ETV Bharat / state

ಸಿಎಂ ಬದಲಾವಣೆ ಮಾಡಿ ಎಂದು ಅರುಣ್ ಸಿಂಗ್ ಬಳಿ ಬೇಡಿಕೆಯಿಟ್ಟಿಲ್ಲ: ಜಯಮೃತ್ಯುಂಜಯ ಸ್ವಾಮೀಜಿ - Bangalore

ಸಿಎಂ ಬದಲಾವಣೆ ಮಾಡಿ ಎಂದು ಅರುಣ್ ಸಿಂಗ್ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಯಾರನ್ನೂ ಕೂರಿಸುವ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

panchamsali swamiji
ಅರುಣ್ ಸಿಂಗ್ ಭೇಟಿ ಮಾಡಿದ ಜಯಮೃತ್ಯುಂಜಯ ಸ್ವಾಮೀಜಿ
author img

By

Published : Jun 18, 2021, 11:07 AM IST

ಬೆಂಗಳೂರು: ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ನಾಯಕತ್ವದ ಬಗ್ಗೆ ಚರ್ಚೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿ ಸಿಎಂ ಬದಲಾವಣೆ ಮಾಡಿ ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ. ನಮ್ಮವರನ್ನು ಕೂರಿಸುವ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಮಾರಕೃಪಾ ಅತಿಥಿ ಗೃಹದ ಮುಂದೆ ಮಾಧ್ಯಮಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಠಾಧೀಶರಾಗಿ ನಮಗೆ ಅಧಿಕಾರವಿಲ್ಲ. ಅದು ಹೈಕಮಾಂಡ್‌‌ಗೆ ಬಿಟ್ಟ ವಿಚಾರ. ಸ್ವಾಮೀಜಿಗಳು ಕೇವಲ ಬೆಡ್ ಸಿಕ್ಕಿಲ್ಲ ಅಂತ ಹೋರಾಟ ಮಾಡಬೇಕು. ಸಿಎಂ ಉಳಿಸುವ ಅಥವಾ ಅವರನ್ನು ಬೆಳೆಸುವ ಅಧಿಕಾರ ನಮಗಿಲ್ಲ. ಸಿಎಂ ಬದಲಿಸುವ ವಿಚಾರ ಹೈಕಮಾಂಡ್ ಮಾಡಿದ್ದರೆ ಸಲಹೆ ನೀಡಬಹುದು ಅಷ್ಟೇ. ಬದಲಿಸಿ ಎಂದು ಒತ್ತಡ ಹಾಕುವ ಹಕ್ಕು ನಮಗಿಲ್ಲ ಎಂದರು.

ಲಿಂಗಾಯತ ಸಮಾಜ ಬಹುನಾಯಕತ್ವ ಬೆಂಬಲಿಸಿದೆ. ಸಮಾಜದಲ್ಲಿ ಜಿಲ್ಲೆಗೊಬ್ಬ ನಾಯಕರಿದ್ದಾರೆ. ಅನ್ಯ ಸಮುದಾಯದವರಿಗೆ ಮನವಿ ಮಾಡುತ್ತೇನೆ. ಲಿಂಗಾಯತರಲ್ಲಿ ನಾಯಕರಿಲ್ಲ ಅಂತ ಹೇಳಬಾರದು. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಬೊಮ್ಮಾಯಿ ಸಿಎಂ ಆಗಿದ್ದರು. ನಂತರ ಅನೇಕ ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಅಧಿಕಾರ ಸಿಗಲಿಲ್ಲ. ಆದರೆ ಸಿದ್ಧಗಂಗಾ ಶ್ರೀಗಳ ಆಶೀರ್ವಾದದಿಂದ ಯಡಿಯೂರಪ್ಪ ಸಿಎಂ ಹುದ್ದೆಗೆ ಏರಿದರು ಎಂದು ತಿಳಿಸಿದರು.

