ETV Bharat / state

ಪೀರ್‌ಪಾಷಾ ಬಂಗ್ಲೆ ಮೂಲ ಅನುಭವ ಮಂಟಪ : ಸಂಶೋಧನೆ ನಡೆಸಲು ಸಿಎಂಗೆ ಮಠಾಧೀಶರ ನಿಯೋಗ ಮನವಿ - ಸಂಶೋಧನೆ ನಡೆಸಲು ಸಿಎಂಗೆ ಮಠಾಧೀಶರ ನಿಯೋಗ ಮನವಿ

ಮೂಲ ಅನುಭವ ಮಂಟಪವಾಗಿರುವ ಪೀರ್ ಪಾಷಾ ಬಂಗ್ಲೆಯಲ್ಲಿ ಪುರಾತತ್ವ ಇಲಾಖೆಯಿಂದ ಸಂಶೋಧನೆ ನಡೆಯಬೇಕು ಎಂದು ಒತ್ತಾಯಿಸಿ, ಸಿಎಂಗೆ ಮಠಾಧೀಶರ ನಿಯೋಗ ಭಾನುವಾರ ಮನವಿ ಮಾಡಿದೆ..

Peer Pasha Bangla is Original Anubhava mandapa
ಸಿಎಂಗೆ ಮಠಾಧೀಶರ ನಿಯೋಗ ಮನವಿ
author img

By

Published : Jun 5, 2022, 5:36 PM IST

ಬೆಂಗಳೂರು : ವಿಶ್ವದ ಪ್ರಪ್ರಥಮ ಸಂಸತ್ತಾದ ಮೂಲ ಅನುಭವ ಮಂಟಪ ಈಗಿನ ಪೀರ್ ಪಾಷಾ ಬಂಗ್ಲಾ ಆಗಿದೆ. ತಕ್ಷಣವೇ ಇದನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಭಾರತೀಯ ಪುರಾತತ್ವ ಇಲಾಖೆಯ ವತಿಯಿಂದ ಸಂಶೋಧನೆ ಮಾಡುವಂತೆ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.

ಬೀದರ್​ನ ತಡೋಳ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿ ನೇತೃತ್ವದಲ್ಲಿ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಅಧಿಕೃತ ನಿವಾಸ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್​ಗೆ ಭೇಟಿ ನೀಡಿತು. ಬೀದರ್ ಜಿಲ್ಲೆಯ ಬಸವಕಲ್ಯಾಣವು 12ನೇ ಶತಮಾನದಲ್ಲಿ ಶರಣರ ನಾಡಾಗಿತ್ತು. ಇಲಿ, ಅನುಭವ ಮಂಟಪ ಮುಖಾಂತರ ವಿಶ್ವದ ಪ್ರಪ್ರಥಮ ಸಂಸದೀಯ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದು ನಮ್ಮ ಬಸವಾದಿ ಶರಣರು, ಇದು ನಮ್ಮ ರಾಜ್ಯದ ಹೆಮ್ಮೆಯ ವಿಚಾರವಾಗಿದೆ.

ಪೀರ್ ಪಾಷಾ ಬಂಗ್ಲೆ, ಮೂಲ ಅನುಭವ ಮಂಟಪವೆಂದು ಸ್ಥಳೀಯರ ಮತ್ತು ದಾಖಲಾತಿಗಳ ಮುಖಾಂತರ ತಿಳಿದು ಬಂದಿದೆ. ಆದ ಕಾರಣ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ತನ್ನ ತೆಕ್ಕೆಗೆ ತೆಗೆದುಕೊಂಡು ಸಂರಕ್ಷಣೆ ಮಾಡಬೇಕು ಮತ್ತು ಭಾರತ ಪುರಾತತ್ತ್ವ ಇಲಾಖೆಯ ವತಿಯಿಂದ ಸಂಶೋಧನೆ ಮಾಡಿಸಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಸಂಶೋಧನಾ ಕೇಂದ್ರವನ್ನು ಬಸವಕಲ್ಯಾಣದಲ್ಲಿ ಸ್ಥಾಪಿಸಿ : 12ನೇಯ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯ ಮುಖಾಂತರ ನಮ್ಮ ಆಚಾರ-ವಿಚಾರ ಮತ್ತು ಸಂಸ್ಕೃತಿ ಎತ್ತಿ ಹಿಡಿದಿದ್ದರು. ಮುಖ್ಯವಾಗಿ ಅಂಗೈಯಲ್ಲಿ ಇಷ್ಟಲಿಂಗ ಪೂಜೆ ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಪ್ರಪ್ರಥಮವಾಗಿ ಹೋರಾಡಿದ ಕಾಲ ಕೂಡ ಇದಾಗಿತ್ತು.

