ETV Bharat / state

ಮಠಾಧೀಶರಿಂದ ನಮ್ಮಲಿ ಅಧ್ಯಾತ್ಮಿಕ ಭಾವನೆಗಳು ಜಾಗೃತವಾಗಿ ಉಳಿದಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ..

ಕರ್ನಾಟಕ ರಾಜ್ಯ ಆಗಮಿಕರ ಪ್ರೋತ್ಸಾಹ ಸಮಿತಿಯಿಂದ ನಡೆದ 50ನೇ ಸುವರ್ಣ ಮಹೋತ್ಸವ ಕಾರ್ಯಕ್ರಮ - ಎಲ್ಲ ರೀತಿಯ ವಿದ್ಯೆಗಳಿರುವುದು ನಮ್ಮಲ್ಲಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು - ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

Vishweshwar Hegade Kageri
ಮಠಾಧೀಶರಿಂದ ನಮ್ಮಲಿ ಆಧ್ಯಾತ್ಮಿಕ ಭಾವನೆಗಳು ಜಾಗೃತವಾಗಿ ಉಳಿದಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ..
author img

By

Published : Feb 15, 2023, 9:59 PM IST

Assembly Speaker Vishweshwar Hegade Kageri inaugurated the program
ಕಾರ್ಯಕ್ರಮ ಉದ್ಘಾಟಿಸಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಧಾರ್ಮಿಕ, ಅಧ್ಯಾತ್ಮಕ ಭಾವನೆಗಳನ್ನು ನಮ್ಮೆಲ್ಲರಲ್ಲಿ ಸದಾ ಜಾಗೃತವಾಗಿಡಲು ಬೇಕಾದಂತಹ ಕಾರ್ಯಗಳನ್ನು ಎಲ್ಲ ಮಠಾಧೀಶರು ಹಾಗೂ ಪಂಡಿತರು ಕೈಗೊಂಡಿದ್ದಾರೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಕರ್ನಾಟಕ ರಾಜ್ಯ ಆಗಮಿಕರ ಪ್ರೋತ್ಸಾಹ ಸಮಿತಿಯಿಂದ 50ನೇ ಸುವರ್ಣ ಮಹೋತ್ಸವ ಕಾರ್ಯಕ್ರಮ ನಗರದ ಗಾಯನ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ 50ನೇ ಸುವರ್ಣ ಮಹೋತ್ಸವದಲ್ಲಿ ನಾವೆಲ್ಲಾ ಇಲ್ಲಿ ಸಂಭ್ರಮದಿಂದ ಸೇರಿದ್ದೇವೆ. ಸಂಘಟಿತ ಶಕ್ತಿಯನ್ನು ಪ್ರದರ್ಶಿಸಲು ಮುಂದಾಗಿದ್ದೇವೆ, ಇದೊಂದು ಮಾದರಿಯಾಗಿದೆ ಎಂದು ಹೇಳಿದರು.

ಈಗ ಇನ್ನಿಲ್ಲದ ವಿವಾದಗಳನ್ನು ಸೃಷ್ಟಿಸಿ ವಿಷಯಗಳನ್ನು ತಿರುಚುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ಅದಲ್ಲೇವನ್ನು ಬದಿಗಿರಿಸಿ. ನಮ್ಮ ಸಂಸ್ಕಾರ ಸಂಸ್ಕೃತಿ ಹಿನ್ನೆಲೆಯನ್ನು ಇಟ್ಟುಕೊಂಡು ರಚನಾತ್ಮಕ ಭಾವನೆ ಬೆಳಸಿಕೊಳ್ಳಬೇಕು. ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗುವ ಭಾವ ತರಬೇಕು. ಹಲವು ಸಂಕಲ್ಪಗಳನ್ನು ಮಾಡಬೇಕು ಇರುವಂತ ಸಮಸ್ಯೆಗಳನ್ನು ಸರ್ಕಾರದಿಂದ ಮುಂದೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

ಎಲ್ಲ ರೀತಿಯ ವಿದ್ಯೆಗಳಿರುವುದು ನಮ್ಮಲ್ಲಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು. ಜವಾಬ್ದಾರಿಯಿಂದ ಮುನ್ನಡೆಯಬೇಕು. ಧರ್ಮದ ರಕ್ಷಣೆಗಾಗಿ ನಮ್ಮ ಯತಿವರ್ಯರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಧಾರ್ಮಿಕ ಆಧ್ಯಾತ್ಮಿಕ ಭಾವನೆಗಳನ್ನು ನಮ್ಮೆಲರಲ್ಲಿ ಸದಾ ಜಾಗೃತವಾಗಿಡಲು ಬೇಕಾದಂತಹ ಕಾರ್ಯವನ್ನು ಎಲ್ಲ ಮಠಾಧೀಶರು, ಪಂಡಿತರು ಕೈಗೊಂಡಿದ್ದಾರೆ ಎಂದು ಹೇಳಿದರು.

