ETV Bharat / state

ಎರಡೂ ಹಬ್ಬ ಆಚರಿಸಿ ಸರ್ವಧರ್ಮ ಸಮನ್ವಯತೆ ಮೆರೆದ ವಿಪಕ್ಷ ನಾಯಕ ಸಿದ್ದರಾಮಯ್ಯ

author img

By

Published : Dec 25, 2020, 1:18 PM IST

ವೈಕುಂಠ ಏಕಾದಶಿ ಹಾಗೂ ಕ್ರಿಸ್ಮಸ್ ಹಬ್ಬ ಎರಡೂ ಒಂದೇ ದಿನ ಬಂದಿದ್ದರೂ ಎರಡೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಸರ್ವಧರ್ಮ ಸಮನ್ವಯತೆ ಮೆರೆದರು..

Opposition leader Siddaramaiah celebrates both festivals and followed sovereignty
ಎರಡೂ ಹಬ್ಬ ಆಚರಿಸಿ ಸರ್ವಧರ್ಮ ಸಮನ್ವಯತೆ ಮೆರೆದ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ವಧರ್ಮ ಸಮನ್ವಯತೆ ಮೆರೆದಿದ್ದಾರೆ. ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಕ್ರಿಶ್ಚಿಯನ್ ಬಾಂಧವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಕ್ರಿಸ್​ಮಸ್​ ಆಚರಿಸಿದ್ದಾರೆ. ಆನಂತರ ವೈಕುಂಠ ಏಕಾದಶಿ ಪ್ರಯುಕ್ತ ರಾಜಾಜಿನಗರ ಕೈಲಾಸ ವೈಕುಂಠ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಬೆಳಗ್ಗೆ ಕ್ರಿಶ್ಚಿಯನ್ ಧರ್ಮ ಗುರುಗಳು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಕ್ರಿಸ್​ಮಸ್​ ಹಬ್ಬದ ಶುಭಾಶಯ ಕೋರಿದರು.

ಇವರೊಂದಿಗೆ ಮಾಜಿ ಸಚಿವರಾದ ಜಮೀರ್ ಅಹಮದ್ ಮತ್ತಿತರರು ಹಾಜರಿದ್ದರು. ಇದಾದ ಬಳಿಕ ವೈಕುಂಠ ಏಕಾದಶಿ ಪ್ರಯುಕ್ತ ರಾಜಾಜಿನಗರದ ಕೈಲಾಸ ವೈಕುಂಠ ಮಹಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ವೈಕುಂಠ ಏಕಾದಶಿ ಹಾಗೂ ಕ್ರಿಸ್ಮಸ್ ಹಬ್ಬ ಎರಡೂ ಒಂದೇ ದಿನ ಬಂದಿದ್ದರೂ ಎರಡೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಸರ್ವಧರ್ಮ ಸಮನ್ವಯತೆ ಮೆರೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.