ETV Bharat / state

ಪದ್ಮನಾಭನಗರದಲ್ಲಿ ಡಿಕೆ ಸೋದರರ ಪ್ರತಿತಂತ್ರ: ಸುರೇಶ್​ ಸ್ಪರ್ಧೆ ಸಾಧ್ಯತೆ ಈಗಲೂ ಜೀವಂತ! - ಪದ್ಮನಾಭನಗರ ಅಭ್ಯರ್ಥಿ ಯಾರು

ಡಿಕೆ ಸೋದರರು ಬಿಜೆಪಿಗೆ ಹಾಗೂ ಆರ್. ಅಶೋಕ್​ಗೆ ಶಾಕ್ ನೀಡುವ ಕಾರ್ಯವೊಂದನ್ನು ಮಾಡಿದ್ದಾರೆ. ಪದ್ಮನಾಭನಗರ ಅಭ್ಯರ್ಥಿ ಯಾರು ಎನ್ನುವುದನ್ನು ಈಗಲೂ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.

Padmanabhanagar constituency
ಪದ್ಮನಾಭನಗರದಲ್ಲಿ ಡಿಕೆ ಸೋದರರ ಪ್ರತಿತಂತ್ರ...
author img

By

Published : Apr 18, 2023, 2:32 PM IST

ಬೆಂಗಳೂರು: ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಒಳ ಆಟಗಳು ಒಂದೊಂದೇ ಹೊರಬೀಳುತ್ತಾ ಹೋಗುವುದು ಸಾಮಾನ್ಯ. ಒಬ್ಬರನ್ನು ಹಣಿಯಲು ಇನ್ನೊಬ್ಬರು ಬ್ರಹ್ಮಾಸ್ತ್ರಗಳನ್ನೇ ದಾಳವಾಗಿ ಬಳಸುತ್ತಾರೆ. ಇಂತಹದ್ದೇ ಒಂದು ಹೊಸ ಅಸ್ತ್ರ ಪ್ರಯೋಗಕ್ಕೆ ಡಿಕೆ ಬ್ರದರ್ಸ್ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ರಾಜ್ಯ ರಾಜಕಾರಣದಲ್ಲಿ ಈ ಸಾರಿ ಅಚ್ಚರಿ ಮೂಡಿಸುವ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಮುಖ ಒಕ್ಕಲಿಗ ನಾಯಕ ಆರ್. ಅಶೋಕ್ ಅವ​ರನ್ನು ಕನಕಪುರದಲ್ಲಿ ಕಣಕ್ಕಿಳಿಸಿದೆ. ತಮ್ಮ ಕ್ಷೇತ್ರವಾದ ಪದ್ಮನಾಭನಗರ ಜತೆ ಅಶೋಕ್ ಕನಕಪುರದಿಂದಲೂ ಕಣಕ್ಕಿಳಿಯುವಂತೆ ಬಿಜೆಪಿ ಹೈಕಮಾಂಡ್ ಮಾಡಿದೆ. ಈ ಪ್ರಕಟಣೆಯಿಂದಲೇ ತೀವ್ರ ಆಘಾತಕ್ಕೆ ಒಳಗಾಗಿದ್ದ ಅಶೋಕ್, ಹೇಗೋ ಪದ್ಮನಾಭನಗರದಲ್ಲಿ ಗೆದ್ದರೆ ಸಾಕು ಎಂದು ಕನಕಪುರದತ್ತ ಮುಖವನ್ನೂ ಹಾಕುತ್ತಿಲ್ಲ. ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪ್ರಚಾರ ಮಾಡುತ್ತಿದ್ದಾರೆ.

ಆದರೆ ಅಶೋಕ್​ಗೆ ದೊಡ್ಡ ಆಘಾತ ನೀಡುವ ಸುದ್ದಿಯನ್ನು ಡಿಕೆ ಸೋದರರು ಈಗಲೂ ಜೀವಂತವಾಗಿ ಉಳಿಸಿದ್ದಾರೆ. ಆರ್.ಅಶೋಕ್ ವಿರುದ್ಧ ಪದ್ಮನಾಭನಗರದಲ್ಲಿ ಸಂಸದ ಡಿ.ಕೆ. ಸುರೇಶ್​ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಇದರಿಂದ ಅಶೋಕ್​ ಅವರಿಗೆ ಇದ್ದ ಅಲ್ಪಸ್ವಲ್ಪ ವಿಶ್ವಾಸವೂ ಹೊರಟು ಹೋಗಿತ್ತು. ಆದರೆ, ಈಗಾಗಲೇ ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿತರಾಗಿರುವ ರಘುನಾಥ್ ನಾಯ್ಡುಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿ ಫಾರಂ ನೀಡಿದರು. ಇದರಿಂದ ಅಶೋಕ್ ಕೊಂಚ ನಿರಾಳರಾದರು. ಆದರೆ ಈಗ ಅವರಿಗೆ ಹಾಗೂ ಬಿಜೆಪಿಗೆ ಆಘಾತ ನೀಡುವ ಸುದ್ದಿ ಹೊರ ಬಿದ್ದಿದೆ.