ಯದುಗಿರಿ ಯತಿರಾಜ ಮಠದ ಸ್ವಾಮೀಜಿಗಳು ಕಾಶ್ಮೀರದಲ್ಲಿ ನಮ್ಮತನವನ್ನು ಪ್ರಕಟಿಸುವಂತಹ ಪ್ರಭಲವಾದ ಪ್ರಯತ್ನ ಮಾಡಿದ್ದಾರೆ. ಅವರ ಇಚ್ಛಾಶಕ್ತಿ ದೇವರ ಸಂಕಲ್ಪ ಅವರ ಮೂಲಕ ನಮ್ಮೆಲರಿಗೂ ಗೊತ್ತಾಗಿದೆ. ಹೆಮ್ಮೆ ಪಡುವಂತಹ ವಿಷಯವಾಗಿದೆ. ಸನಾತನದ ಧರ್ಮದ ಶಂಕರಾಚಾರ್ಯರು ಸೇರಿದಂತೆ ಹಲವು ಯತಿವರ್ಯರು ಕನಸು ಜ್ಞಾನಾರ್ಜನೆಯ ಸ್ಥಳ ಕಾಶ್ಮೀರವಾಗಿತ್ತು ಇದನ್ನು ಪುನರ್ ಸ್ಥಾಪಿಸುವ ಕೆಲಸವನ್ನು ಸ್ವಾಮೀಜಿಗಳು ಮಾಡಿದ್ದಾರೆ ಎಂದರು.

ಸೃಷ್ಟಿಯ ಸತ್ಯ ಅರಿಯಲು ಪ್ರಯತ್ನಿಸಬೇಕು: ಭಾರತದವರು ಜಗತ್ತಿಗೆ ಗುರುವಾದಂತವರು. ಸಂಪತ್ತು, ಅಸ್ತ್ರ ಶತ್ರಗಳಿಂದ, ಸೈನ್ಯದಿಂದ ನಮಗೆ ಆ ಸ್ಥಾನ ದೊರೆತಿರಲಿಲ್ಲ. ಜ್ಞಾನದ ಫಲವಾಗಿ ಆ ಸ್ಥಾನ ದೊರೆತಿತ್ತು. ನಾವು ಸಂಪತ್ತನ್ನು ಲೋಟಿ ಹೊಡೆದರೂ ನಾವೇನು ಚಿಂತೆ ಮಾಡಲಿಲ್ಲ. ವಸುದೈವ ಕುಟುಂಬಕಂ, ಸರ್ವೇ ಜನ ಸುಖಿನೋ ಭವಂತು ಸುಖಿನಃ ತರಲು ಪ್ರಯತ್ನಿಸಿದೆವು. ಋಷಿ ಪರಂಪರೆಯ ಎಲ್ಲರನ್ನೂ ನಾವು ಸ್ಮರಿಸಬೇಕು ಎಂದು ಹೇಳಿದರು.

ಭಕ್ತಿ ಮಾರ್ಗದಿಂದ ಜ್ಞಾನದ ಮಾರ್ಗಕ್ಕೆ ಹೋಗಬೇಕು ಎನ್ನುವುದು ತಿಳಿದಿದೆ. ಆದರೆ ಜ್ಞಾನ ಮಾರ್ಗದಲ್ಲಿ ಮುಂದೆ ಹೋಗುವ ಪ್ರಯತ್ನ ಮಾಡಬೇಕು. ಸೃಷ್ಟಿಯ ಸತ್ಯ ಅರಿಯಲು ಪ್ರಯತ್ನಿಸಬೇಕು. ಗುರುಗಳು ಇವನ್ನೆಲ್ಲ ಪೋಷಿಸಿಕೊಂಡು ಬಂದಿದ್ದೇವೆ. ಆದರೆ ಪರಕೀಯರ ದಾಳಿಯಿಂದ ಜ್ಞಾನದ ಮೂಲಗಳನ್ನು ಮರೆತಿದ್ದೇವೆ. ಕೆಲ ವಿಚಾರಗಳು ಆಕ್ರೋಶವನ್ನು ಸಹ ತರಿಸುತ್ತವೆ ಎಂದರು.

