ಬೆಂಗಳೂರು: ಡಿ.ಕೆ ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಇಂದು ಮಧ್ಯಾಹ್ನ 2.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಸಾದಹಳ್ಳಿ ಗೇಟ್ ಬಳಿ ಅವರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.
ಬೃಹತ್ ಬ್ಯಾನರ್ಗಳನ್ನ ಅಳವಡಿಸಿರುವ ಕಾರ್ಯಕರ್ತರು. ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಕುಣಿತದ ಮೂಲಕ ಸ್ವಾಗತಕ್ಕೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಸಾವಿರಾರು ಕಾರ್ಯಕರ್ತರ ಆಗಮಿಸಿದ್ದು, ಮಹಿಳಾ ಅಭಿಮಾನಿಗಳು ಕೂಡ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಭಿತ್ತಿಪತ್ರ, ಡಿಕೆ ಭಾವ ಚಿತ್ರ ಇರುವ ಫ್ಲ್ಯಾಗ್ ಹಿಡಿದಿರುವ ಕಾರ್ಯಕರ್ತರು, ಬೃಹತ್ ಸ್ಪೀಕರ್ಗಳನ್ನು ಆಳವಡಿಸಿರುವ ವಾಹನಗಳ ಮೂಲಕ ಜಮಾಯಿಸಿದ್ದಾರೆ. ಡಿಕೆಶಿ ಸ್ವಾಗತಕ್ಕೆ ವಿಶೇಷವಾಗಿ ಅಲಂಕಾರ ಮಾಡಿರುವ ವಾಹನವಿದ್ದು, ಇದರ ಜೊತೆಯಲ್ಲಿ 500 ಕೆ.ಜಿ ಸೇಬಿನ ಹಾರವನ್ನು ಶಿವಕುಮಾರ್ಗೆ ಹಾಕಲು ಅಭಿಮಾನಿಗಳು ತಂದಿದ್ದಾರೆ. ದೇವನಹಳ್ಳಿ ಟೋಲ್ನಿಂದ ಬೆಂಗಳೂರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ವಾಹನದಲ್ಲೇ ಮಾತನಾಡಲಿದ್ದಾರೆ.