ಡಿಕೆ ಸೋದರರ ದಾಳ: ಡಿಕೆ ಸೋದರರು ಬಿಜೆಪಿಗೆ ಹಾಗೂ ಆರ್. ಅಶೋಕ್​ಗೆ ಶಾಕ್ ನೀಡುವ ಕಾರ್ಯವೊಂದನ್ನು ಮಾಡಿದ್ದಾರೆ. ಪದ್ಮನಾಭನಗರ ಅಭ್ಯರ್ಥಿ ಯಾರು ಎನ್ನುವುದನ್ನು ಈಗಲೂ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಆರ್. ಅಶೋಕ್​ಗೆ ದೊಡ್ಡ ಏಟು ಕೊಡುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಿರುವ ಡಿಕೆ ಸಹೋದರರು ಪದ್ಮನಾಭನಗರದಲ್ಲಿ ರಘುನಾಥ ನಾಯ್ಡುಗೆ ಬಿ ಫಾರಂ ನೀಡಿ ಹಾಗೆಯೇ ವಾಪಸ್ ಪಡೆದು ಇರಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ರಘುನಾಥ ನಾಯ್ಡುಗೆ ಬಿ ಫಾರಂ ಕೊಟ್ಟು ವಾಪಸ್ ಪಡೆದಿರುವ ಡಿಕೆಶಿ, ಅಭ್ಯರ್ಥಿ ಬದಲಾಗದಿದ್ದರೆ ಮಾತ್ರ ಬಿ ಫಾರಂ ಕೊಡುವುದಾಗಿ ತಿಳಿಸಿದ್ದಾರೆ. ಮೂರು ದಿನದ ಹಿಂದೆ ಬೆಳಗ್ಗೆ ಬಿ ಫಾರಂ ಪಡೆಯಲು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ರಘುನಾಥ್ ನಾಯ್ಡುಗೆ ಬಿ ಫಾರಂ ನೀಡದೇ ಕಾಯಿಸಿ ಕಳುಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಜೆ ಮತ್ತೆ ಕರೆಸಿ ಬಿ ಫಾರಂ ನೀಡಿದ್ದರು.

ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ್ದ ನಾಯ್ಡು, ತಾವು ಡಿ.ಕೆ. ಸುರೇಶ್​ ಸ್ಪರ್ಧೆ ಮಾಡುವುದಾದರೆ ಕ್ಷೇತ್ರ ತ್ಯಾಗಕ್ಕೆ ಸಿದ್ಧ ಎಂದಿದ್ದರು. ಆದರೆ, ಬಿ ಫಾರಂ ನೀಡಿದ್ದ ಡಿಕೆಶಿ ಫೋಟೋ ತೆಗೆಸಿಕೊಂಡು, ಆ ಬಳಿಕ ವಾಪಸ್ ಪಡೆದಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ನಾಮಪತ್ರ ಸಲ್ಲಿಕೆಗೂ ಮೊದಲೂ ಕ್ಯಾಂಡಿಡೇಟ್ ಬದಲಾಗದಿದ್ದರೆ ಬಿ ಫಾರಂ ಕೊಡುತ್ತೇನೆ ಎಂದಿರುವ ಡಿಕೆಶಿ ಈಗಲೂ ಆರ್. ಅಶೋಕ್​ಗೆ ಒಂದು ಭಯ ಉಳಿಸಿಯೇ ಬಿಟ್ಟಿದ್ದಾರೆ.

ಏ.17 ರಂದು ರಾತ್ರಿ ಬಂದು ಬಿ ಫಾರಂ ಮತ್ತೆ ತೆಗೆದುಕೊಂಡು ಹೋಗುವಂತೆ ಡಿಕೆಶಿ ಅವರು ನಾಯ್ಡುಗೆ ಸೂಚನೆ ನೀಡಿ ಕಳಹಿಸಿದ್ದರು ಎನ್ನಲಾಗಿದ್ದು. ಅದರಂತೆ ರಘುನಾಥ ನಾಯ್ಡು ಏ.19 ರಂದು ನಾಮ ಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಸದ್ಯ ಬಿ ಫಾರಂ ಇನ್ನೂ ಕೈಗೆ ಸಿಗದಿದ್ದಕ್ಕೆ ಗೊಂದಲದಲ್ಲಿದ್ದು ಏನು ಮಾಡಬೇಕೆಂದು ಅರಿವಾಗದೇ ಗೊಂದಲದಲ್ಲಿದ್ದಾರೆ.

ಹೈಕಮಾಂಡ್​​ಗೆ ಕಾಂಗ್ರೆಸ್ ಮನವಿ ಮಾಡಿದೆ. ಅಲ್ಲಿಂದ ಸಮ್ಮತಿ ಸಿಕ್ಕತೆ ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿ ಬದಲಾವಣೆಯ ಸಾಧ್ಯತೆ ಇದೆ. ಕನಕಪುರದಲ್ಲಿ ಡಿಕೆ ತಮಗೆ ಟಕ್ಕರ್ ಕೊಡಲು ಸಜ್ಜಾಗಿರುವ ಆರ್‌. ಅಶೋಕ್‌ ಅವರನ್ನು ಪದ್ಮನಾಭನಗರದಲ್ಲಿ ಕಟ್ಟಿಹಾಕಲು ಡಿಕೆ ಸಹೋಹರರು ಚಿಂತನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಸದ ಡಿಕೆ ಸುರೇಶ್ ಅವರನ್ನು ಅಖಾಡಕ್ಕೆ ಇಳಿಸುವ ಬಗ್ಗೆ ಚರ್ಚೆಗಳು ಕೂಡಾ ನಡೆಯುತ್ತಿದ್ದು, ಒಂದು ವೇಳೆ ಹೈಕಮಾಂಡ್ ಅಸ್ತು ಎಂದರೆ ಕೊನೆಯ ಕ್ಷಣದಲ್ಲಿ ಪದ್ಮನಾಭನಗರದಲ್ಲಿ ಅಭ್ಯರ್ಥಿ ಬದಲಾವಣೆಯಾಗುವುದು ಖಚಿತ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಪದ್ಮನಾಭನಗರ ಕೈ ಅಭ್ಯರ್ಥಿ ರಘುನಾಥ್ ನಾಯ್ಡು ಸೇರಿ 50 ಮಂದಿಗೆ 'ಬಿ' ಫಾರಂ ನೀಡಿದ ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.