ETV Bharat / state

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಜನರಿಗೆ ಆಕ್ಸಿಜನ್ ವ್ಯವಸ್ಥೆ: ಸಚಿವ ವಿ.ಸೋಮಣ್ಣ - ಕೋವಿಡ್ -19 ನಿಯಂತ್ರಣ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆಕ್ಸಿಜನ್ ಘಟಕ ಆರಂಭಿಸುತ್ತೇವೆ. ಇದರ ಜೊತೆಗೆ ಶವ ಸಾಗಿಸಲು ವಾಹನ ವ್ಯವಸ್ಥೆ ಮಾಡಲಾಗುವುದು. ರೆಮ್​ಡಿಸಿವಿರ್ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತುಕತೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದರು.

v somanna
v somanna
author img

By

Published : Apr 29, 2021, 3:22 PM IST

ಬೆಂಗಳೂರು: ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಕೋವಿಡ್ -19 ನಿಯಂತ್ರಣ ಮಾಡುವ ಕುರಿತು ವಿಕಾಸಸೌಧದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆಯಿಂದ ಗೋವಿಂದರಾಜನಗರದಲ್ಲಿ ಆಕ್ಸಿಜನ್ ಘಟಕ ಆರಂಭ ಮಾಡುತ್ತೇವೆ. ಇದರ ಜೊತೆಗೆ ಶವ ಸಾಗಾಣಿಕೆ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾಹನ ವ್ಯವಸ್ಥೆ ಮಾಡಲಾಗುವುದು. ಇನ್ನು ರೆಮ್​ಡಿಸಿವಿರ್ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತುಕತೆ ಮಾಡಲಾಗುವುದು ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ಸುದ್ದಿಗೋಷ್ಠಿ

ಸಿವಿ ರಾಮನ್ ನಗರ ಸೇರಿ ಎಲ್ಲೆಲ್ಲಿ ಬೆಡ್‌ಗಳನ್ನು ವ್ಯವಸ್ಥೆ ಮಾಡಬೇಕೋ ಅಲ್ಲಿ ವ್ಯವಸ್ಥೆ ಮಾಡಲಾಗುವುದು. ಆರ್‌ಟಿಪಿಸಿಆರ್ ನೆಗೆಟಿವ್ ಬಂದು, ಉಸಿರಾಟದ ತೊಂದರೆ ಇದ್ದರೆ ಬಿಯು ನಂಬರ್ ಇಲ್ಲದೇ ಇದ್ದರೂ ಕೂಡಾ ಅಡ್ಮಿಟ್ ಮಾಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಕೂಡಾ ಮಾತನಾಡಲಾಗುವುದು. ವಿಧಾನಸಭಾ ಕ್ಷೇತ್ರದ ಶಾಸಕರುಗಳ ಜೊತೆ ಕೂಡಾ ಮಾತನಾಡಲಾಗುವುದು ಎಂದು ಹೇಳಿದರು.

ಪೂರ್ವ ವಲಯದ 7 ವಿಧಾನಸಭಾ ಕ್ಷೇತ್ರದ ಜ‌ನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, 2-3 ತೀರ್ಮಾನ ತೆಗೆದುಕೊಂಡಿದ್ದೇವೆ. ಅಂಬೇಡ್ಕರ್ ಮೆಡಿಕಲ್ ಕಾಲೇಜು ಸಂಪೂರ್ಣ ಕೋವಿಡ್ ಆಸ್ಪತ್ರೆ ಮಾಡಲಿದ್ದೇವೆ. ಅಲ್ಲಿ 400 ಬೆಡ್ ಇದ್ದು, 300 ಆಕ್ಸಿಜನ್ ಬೆಡ್ ನೀಡಲಾಗಿತ್ತು. ಈಗ 150 ಆಕ್ಸಿಜನ್ ಬೆಡ್‌ಗಳನ್ನು ಕೂಡ ತೆಗೆದುಕೊಳ್ಳುತ್ತಿದ್ದೇವೆ. ಪುಲಿಕೇಶಿನಗರ ಹಾಗೂ ಸರ್ವಜ್ಞ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು. ಚರಕ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಮಾಡಲಾಗುವುದು‌. ಎಲ್ಲ ರೀತಿಯ ಸಿದ್ಧತೆ ಮಾಡಲಾಗುತ್ತಿದೆ. ಶಾಂತಿನಗರದಲ್ಲಿ 175 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ತಿಳಿಸಿದರು.

ನಾಳೆಯೊಳಗೆ ಬೆಡ್ ಹಾಗೂ ಮೆಡಿಸಿನ್ ಬಗ್ಗೆ ಸರಳೀಕರಣ ಮಾಡಲಾಗುವುದು. ವ್ಯಾಕ್ಸಿನೇಷನ್ ಕುರಿತು ಮುಖ್ಯಮಂತ್ರಿಗಳು ಇಂದು ಸಭೆ ಮಾಡಿದ್ದಾರೆ. ಮೇ 1 ರಿಂದ 18 ವರ್ಷದ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ನೀಡಲಾಗುವುದು. ಈ ಬಗ್ಗೆ ಎಲ್ಲ ಸಿದ್ಧತೆಗಳನ್ನು ಮುಖ್ಯಮಂತ್ರಿಗಳು ಮಾಡಿಕೊಳ್ಳುತ್ತಿದ್ದಾರೆ. ಅದನ್ನು ಅವರೇ ತಿಳಿಸುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.