ETV Bharat / state

ಬೆಡ್ ಬ್ಲಾಕಿಂಗ್ ಪ್ರಕರಣ: ಸಿಸಿಬಿಯಿಂದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಬಂಧನ

ದೇಶದಾದ್ಯಂತ ಸುದ್ದಿಯಾಗಿದ್ದ ಬೆಂಗಳೂರು ಬೆಡ್ ಬ್ಲಾಕಿಂಗ್ ಪ್ರಕರಣದ ತನಿಖೆಯನ್ನು ಸಿಸಿಬಿ ಮುಂದುವರೆಸಿದ್ದು, ಮತ್ತೋರ್ವ ಆರೋಪಿಯನ್ನು ಬಂಧಿಸಿದೆ. ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Bengaluru Bed Blocking case
ಸಿಸಿಬಿಯಿಂದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಬಂಧನ
author img

By

Published : May 12, 2021, 11:00 AM IST

ಬೆಂಗಳೂರು: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನಗರದ ಬೆಡ್ ಬ್ಲಾಕಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಆಂಥೋನಿ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ‌‌. ಇದರೊಂದಿಗೆ ಪ್ರಕರಣದಲ್ಲಿ ಈವರೆಗೆ 8 ಜನರ ಬಂಧನವಾಗಿದೆ. ಇನ್ನಿಬ್ಬರು ಆರೋಪಿಗಳು ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ.

ಇದನ್ನೂ ಓದಿ: ಮುಂಗಡ ಹಾಜರಾತಿ ಹಾಕಿದ್ದ ವೈದ್ಯನ ಮೇಲೆ ಕ್ರಮಕ್ಕೆ ಮುಂದಾದ ಆರೋಗ್ಯಾಧಿಕಾರಿ

ಹೋಂ ಐಸೋಲೇಷನ್​ನಲ್ಲಿರುವ ಕೋವಿಡ್ ಸೋಂಕಿತರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡುತ್ತಿದ್ದ ಆಂಥೋನಿ, ಬೇರೆ ಬೇರೆ ರೋಗಿಗಳಿಗೆ ಅದನ್ನು ನೀಡಿ ಹಣ ಪಡೆಯುತ್ತಿದ್ದ.‌ ಈ ಮೂಲಕ ನಗರದ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೃತಕ ಅಭಾವಕ್ಕೆ ಕಾರಣನಾಗಿದ್ದ‌‌. ಇದುವರೆಗೂ ಅಕ್ರಮವಾಗಿ ಎಷ್ಟು ಬೆಡ್ ಬ್ಲಾಕ್ ಮಾಡಿದ್ದ ಎಂಬುವುದರ ಬಗ್ಗೆ ತಿಳಿಯಲು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.