ETV Bharat / state

3ಕೃಷಿ ಕಾಯ್ದೆಗಳ ವಾಪಸ್‌.. ಇದು 2ನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕ ಜಯ : ಸಿದ್ದರಾಮಯ್ಯ ಬಣ್ಣನೆ

author img

By

Published : Nov 19, 2021, 4:14 PM IST

ಮುಂದಿನ ವರ್ಷ ಉತ್ತರಪ್ರದೇಶ, ಪಂಜಾಬ್, ಗೋವಾ ರಾಜ್ಯಗಳಿಗೆ ನಡೆಯುವ ಚುನಾವಣೆಗೆ ಹೆದರಿ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಬೆಲೆ ಇಳಿಸಿದ್ದೂ ಚುನಾವಣೆ ಸೋತಿದ್ದಕ್ಕೆ.‌ ಈಗ ಕಾಯ್ದೆ ವಾಪಸ್ ಪಡೆದಿದ್ದು, ರೈತರ ಹೋರಾಟಕ್ಕೆ ಮಣಿದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು..

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು : ಇದೀಗ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಇದು ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕ ಜಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಇಂದಿರಾಗಾಂಧಿ 104ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ಖಂಡಿಸಿ ರೈತರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಸಾಕಷ್ಟು ರೈತರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ವಿವಾದಿತ ಕೃಷಿ ಕಾಯ್ದೆಗಳನ್ನ ಕೇಂದ್ರ ವಾಪಸ್ ಪಡೆದ ಕುರಿತಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿರುವುದು..

ಇದೊಂದು ರಾಕ್ಷಸಿ ಸರ್ಕಾರವಾಗಿದೆ. ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವರ ಪುತ್ರನೇ ನಾಲ್ವರು ರೈತರ ಮೇಲೆ ಕಾರು ಹಾಯಿಸಿ ಕೊಲೆಗೈದಿದ್ದ. ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ರೈತರ ಮೇಲೆ ಕಾಳಜಿ ಇದ್ದಿದ್ದರೆ ಆ ಸಚಿವರನ್ನ ಅಮಾನತು ಮಾಡಬೇಕಿತ್ತು. ಸುಳ್ಳು ಹಾಗೂ ದುಡ್ಡಿನ ದರ್ಪದ ಮೇಲೆ ಈ ಸರ್ಕಾರ ನಡೆಯುತ್ತಿದೆ. ಇದು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

ಬಿಜೆಪಿ ಅಧಿಕಾರ ಈ ದೇಶದಿಂದ ಮತ್ತು ರಾಜ್ಯದಿಂದ ತೊಲಗುವವರೆಗೂ ನಾವು ನಿರಂತರ ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ಹಾಗೂ ಸಾರ್ವಜನಿಕರ ಪಾಲಿಗೆ ಇದು ಇನ್ನೊಂದು ಸ್ವಾತಂತ್ರ್ಯ ಹೋರಾಟ. ಈ ಸರ್ಕಾರ ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದೆ ಎಂದರೆ, ರೈತರು ಪ್ರತಿಭಟನೆ ಮತ್ತು ಹೋರಾಟವನ್ನು ಮಾಡಿದರೆ ಅವರನ್ನು ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ.

ಕೊನೆಗೂ ರೈತರ ಹೋರಾಟಕ್ಕೆ ಬೆಲೆ ಸಿಕ್ಕಿದ್ದು, ಕಾಯ್ದೆಯನ್ನು ಹಿಂಪಡೆಯಲಾಗಿದೆ. ರೈತರ ಪಾಲಿಗೆ ಇದು ನಿಜವಾದ ಸ್ವಾತಂತ್ರ್ಯ ದಿನ. ಇವರ ಸುಳ್ಳಿನ ಸಾಮ್ರಾಜ್ಯ ಹಾಗೂ ದರ್ಪದ ನಡೆ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.

ಇಂದಿರಾಗಾಂಧಿ ಬಗ್ಗೆ ಬಣ್ಣನೆ : ಇದೇ ಸಂದರ್ಭದಲ್ಲಿ ಇಂದಿರಾಗಾಂಧಿ ಜನ್ಮದಿನವನ್ನು ದೇಶವೇ ಆಚರಣೆ ಮಾಡಿ ಸ್ಮರಿಸುತ್ತಿದೆ. ಇಂದಿರಾ ಗಾಂಧಿ ಜಗತ್ತು ಕಂಡ ಅಪ್ರತಿಮ ನಾಯಕಿ.‌ ಇಂದಿರಾಗಾಂಧಿ ಅವರಿಗೆ ಸಣ್ಣವರಿರುವಾಗಲೇ ಸ್ವಾತಂತ್ರ್ಯ ಹೋರಾಟಗಾರರ ಒಡನಾಟ ಇತ್ತು.

