ETV Bharat / state

ಐದು ಎಸ್ಕಾಂಗಳಲ್ಲಿ ನವೆಂಬರ್‌ 24ರಿಂದ 26ರವರೆಗೆ ಆನ್​ಲೈನ್​ ಸೇವೆ ಸ್ಥಗಿತ: ಬೆಸ್ಕಾಂ

author img

By ETV Bharat Karnataka Team

Published : Nov 18, 2023, 10:30 PM IST

ರಾಜ್ಯಾದ್ಯಂತ ಎಲ್ಲಾ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಬರುವ 98 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನ.24ರಿಂದ 26ರವರೆಗೆ ಆನ್​ಲೈನ್​ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ

Etv Bharatonline-based-service-outage-from24th-to-26th-says-bescom
ಐದು ಎಸ್ಕಾಂಗಳಲ್ಲಿ ನವೆಂಬರ್‌ 24ರಿಂದ 26ರವರೆಗೆ ಆನ್​ಲೈನ್​ ಸೇವೆ ಸ್ಥಗಿತ: ಬೆಸ್ಕಾಂ ಮಾಹಿತಿ

ಬೆಸ್ಕಾಂ ಆನ್​ಲೈನ್​ ಸೇವೆಗಳ ಪ್ರಧಾನ ವ್ಯವಸ್ಥಾಪಕ ಪಿ.ಕೆ. ವೆಂಕಟೇಶ್‌

ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಬರುವ 98 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ ಸಂಬಂಧಿಸಿದ ತಂತ್ರಾಂಶಗಳು ಹಾಗೂ ಹಾರ್ಡ್‌ವೇರ್‌ ಗಳನ್ನು ಉನ್ನತೀಕರಿಸುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್‌ 24ರಿಂದ 26ರವರೆಗೆ (ಮೂರು ದಿನಗಳ ಕಾಲ) ಮಾಹಿತಿ ತಂತ್ರಜ್ಞಾನ ಆಧರಿತ ವಿದ್ಯುತ್‌ ಸೇವೆಗಳನ್ನು ಸ್ಥಗಿತಗೊಳಿಲಾಗುತ್ತಿದೆ.

ತಂತ್ರಾಂಶಗಳು ಹಾಗೂ ಹಾರ್ಡ್‌ವೇರ್‌ ಗಳನ್ನು ಉನ್ನತೀಕರಿಸುವ ಪ್ರಕ್ರೀಯೆ ಚಾಲನೆಯಲ್ಲಿದ್ದು, ಹಾಲಿ ಇರುವ ತಂತ್ರಾಂಶಗಳನ್ನು ಹೊಸ ಹಾರ್ಡ್‌ ವೇರ್‌ ಗಳಲ್ಲಿ ಅಳವಡಿಸುವ ಕೆಲಸವನ್ನು ಪ್ರಥಮ ಹಂತವಾಗಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಬೆಂಗಳೂರು, ಮೈಸೂರು, ಬೆಳಗಾವಿ, ಹಬ್ಬಳ್ಳಿ– ಧಾರವಾಡ , ಬೆಳಗಾವಿ, ಮಂಗಳೂರು ಹಾಗೂ ಕಲಬರುಗಿ ನಗರ ಸೇರಿದಂತೆ 98 ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಎಲ್ಲಾ ಮಾಹಿತಿ ತಂತ್ರಜ್ಞಾನ ಆಧರಿತ ಹಾಗೂ ವಿದ್ಯುತ್‌ ಕಚೇರಿಗಳ ಪಾವತಿ ಕೌಂಟರ್​ಗಳಲ್ಲಿ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಅವಧಿಯಲ್ಲಿ ಆನ್​ಲೈನ್‌ ಸೇವೆಗಳಾದ ಹೊಸ ವಿದ್ಯುತ್‌ ಸಂಪರ್ಕ, ಹೆಸರು/ ಲೋಡ್‌ ಬದಲಾವಣೆ, ನಗದು ಪಾವತಿ, ಆನ್‌ ಲೈನ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿಗಳು ಹಾಗೂ ಇತರ ಸೇವೆಗಳು ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ವಿದ್ಯುತ್‌ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಗ್ರಾಹಕರು ಆತಂಕ ಪಡಬೇಕಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆನ್​ಲೈನ್‌ ಸೇವೆ ಲಭ್ಯ ಇಲ್ಲದ ಪಟ್ಟಣಗಳ ವಿವರ:

ಬೆಸ್ಕಾಂ: ಬೆಂಗಳೂರು ನಗರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್‌, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್‌, ಚಳ್ಳಕೆರೆ, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿ ಬಿದನೂರು.

ಚೆಸ್ಕಾಂ: ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್.‌ ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ ಹಾಗೂ ಚೆನ್ನರಾಯಪಟ್ಟಣ.

ಮೆಸ್ಕಾಂ: ಬಂಟ್ವಾಳ, ಕಡೂರು, ತರಿಕೇರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು.

ಜೆಸ್ಕಾಂ: ಮಾನವಿ, ಸಿಂಧನೂರು, ಬೀದರ್‌, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್‌, ಭಾಲ್ಕಿ, ಶಹಬಾದ್‌, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್‌ ಹಾಗೂ ಹೊಸಪೇಟೆ.

ಹೆಸ್ಕಾಂ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸೇವನೂರು, ಸಿರಸಿ, ಕುಮಟಾ, ಬಾಗಲಕೋಟೆ, ರಮಬಕವಿ-ಬನಹಟ್ಟಿ, ಗದಗ, ಗೋಕಾಕ್‌, ಹಾವೇರಿ, ಇಳಕಲ್‌, ಮುಧೋಳ, ರಾಣೆಬೆನ್ನೂರು ಹಾಗೂ ವಿಜಾಪುರ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ನ.21ರಂದು ಸಭೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.