ಇದರ ಜೊತೆಗೆ ಹೆಚ್ಚು ನಿಖರವಾದ ವಿಷಯಗಳನ್ನು ಜಗತ್ತಿಗೆ ತಿಳಿಸಬೇಕಾದರೆ ನಿರಂತರ ಸಂಶೋಧನೆ ಅವಶ್ಯಕತೆ ಇದೆ. ಸಂಬಂಧಪಟ್ಟ ಇಲಾಖೆಗಳನ್ನು ಒಟ್ಟುಗೂಡಿಸಿ ಒಂದು ಸಂಶೋಧನಾ ಕೇಂದ್ರವನ್ನು ಬಸವಕಲ್ಯಾಣದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ವಿಶ್ವದ ಪ್ರಪ್ರಥಮ ಸಂಸತ್ತಾದ ಮೂಲ ಅನುಭವ ಮಂಟಪದ ಜೊತೆಗೆ ಶರಣರ ಕುರುಹು ಇರುವ ಸ್ಥಳಗಳನ್ನು ಗುರುತಿಸಿ ಅನುಭವ ಮಂಟಪ ಕಾರಿಡಾರ್ ಯೋಜನೆ ಹಾಕಿಕೊಳ್ಳಬೇಕು.

ವಿಶ್ವದ ಸ್ಮಾರಕ ಮಾಡಲಿಕ್ಕೆ ಸುಮಾರು 5,000 ಕೋಟಿ ರೂಪಾಯಿಗಳನ್ನು ಮೀಸಲು ಇಡಬೇಕು. ವಿಶ್ವದ ಪ್ರಪ್ರಥಮ ಸಂಸದೀಯ ಕ್ಷೇತ್ರ ಜಾಗತಿಕ ಕೇಂದ್ರವಾಗಬೇಕೆಂಬುದು ರಾಜ್ಯದ ಮಠಾಧೀಶರ ಮತ್ತು ಜನತೆಯ ಒತ್ತಾಸೆಯಾಗಿದೆ. ಆದ ಕಾರಣ ತಕ್ಷಣವೇ ತಾವುಗಳು ಇದರ ಬಗ್ಗೆ, ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿತು.

ಇದನ್ನೂ ಓದಿ: ಬಿಜೆಪಿ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ: ಅರುಣ್ ಸಿಂಗ್

ಸಿಎಂ ಭೇಟಿ ಬಳಿಕ ಮಾತನಾಡಿದ ಬೀದರ್​ನ ತಡೋಳ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು, ಇಂದು ಸಿಎಂ ಭೇಟಿಯಾಗಿ ಬಸವಕಲ್ಯಾಣದಲ್ಲಿನ ಅನುಭವ ಮಂಟದ ಬಗ್ಗೆ ಮಾಹಿತಿ ನೀಡಿದ್ದೇವೆ. ಮೂಲ ಅನುಭವ ಮಂಟಪ‌ ಇರುವ ಬಗ್ಗೆಯೂ ದಾಖಲೆ ಕೊಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ‌ ಕೂಡ ಸಂಪೂರ್ಣವಾಗಿ ಸಮಾಲೋಚನೆ ಮಾಡುವುದಾಗಿ ತಿಳಿಸಿದ್ದಾರೆ. ಪುರಾತತ್ವ ಇಲಾಖೆ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಪುರಾತತ್ವ ಇಲಾಖೆ ಬಳಿ ವರದಿ ತರಿಸಿಕೊಂಡು ಮುಂದಿನ ತೀರ್ಮಾನ ಮಾಡುತ್ತಾರೆಂದು ಸಿಎಂ ಹೇಳಿದ್ದಾರೆ ಎಂದರು.

ಬಸವ ಕಾರಿಡಾರ್ ಕ್ರಿಯಾ ಯೋಜನೆ : ಪ್ರಧಾನಿಗಳ ಜೊತೆ ಚರ್ಚಿಸಿ ಬಸವ ಕಾರಿಡಾರ್ ಕ್ರಿಯಾ ಯೋಜನೆ ಮಾಡುವ ಚಿಂತನೆಯನ್ನು ಸಿಎಂ ಮಾಡಿದ್ದಾರೆ. ವಿಶ್ವದಲ್ಲಿಯೇ ಬಸವಕಲ್ಯಾಣ ವಿಶಿಷ್ಟವಾದ ತಾಣವಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಚಿಂತನೆ ಶ್ಲಾಘನೀಯವಾಗಿದೆ. ನಮ್ಮ ಬೇಡಿಕೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆ ಮಠಾಧೀಶರ ನಡಿಗೆ ಮೂಲ ಅನುಭವ ಮಂಟಪದ ಕಡೆಗೆ ಎನ್ನುವ ಹೋರಾಟ ಇಲ್ಲಿಗೆ ಸಂಪನ್ನವಾಗಿದೆ. ನಮ್ಮ ಬೇಡಿಕೆ ಕಡೆಗಣಿಸಿದಲ್ಲಿ ಜೂನ್ 12ಕ್ಕೆ‌ ಪಾದಯಾತ್ರೆ ಮಾಡುವ ಬಗ್ಗೆ ನಾಳೆ ಬಸವಕಲ್ಯಾಣದಲ್ಲಿ ನಡೆಯುವ ಚಿಂತನ- ಮಂಥನ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.