ದೇಶದ ಬಡವರು, ದೀನ ದಲಿತರು, ‌ಮಹಿಳೆಯರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ಉಳುವವನೇ ಭೂಮಿ ಒಡೆಯ ಆಗಬೇಕು ಎಂಬ ನಿಟ್ಟಿನಲ್ಲಿ ಭೂಸುಧಾರಣಾ ಕಾಯ್ದೆ ತಂದವರು. ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದು ಮಾಡಿದ್ದು ಸಾಧನೆ. ಅಂದು ಇಂದಿರಾ ಗಾಂಧಿ ಬಡವರ ಪಾಲಿನ ಆಶಾಕಿರಣವಾದರೆ, ಇಂದು ನರೇಂದ್ರ ಮೋದಿ ಅವರ ಪಾಲಿಗೆ ಶಾಪವಾಗಿದ್ದಾರೆ ಎಂದರು.

ಬಿಜೆಪಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ನಿಮ್ಮ ಕೊಡುಗೆ ಏನು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ?ಆರ್‌ಎಸ್‌ಎಸ್ ಕೊಡುಗೆ ಏನು? ಎಷ್ಟು ಜನ ಭಾಗಿಯಾಗಿದ್ದೀರಿ? ಹುತಾತ್ಮರಾಗಿದ್ದೀರಿ? ಆಸ್ತಿ ಕಳೆದುಕೊಂಡಿದ್ದೀರಿ? ಹಾಗಿದ್ದರೂ ಕಾಂಗ್ರೆಸ್ ಕೊಡುಗೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಆದರೆ, ಗಾಂಧಿಯನ್ನು ಕೊಂದ ಗೋಡ್ಸೆಗೆ ದೇವಸ್ಥಾನ ಕಟ್ಟಿಸುತ್ತಾರೆ. ಇಂದು ನಾವು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದರು.

ಮೃತ ರೈತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ : ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. 10 ತಿಂಗಳಿಗೂ ಹೆಚ್ಚು ಕಾಲದಿಂದ ರೈತರು ನಿರಂತರವಾಗಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ಖಂಡಿಸಿ ಹೋರಾಟ ನಡೆಸುತ್ತಿದ್ದಾರೆ. ಹೋರಾಟದ ಸಂದರ್ಭ ಅಸ್ವಸ್ಥರಾಗಿ ಸಾಕಷ್ಟು ರೈತರು ಸಾವನ್ನಪ್ಪಿದ್ದಾರೆ.

ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಸಚಿವರ ಪುತ್ರನೇ ನಾಲ್ವರನ್ನು ಸಾಯಿಸಿದ್ದಾನೆ. ಈಗ ರೈತರ ಹೋರಾಟಕ್ಕೆ ಹೆದರಿ ಕಾಯ್ದೆ ವಾಪಸ್ ಪಡೆದಿದ್ದಾರೆ. ಕೇಂದ್ರ ಸರ್ಕಾರ ಜನ ವಿರೋಧಿ ಸರ್ಕಾರ. ದುಸ್ಸಾಹಸಕ್ಕೆ‌ ಕೈಹಾಕಿ ಕೈ ಸುಟ್ಟುಕೊಂಡಿದೆ ಎಂದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಸತ್ತವರಿಗೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ‌ ಮಾಡಿದರು.

ಮುಂದಿನ ವರ್ಷ ಉತ್ತರಪ್ರದೇಶ, ಪಂಜಾಬ್, ಗೋವಾ ರಾಜ್ಯಗಳಿಗೆ ನಡೆಯುವ ಚುನಾವಣೆಗೆ ಹೆದರಿ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಬೆಲೆ ಇಳಿಸಿದ್ದೂ ಚುನಾವಣೆ ಸೋತಿದ್ದಕ್ಕೆ.‌ ಈಗ ಕಾಯ್ದೆ ವಾಪಸ್ ಪಡೆದಿದ್ದು ರೈತರ ಹೋರಾಟಕ್ಕೆ ಮಣಿದು ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.