ETV Bharat / state

'ಐಡಿ ಕಾರ್ಡ್​' ತೋರಿಸಿ ರಸ್ತೆಗಿಳಿಯುತ್ತಿರುವ ಜನ.. ಸರ್ಕಾರದ ನಿರ್ಧಾರಕ್ಕೆ ಪೊಲೀಸರಿಂದಲೇ ಅಸಮಾಧಾನ?

ದೇಶದಲ್ಲಿ ಕೊರೊನಾ ತೀವ್ರಗತಿಯಲ್ಲಿ ಹರಡುತ್ತಿದ್ದು, ಭಾರತದ ಪರಿಸ್ಥಿತಿ ಕಂಡು ಇಡೀ ವಿಶ್ವವೇ ಮರುಗುತ್ತಿದೆ. ಇಂತಹ ಸಂದರ್ಭದಲ್ಲೂ ಬೆಂಗಳೂರಿನ ನಾಗರಿಕರು ಸರ್ಕಾರದ ಕೊರೊನಾ ನಿಯಮವನ್ನು ಉಲ್ಲಂಘಿಸಿ ರಸ್ತೆಗಿಳಿಯುತ್ತಿದ್ದಾರೆ.

people-break-the-corona-rules-in-bengalore
'ಐಡಿ ಕಾರ್ಡ್​' ತೋರಿಸಿ ರಸ್ತೆಗಿಳಿಯುತ್ತಿರುವ ಜನ
author img

By

Published : Apr 29, 2021, 3:51 PM IST

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕರ್ಫ್ಯೂ ಮೊರೆ ಹೋಗಿದೆ. ಈ ಮಧ್ಯೆ ಎರಡನೇ ದಿನಕ್ಕೆ ಕಾಲಿಟ್ಟ ಜನತಾ ಕರ್ಫ್ಯೂ ಸಂದರ್ಭದಲ್ಲಿಯೂ ಸೋಂಕಿನ ಅಲೆಯ ಭಯವಿಲ್ಲದೆ ರಾಜಾರೋಷವಾಗಿ ಜನ ಓಡಾಡುತ್ತಿದ್ದಾರೆ. ಹೀಗಾಗಿ, ಪೊಲೀಸರು ರಾಜಧಾನಿಯ ಹೊರವಲಯದ ಎಂಟನೇ ಮೈಲಿ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.

ಕೊರೊನಾ ಇಲ್ಲವೇನೋ ಎಂಬ ರೀತಿಯಲ್ಲಿ ಸುಖಾ-ಸುಮ್ಮನೆ ಹೊರಬರುತ್ತಿರುವ ಜನರ ವರ್ತನೆಗೆ ಪೊಲೀಸರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಗರಕ್ಕೆ ಒಳಬರುವ ಹಾಗೂ ಹೊರಹೋಗುವ ವಾಹನಗಳ ತಪಾಸಣೆ ವೇಳೆ ಸುಖಾಸುಮ್ಮನೆ ಮನೆಯಿಂದ ಜನ ಹೊರ ಬರುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಕಟ್ಟುನಿಟ್ಟಿನ ಕರ್ಫ್ಯೂ ನಡುವೆ ರಸ್ತೆಗಿಳಿಯುತ್ತಿರುವ ಜನ.. ಪೊಲೀಸರಿಗೆ ತಲೆಬಿಸಿ

ಖುದ್ದು ಖಾಕಿ ಪಡೆಯಿಂದ ಸರ್ಕಾರದ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದ್ದು, ಎಲ್ಲಾ ಕಂಪನಿಗಳಿಗೆ ಕೆಲಸ ಮಾಡಲು ಅನುಮತಿ ಕೊಟ್ಟಿರುವ ಕಾರಣ ಐಡಿ ಕಾರ್ಡ್​ಗಳನ್ನು ತೋರಿಸಿ ಸುಖಾಸುಮ್ಮನೆ ರಸ್ತೆಗಿಳಿಯುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಕೆಲ ಎಂಎನ್​ಸಿ ಕಂಪನಿಗಳು ವರ್ಕ್ ಫ್ರಂ ಹೋಮ್ ಎಂದು ಘೋಷಿಸಿವೆ. ಆದರೂ ಕೆಲವರು ಐಡಿ ಕಾರ್ಡ್​ಗಳನ್ನು ತೋರಿಸಿ ಹೊರಬರುತ್ತಿದ್ದಾರೆ. ಪ್ರತಿ ವಿಭಾಗದಲ್ಲೂ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಆದರೂ ಯಾವುದೇ ಭಯವಿಲ್ಲದೆ ಸುಖಾಸುಮ್ಮನೆ ವಾಹನಗಳು ರಸ್ತೆಗೆ ಇಳಿಯುತ್ತಿವೆ. ಹೀಗಾದರೆ ಕೊರೊನಾ ನಿಯಂತ್ರಿಸುವುದು ಹೇಗೆ? ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಓದಿ: ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ: ಹೆಚ್.ವಿಶ್ವನಾಥ್ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.