ಬೆಂಗಳೂರು : ಕರ್ನಾಟಕದ ಯುವರತ್ನ ಪುನೀತ್ ರಾಜ್ಕುಮಾರ್ ದೈವಾಧೀನರಾದ ಹಿನ್ನೆಲೆ ಕೇಂದ್ರ ಕಾರಾಗೃಹದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಪ್ಪು ಆತ್ಮಕ್ಕೆ ಕೈದಿಗಳು ಶಾಂತಿ ಕೋರಿದ್ದಾರೆ. ಶನಿವಾರದಂದು ಜೈಲಿನ ಅಧಿಕಾರಿಗಳ ಜೊತೆಗೂಡಿ ಕ್ಯಾಂಡಲ್ ಹಚ್ಚಿ ಸಂತಾಪ ಸೂಚಿಸಲಾಯಿತು.
ಪುನೀತ್ ಆತ್ಮಕ್ಕೆ ಶಾಂತಿಕೋರಿದ ನೂರಾರು ಮಂದಿ ಕೈದಿಗಳಿಗೆ ಸೂಪರಿಂಟೆಂಡೆಂಟ್ ರಂಗನಾಥ್ ಮತ್ತಿತರ ಅಧಿಕಾರಿಗಳು ಸಾಥ್ ನೀಡಿದರು.
ಓದಿ: ಮೈಸೂರು : ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