ETV Bharat / state

ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಮುಂದುವರಿದ ನಾಲ್ಕನೇ ದಿನದ ಅಹೋರಾತ್ರಿ ಧರಣಿ - ಈಟಿವಿ ಭಾರತ ಕನ್ನಡ

ಚಳವಳಿಯ ನಡುವೆ ಚಾಮರಾಜನಗರ ತಾಲೂಕಿನ ರೇವಣ್ಣ ಎಂಬ ರೈತ ಮರ ವೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

overnight-protest-by-sugarcane-growers-to-4th-day
ನಾಲ್ಕನೇ ದಿನದ ಅಹೋರಾತ್ರಿ ಧರಣಿ
author img

By

Published : Nov 25, 2022, 8:48 PM IST

ಬೆಂಗಳೂರು: ಕಬ್ಬು ಎಫ್​ಆರ್​ಪಿ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ನಿನ್ನೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿ ಯಾವುದೇ ತೀರ್ಮಾನ ಪ್ರಕಟಿಸದೇ ವಿಳಂಬ ಮಾಡುತ್ತಿರುವ ನೀತಿಯ ವಿರುದ್ಧ ಬೇಸರ ವ್ಯಕ್ತ ಪಡಿಸಿದರು. ಚಳವಳಿಯ ನಡುವೆ ಒಬ್ಬ ರೈತ, ಮಹಾರಾಣಿ ಕಾಲೇಜ್ ವೃತ್ತದ ಬಳಿ ಎತ್ತರದ ಮರವೇರಿ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ಕುಳಿತ ಪ್ರಸಂಗ ನಡೆಯಿತು.

ಚಾಮರಾಜನಗರ ತಾಲೂಕಿನ ರೇವಣ್ಣ ಚಳವಳಿಯ ನಡುವೆ ಮರ ವೇರಿದರು. ಈ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ಧರಣಿ ನಿರತ ರೈತರು ಓಡಿ ಹೋಗಿ ಕೆಳಕ್ಕೆ ಇಳಿದು ಬರುವಂತೆ ಮನವೊಲಿಸಿದರು.

overnight-protest-by-sugarcane-growers-to-4th-day
ಮರ ವೇರಿ ಸರ್ಕಾರದ ವಿರುದ್ಧ ಘೋಷಣೆ

ಬಗರಹುಕುಂ ಸಾಗುವಳಿ ಪತ್ರ ರೈತರಿಗೆ ನೀಡಬೇಕು: ಕಂದಾಯ ಇಲಾಖೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮನವಿ ಸ್ವೀಕರಿಸಲು ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಆಗಮಿಸಿದರು. ಧರಣಿ ಸಳಕ್ಕೆ ಬಂದು ಒತ್ತಾಯ ಪತ್ರ ಸ್ವೀಕರಿಸಿ ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬ್ಯಾಂಕಿನ ಸಾಲ ನೀಡುವಲ್ಲಿ ರೈತರಿಗೆ ಕಿರುಕುಳ: ಬ್ಯಾಂಕಿನ ಸಾಲ ನೀಡುವಲ್ಲಿ ರೈತರಿಗೆ ಕಿರುಕುಳ ಆಗುತ್ತಿರುವ ಬಗ್ಗೆ ಧರಣಿ ನಿರತ ಚಳುವಳಿಗಾರರ ಒತ್ತಾಯಕ್ಕೆ ಮಣಿದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ವಲಯ ಮುಖ್ಯಸ್ಥರು, ಇದೇ 29ರಂದು ರೈತ ಪ್ರತಿನಿಧಿಗಳು ಹಾಗೂ ಎಲ್ಲ ಬ್ಯಾಂಕಿನ ಮುಖ್ಯಸ್ಥರ ಸಭೆ ಕರೆದಿದ್ದಾರೆ. ಅಂದು ರೈತರ ಸಮಸ್ಯೆಗಳ ಪಟ್ಟಿಯನ್ನು ಸಭೆಯಲ್ಲಿ ಚರ್ಚಿಸಬಹುದು, ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.

ಬಾರದ ಸಚಿವ ಶಂಕರ್ ಪಾಟೀಲ್: ಸಕ್ಕರೆ ಸಚಿವ ಶಂಕರ್ ಪಾಟೀಲ್ ರವರು 5 ಗಂಟೆಗೆ ಧರಣಿ ಸ್ಥಳಕ್ಕೆ ಬರುತ್ತಾರೆ ಎಂಬ ಪೊಲೀಸರು ಸುದ್ದಿ ಧರಣಿ ನಿರತರಿಗೆ ತಿಳಿಸಿದರು. ಆದರೆ, ಅವರು ಬರದೇ ಇರುವುದಕ್ಕೆ ಮತ್ತೊಮ್ಮೆ ಪೊಲೀಸರು ಮತ್ತು ರೈತರ ನಡುವೆ ಅಸಮಾಧಾನಕ್ಕೆ ಕಾರಣವಾಯಿತು.

ಇಂದಿನ ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಸುರೇಶ್ ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಹತ್ತಳ್ಳಿ ದೇವರಾಜ್, ರಮೇಶ್ ಉಗರ್, ಹುಳುವಪ್ಪಬಳಗೇರಿ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆ ಉಂಡಿ ರಾಜಣ್ಣ, ಮಹದೇವಸ್ವಾಮಿ, ವೆಂಕಟೇಶ್, ಬರಡನಪುರ ನಾಗರಾಜ್ ಮುಂತಾದವರು ಇದ್ದರು.

ಇದನ್ನೂ ಓದಿ: ಬೇಡಿಕೆ ಈಡೇರಿಸುವಂತೆ ಕಬ್ಬು ಬೆಳೆಗಾರರ ಆಗ್ರಹ.. ಮಂಡ್ಯದಲ್ಲಿ ರೈತರ ಬೃಹತ್​ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.