ಬೆಂಗಳೂರು: ಗುತ್ತಿಗೆ ವಿವಾದದಿಂದ ಸುದ್ದಿಯಲ್ಲಿರುವ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ದತೆ ನಡೆದಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಂದ ನಿರಾಣಿ ಶುಗರ್ಸ್ ಅಧ್ಯಕ್ಷ ಮುರುಗೇಶ್ ನಿರಾಣಿ ಸಲಹೆಗಳನ್ನು ಪಡೆದುಕೊಂಡರು.
![ಹೆಚ್ಡಿಡಿ ಆಶೀರ್ವಾದ ಪಡೆದ ನಿರಾಣಿ](https://etvbharatimages.akamaized.net/etvbharat/prod-images/kn-bng-09-nirani-hdd-smk-house-visit-script-7208080_06082020231708_0608f_1596736028_477.jpg)
ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಸದಾಶಿವನಗರದಲ್ಲಿರುವ ಎಸ್.ಎಂ. ಕೃಷ್ಣ ನಿವಾಸಕ್ಕೆ ಮುರುಗೇಶ್ ನಿರಾಣಿ ಭೇಟಿ ನೀಡಿದರು.
![ಕೃಷ್ಣ ಆಶೀರ್ವಾದ ಪಡೆದ ನಿರಾಣಿ](https://etvbharatimages.akamaized.net/etvbharat/prod-images/kn-bng-09-nirani-hdd-smk-house-visit-script-7208080_06082020231708_0608f_1596736028_451.jpg)
ಐತಿಹಾಸಿಕ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಹಾಗೂ 5000 ಟಿಸಿಡಿ ಸಾಮರ್ಥ್ಯ ವಿಸ್ತರಣೆ ಭೂಮಿ ಪೂಜೆ ಮತ್ತು ಬಾಯ್ಲರ್ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭಾಷಯ ಸ್ವೀಕರಿಸಿ, ಆಶೀರ್ವಾದ ಪಡೆದುಕೊಂಡರು. ನಂತರ ಕಾರ್ಖಾನೆ ಮುನ್ನಡೆಸುವ ಕುರಿತು ಮಾರ್ಗದರ್ಶನ ಪಡೆದುಕೊಂಡರು.