‌ ನಿಯಂತ್ರಿಸಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಹೂ ಖರೀದಿಸಲು 6 ಕಿ.ಮೀ ದೂರ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವತಿ

ಇತ್ತೀಚೆಗೆ ವ್ಯಾಕ್ಸಿನೇಷನ್ ಸೆಂಟರ್​ಗಳತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವ್ಯಾಕ್ಸಿನ್ ಸೆಂಟರ್​ಗೆ ಬಂದವರು ಕೋವಿಡ್ ರೂಲ್ಸ್ ಅನುಸರಿಸುತ್ತಿಲ್ಲ. ಹೀಗಾಗಿ ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ ಮಾಡಲಾಗಿದೆ ಎಂದು ಮಲ್ಲೇಶ್ವರದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.