ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಚಿತಾಗಾರ - ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ವ್ಯವಸ್ಥೆ ಆನ್‌ಲೈನ್ ಮೂಲಕ ಜಾರಿಗೆ ತರಲು ಸರ್ಕಾರ ಆದೇಶಿಸಿದೆ.
20 ಚಿತಾಗಾರಗಳಿಗೂ ಹೊಸ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿ, ಉಚಿತ ಆ್ಯಂಬುಲೆನ್ಸ್ ಹಾಗೂ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಯಾವುದೇ ಹಣ ವಸೂಲಿ ಮಾಡುವಂತಿಲ್ಲ ಎಂದು ಸೂಚಿಸಿದೆ.
ಆನ್‌ಲೈನ್ ಚಿತಾಗಾರ/ ಸ್ಮಶಾನ ನಿರ್ವಹಣಾ ವ್ಯವಸ್ಥೆ 24/7 ಕೆಲಸ ಮಾಡಬೇಕು. ಅಂತ್ಯಕ್ರಿಯೆ ಸ್ಥಳ ಮತ್ತು ಸಮಯ ನಿಗದಿಗೆ ಸಹಾಯವಾಣಿ ಸಂಖ್ಯೆ 8495998495 ಆಗಿದ್ದು, ಇದೇ ಸಂಖ್ಯೆಗೆ ವಾಟ್ಸ್ಆ್ಯಪ್ ಸಂದೇಶ ಕೂಡಾ ಕಳಿಸಬಹುದಾಗಿದೆ. ಸಹಾಯವಾಣಿಗೆ ಕರೆ ಮಾಡಿ, ಸ್ಥಳ-ಸಮಯ ನಿಗದಿ ಬಳಿಕ ಟೋಕನ್ ಸಂಖ್ಯೆ ಮೆಸೇಜ್ ಬರಲಿದೆ, ಅರ್ಧ ಗಂಟೆ ಮೊದಲು ಸ್ಮಶಾನ ತಲುಪಬೇಕು ಎಂದು ತಿಳಿಸಲಾಗಿದೆ.
ಇದರ ನಿರ್ವಹಣೆ ಕುರಿತು ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿರಬೇಕು, ಆನ್‌ಲೈನ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡು ಬಂದರೆ ತಕ್ಷಣವೇ ಪರಿಹರಿಸಬೇಕು. ಟೋಕನ್ ವಾರು ಅಂತ್ಯಕ್ರಿಯೆ ಪೂರ್ಣಗೊಂಡ ಬಗ್ಗೆ ನೋಡಲ್ ಅಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಬೇಕು ಎಂದರು ತಿಳಿಸಲಾಗಿದೆ.
ನಗರದ ಒಟ್ಟು 18 ಚಿತಾಗಾರ/ ಸ್ಮಶಾನಗಳಲ್ಲಿ ದಿನವೊಂದಕ್ಕೆ 500 ಅಂತ್ಯಸಂಸ್ಕಾರ ನಡೆಸುವ ಸಾಮರ್ಥ್ಯವಿದೆ. ಈ ಹಿಂದೆಯೂ ಚಿತಾಗಾರ ಬುಕ್ಕಿಂಗ್ಗಾಗಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತಂದ ಪಾಲಿಕೆ ಮುಂದುವರಿಸುವಲ್ಲಿ ವಿಫಲವಾಗಿ ಬಳಿಕ ವಲಯವಾರು ಆರೋಗ್ಯ ಅಧಿಕಾರಿಗಳಿಗೇ ಜವಾಬ್ದಾರಿ ವರ್ಗಾಯಿಸಿತ್ತು.
ಇದನ್ನೂ ಓದಿ: ಕುಂಭಮೇಳದಿಂದ ಬೆಂಗಳೂರಿಗೆ ಬಂದ ಮಹಿಳೆಗೆ ಕೊರೊನಾ - ಸಂಪರ್ಕಿತ 14 ಜನರಿಗೆ ಸೋಂಕು!