ಬೆಂಗಳೂರು : ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದ ತೋಟಗಾರಿಕಾ ಸಚಿವ ನಾರಾಯಣಗೌಡ , ಹಬ್ಬದ ಖುಷಿ ಜೊತೆ ಕೊರೊನಾ ಭೀತಿ ಕೂಡ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಿಂದ ಯಾರೂ ಹೊರಗೆ ಬರದೇ ಅಗತ್ಯತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ಜನತೆಗೆ ಮನವಿ ಮಾಡಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸೂಚಿಸಿದ ವಿಷಯವನ್ನು ನಾವೆಲ್ಲ ಪಾಲಿಸೋಣ. ರಾಜ್ಯ ಸರ್ಕಾರವೂ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದೆ. ಸಿಎಂ ಎಲ್ಲಾ ಸಚಿವರನ್ನು ಮತ್ತು ವೈದ್ಯರನ್ನು ಕರೆದು ಚರ್ಚಿಸಿದ್ದಾರೆ. ವೈರಸ್ ತಡೆಗೆ ಎಲ್ಲರೂ ಸಹಕರಿಸುವಂತೆ ಸಿಎಂ ಮನವಿ ಮಾಡಿದ್ದಾರೆ. ಅದರಂತೆ ನಾವು ಪಾಲಿಸೋಣ ಎಂದು ಮನವಿ ಮಾಡಿದರು.
ವೈರಸ್ ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ಮುಖ್ಯಮಂತ್ರಿ, ಸಚಿವರು, ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು