ETV Bharat / state

ಒಂದು ದೇಶ, ಒಂದು ಚುನಾವಣೆ ಚರ್ಚೆ ಅಗತ್ಯವಿದೆ: ಹೆಚ್.ವಿಶ್ವನಾಥ್ - ಒಂದು ದೇಶ ಒಂದು ಚುನಾವಣೆ

ಭಾರತದಲ್ಲಿ ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆ ಅಗತ್ಯವಿದೆ. ಈ ವಿಷಯದ ಕುರಿತು ಚರ್ಚೆ ನಡೆಯುವ ಅಗತ್ಯವಿತ್ತು, ಚರ್ಚೆಗೆ ಅವಕಾಶ ಮಾಡಿ ಕೊಟ್ಟಿದ್ದರೆ ಒಳ್ಳೆಯದಿತ್ತು ಎಂದು ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

vishwanath
vishwanath
author img

By

Published : Mar 4, 2021, 7:12 PM IST

ಬೆಂಗಳೂರು: ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರಕ್ಕೆ ಒಂದು ದೇಶ ಒಂದು ಚುನಾವಣೆಯಂತಹ ವ್ಯವಸ್ಥೆಯ ಅಗತ್ಯವಿದೆ ಎಂದು ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡೂ ಸದನಗಳಲ್ಲಿ ಒಂದು‌ ದೇಶ ಒಂದು‌ ಚುನಾವಣೆ ಬಗ್ಗೆ ಮಹತ್ವದ ಚರ್ಚೆ ಆಗಬೇಕಿತ್ತು. ಆದರೆ ಪ್ರತಿಪಕ್ಷದವರು ಇದಕ್ಕೆ ಅವಕಾಶ ಕೊಡಲಿಲ್ಲ, ಇದು ಬಹಳ ಮುಖ್ಯವಾದ ವಿಷಯವಾಗಿದೆ. ಕೇವಲ ಸದನದಲ್ಲಿ ಚರ್ಚೆಗೆ ಸೀಮಿತವಾದ ವಿಷಯ ಮಾತ್ರವಲ್ಲ, ಇಡೀ ದೇಶಕ್ಕೆ ಅಗತ್ಯವಿರುವ ವಿಷಯವಿದೆ ಎಂದರು.

ನಾವು ಜಗತ್ತಿನ ಅತಿ ದೊಡ್ಡ ಜನತಾಂತ್ರಿಕತೆಯನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ ಭಾರತದಲ್ಲಿ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಅಗತ್ಯವಿದೆ. ಈ ವಿಷಯದ ಕುರಿತು ಚರ್ಚೆ ನಡೆಯುವ ಅಗತ್ಯವಿತ್ತು, ಚರ್ಚೆಗೆ ಅವಕಾಶ ಮಾಡಿ ಕೊಟ್ಟಿದ್ದರೆ ಒಳ್ಳೆಯದಿತ್ತು ಎಂದು ಹೇಳಿದರು.

ಪ್ರತಿಪಕ್ಷಗಳು ಬೇರೆ ಬೇರೆ ಚುನಾವಣೆಗಳನ್ನು ಹೇಗೆ ಒಟ್ಟಿಗೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿವೆ. ಆದರೆ ಇದಕ್ಕೆ ವಿಸ್ತೃತ ಚರ್ಚೆ ಅಗತ್ಯ, ಚರ್ಚೆಯಲ್ಲೇ ಎಲ್ಲಾ ಉತ್ತರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ರಮೇಶ್ ಬಗ್ಗೆ ನೋ ಕಮೆಂಟ್:

ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಗೆ ಹೆಚ್.ವಿಶ್ವನಾಥ್ ಯಾವುದೇ ಪ್ರತಿಕ್ರಿಯೆ ನೀಡದೇ, ಮೌನದಿಂದಲೇ ನಿರ್ಗಮಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.