ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಎರಡು ಕಡೆ ಭಾರಿ ಮಳೆ ಹಾಗೂ 12 ಕಡೆಗಳಲ್ಲಿ ವಿಪರೀತ ಮಳೆ ದಾಖಲಾಗಿದ್ದು, ದಕ್ಷಿಣ ಒಳನಾಡಿನ ಮೂರು ಕಡೆ ಭಾರಿ ಮಳೆ ಹಾಗೂ ಒಂದು ಮಳೆ ಮಾಪನ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿಯೂ ಗುಡುಗು, ಮಿಂಚು ಸಹಿತ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 14 ರಿಂದ 17 ರವರೆಗೆ ಭಾರಿ ಮಳೆಯಾಗಲಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 18 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
![report](https://etvbharatimages.akamaized.net/etvbharat/prod-images/kn-bng-02-weather-report-7202707_13062021174258_1306f_1623586378_19.jpg)
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿಯೂ ಜೂನ್ 15 ರಿಂದ ಜೂನ್ 17 ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಾಗಲಕೋಟೆಯಲ್ಲಿ 16,17 ರಂದು ಭಾರಿ ಮಳೆ ನಿರೀಕ್ಷಿಸಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
![report](https://etvbharatimages.akamaized.net/etvbharat/prod-images/kn-bng-02-weather-report-7202707_13062021174258_1306f_1623586378_92.jpg)
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಜೂನ್ 14,15,16 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಜೂನ್ 17, 18 ರಂದು ಕಡಿಮೆ ತೀವ್ರತೆಯಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಇದನ್ನೂ ಓದಿ: ಇನ್ವರ್ಟರ್ ಬದಲಿಗೆ ಸಿಕ್ತು 5 ಕೆಜಿ ಕಲ್ಲು : ಅನಂತಪುರದ ಕೈಮಗ್ಗ ಉದ್ಯಮಿಗೆ ಅಮೆಜಾನ್ನಿಂದ ಮಹಾಮೋಸ