ಯದುಗಿರಿ ಯತಿರಾಜ ಮಠದ ಸ್ವಾಮೀಜಿ ಶ್ರೀಮನ್ ನಾರಾಯಣ ರಾಮಾನುಜ ಜಿಯರ್ ಮಾತನಾಡಿ, ಸ್ವಾಮಿ ರಾಮಾನುಜಚಾರ್ಯರು ಕರ್ನಾಟಕದಲ್ಲಿ ಸಂಚಾರ ಮಾಡಿ ಸುಮಾರು 22 ಸಾವಿರ ದೇವಸ್ಥಾನಗಳ ಜೀರ್ಣೋದ್ದಾರ ಮಾಡಿದರು. ದೇವಾಲಯವಿದ್ದರೆ ಮಾತ್ರ ಧರ್ಮದ ಸಾರ ಇರುತ್ತದೆ. ಧರ್ಮಾದ ರಕ್ಷಣೆ ಮಾಡುವಂತಹವರು ಅರ್ಚಕರು. ನಿತ್ಯ ಸನ್ಮಾನ ಅವರಿಗಾಗಬೇಕು ಎಂದು ಅಭಿಪ್ರಾಯಪಟ್ಟರು. ಸಂಕಲ್ಪ ಮಾಡುವಾಗ ದೇಶಕ್ಕೆ ಒಳಿತಾಗಲಿ ಎಂದು ಸಂಕಲ್ಪ ಮಾಡಬೇಕು. ರಾಷ್ಟ್ರ ಪ್ರಜ್ಞೆಯಾಗುತ್ತದೆ. ರಾಷ್ಟ್ರ ಪ್ರಜ್ಞೆ ಉದ್ದೀಪನವಾದಾಗ ಸಮಾಜದ ಒಳಿತು ಉಂಟಾಗುತ್ತದೆ. ನೆಮ್ಮದಿ ಮನೆಮಾಡುತ್ತದೆ. ದೇಶವಸ್ಥಾನಗಳು ತಮ್ಮ ನೋವು ನಲಿವನ್ನು ಹೇಳಿಕೊಳ್ಳುವ ಕೇಂದ್ರವಾಗಿದೆ. ಆದ್ದರಿಂದ ರಾಮಾನುಜರು ವೇದೋಕ್ತವಾದಂತಹ ಆರಾಧನೆಯಾಗಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವಾಲಯದಿಂದ ಶ್ರೀಗಳಿಗೆ ವೈ ಕ್ಯಾಟಗರಿ ಭದ್ರತೆ: ಭಾರತದ ಜ್ಞಾನ ಕೇಂದ್ರ ಕಾಶ್ಮೀರದಲ್ಲಿ ಶ್ರೀಗಳು ಹೊಸ ಹೆಜ್ಜೆ ಇಟ್ಟಿದ್ದು, ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಧೈರ್ಯವಾಗಿ ನೆರವೇರಿಸಿದ್ದಾರೆ. ಯದುಗಿರಿ ಯತಿರಾಜ ಮಠದ ಪೀಠಾಧಿಪತಿಗಳಿಗೆ ಸತತ ಒಂದು ವಾರದವರೆಗೂ ಇಂಟರ್‌ನೆಟ್ ಕರೆ ಮೂಲಕ ಬೆದರಿಕೆ ಹಾಕಿದ್ದರು. ಇನ್ನು ಯಾವುದೇ ತೊಂದರೆಯಾಗದಂತೆ ಕೇಂದ್ರ ಗೃಹ ಸಚಿವಾಲಯ ಶ್ರೀಗಳಿಗೆ ವೈ ಕ್ಯಾಟಗರಿ ಭದ್ರತಾ ರಕ್ಷಣೆ ಮಾಡಿಕೊಟ್ಟಿದ್ದಾರೆ ಎಂದು ಕಾರ್ಯಾಕ್ರಮದ ನಂತರ ಆಗಮ ಪಂಡಿತ ವಿದ್ವಾನ್ ಡಾ. ಎಸ್.ಆರ್. ಶೇಷಾದ್ರಿಭಟ್ಟರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಿಎಂ ಬಜೆಟ್​​​ದೊಳಗೆ ಒತ್ತು ನೀಡಲಿ: ಗದುಗಿನ ಸಿದ್ದರಾಮ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.