ಯಡಿಯೂರಪ್ಪರನ್ನು ಒಪ್ಪಿ 4 ಬಾರಿ ಸಿಎಂ ಮಾಡಿದ್ದೆವು. ಈಗ ಲಿಂಗಾಯತರಲ್ಲಿ ನಾಯಕರಿಲ್ಲ ಎಂದು ಬಿಂಬಿಸೋದು ಬೇಡ. ನಮ್ಮ ಉತ್ತರ ಕರ್ನಾಟಕದಲ್ಲಿ ನಾಯಕರು ತುಂಬಿ ತುಳುಕುತ್ತಿದ್ದಾರೆ. ಸಮರ್ಥ ನಾಯಕರನ್ನು ಈಗಲೇ ಹುಟ್ಟುಹಾಕಬೇಕು. ಸಿಎಂ ಬದಲಾವಣೆ ಮಾಡಿದ್ದೇ ಆದಲ್ಲಿ ಉತ್ತರ ಕರ್ನಾಟಕದವರಿಗೆ ನೀಡಬೇಕು. ಅದರಲ್ಲೂ ಲಿಂಗಾಯತರನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಸುದ್ದಿ ಮಾಧ್ಯಮಗಳಲ್ಲಿ ನಿನ್ನೆ ರಾತ್ರಿಯಿಂದ ಹರಿದಾಡಿದ್ದ ಸುದ್ದಿ:

ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಹುದ್ದೆ ನೀಡಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಬೇಡಿಕೆಯಿಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾದ ಕಾರಣ ಅವರ ಹೆಸರಿನಲ್ಲಿ ಹಲವರು ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಗೌರವದಿಂದ ನಿವೃತ್ತಿ ತಗೆದುಕೊಂಡು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಹರಿದಾಡಿದ್ದವು.

ಪಂಚಮಸಾಲಿ ಸಮಾಜದಲ್ಲಿ ಹಲವು ಜನ ಸಮರ್ಥರಿದ್ದಾರೆ. ಸಮಾಜ ಯಡಿಯೂರಪ್ಪ ಅವರನ್ನು 4 ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆ ಸಮಾಜದ ಋಣವನ್ನು ಯಡಿಯೂರಪ್ಪ ತೀರಿಸಲಿಲ್ಲ. ಬಹುಸಂಖ್ಯಾತ ಪಂಚಮಸಾಲಿ ಸಮಾಜವನ್ನು ಬಳಸಿಕೊಂಡು ಅಧಿಕಾರದ ಗದ್ದುಗೆಗೆ ಏರಿದ ಯಡಿಯೂರಪ್ಪ ಸಮಾಜವನ್ನು ಮರೆತು, ಸಮಾಜದ ನಾಯಕರಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದ್ದು ನಮಗೆ ಬೇಸರ ತರಿಸಿದೆ.

ಮೀಸಲಾತಿ ಹೋರಾಟದ ಸಮಯದಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಆಡಿರುವ ಮೋಸದ ಆಟ ಸಮಾಜ ಯಾವತ್ತೂ ಮರೆಯುವುದಿಲ್ಲ ಎಂದು ಅರುಣ್ ಸಿಂಗ್ ಮುಂದೆ ಸ್ವಾಮೀಜಿ ಆರೋಪಿಸಿದ್ದಾರೆ ಎಂದು ಸುದ್ದಿಯಾಗಿತ್ತು.

ಯಡಿಯೂರಪ್ಪ ಅವರ ನಂತರ ನಾಯಕತ್ವ ವಹಿಸಿಕೊಳ್ಳಲು ನಮ್ಮ ಸಮಾಜ ಸಮರ್ಥವಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಇದನ್ನು ಮನಗಾಣಬೇಕು. ಮುಖ್ಯಮಂತ್ರಿ ಬದಲಾಯಿಸುವ ನಿರ್ಧಾರ ಹೈಕಮಾಂಡ್ ತೆಗೆದುಕೊಂಡರೆ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ ಎನ್ನಲಾಗಿತ್ತು.

ಓದಿ: Shocking: ಅರುಣ್ ಸಿಂಗ್ ಭೇಟಿ ಮಾಡಿದ ಪಂಚಮಸಾಲಿ ಸ್ವಾಮೀಜಿ... ಬಿಎಸ್​ವೈ ಬದಲಾಯಿಸಲು ಒತ್ತಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.