ಬೆಂಗಳೂರು: ತಿಮಿಂಗಿಲ ವಾಂತಿ (ಅಂಬಗ್ರೀಸ್) ಮಾರಾಟ ಮಾಡುತ್ತಿದ್ದ ಐವರನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುನೀತ್ ಕುಮಾರ್, ಮಧುಕುಮಾರ್, ನಂದೀಶ್, ಯೋಗೇಶ್ ಹಾಗೂ ಗೋಪಾಲ್ ಬಂಧಿತರು.
ಪೊಲೀಸರು, ಬಂಧಿತರಿಂದ ಬರೋಬ್ಬರಿ 17 ಕೋಟಿ ರೂ. ಬೆಲೆ ಬಾಳುವ ಅಂಬಗ್ರೀಸ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪೈಕಿ ಪ್ರಮುಖ ಆರೋಪಿ ಪ್ರಸನ್ನ ಅಲಿಯಾಸ್ ರ್ಯಾಬಿಟ್ ಪರಾರಿಯಾಗಿದ್ದಾನೆ. ಹೀಗಾಗಿ ಮಲ್ಲೇಶ್ವರಂ ಠಾಣಾ ಪೊಲೀಸರು ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಟ್ರೈನಿ IASನಿಂದ ಯುವತಿಗೆ ಲೈಂಗಿಕ ದೌರ್ಜನ್ಯ!?