ETV Bharat / state

ಸೊರಬದಲ್ಲಿ ಸಹೋದರರ ನಡುವೆ ಜಿದ್ದಾಜಿದ್ದಿ: ಗೆಲುವಿನ ನಗೆ ಬೀರಿದ ಮಧು ಬಂಗಾರಪ್ಪ - ಸೊರಬ ವಿಧಾನಸಭಾ ಚುನಾವಣಾ ಫಲಿತಾಂಶ

ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ.

Madhu Bangarappa and Kumar Bangarappa
ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ
author img

By

Published : May 13, 2023, 9:34 AM IST

Updated : May 13, 2023, 2:41 PM IST

ಬೆಂಗಳೂರು: ರಾಜಕಾರಣದಲ್ಲಿ ಅಧಿಕಾರಕ್ಕಾಗಿ ತಂದೆ - ಮಕ್ಕಳು, ಸಹೋದರರು, ಸಂಬಂಧಿಕರು ಎದುರು ಬದುರಾದ ಉದಾಹರಣೆಗಳಿವೆ. ಪ್ರತ್ಯೇಕ ಪಕ್ಷಗಳಲ್ಲಿ ಗುರುತಿಸಿಕೊಂಡು ರಾಜಕಾರಣ ನಡೆಸುತ್ತಿದ್ದಾರೆ. ಅದರಲ್ಲೂ ಸಹೋದರರು ತುಸು ಹೆಚ್ಚಾಗಿ ಸವಾಲು ಹಾಕಿರುವುದು ಕಣ್ಣೆದುರುಗಿದೆ.

ಗೆಲುವಿನ ನಗೆ ಬೀರಿದ ಮಧು ಬಂಗಾರಪ್ಪ: ಮೊದಲ ಸುತ್ತಿನ ಮತ ಏಣಿಕೆಯಿಂದಲೂ ಮುನ್ನಡೆ ಕಾದುಕೊಂಡಿದ್ದ ಮಧು ಬಂಗಾರಪ್ಪ ಅವರು 62,818 ಮತ ಪಡೆಯುವ ಮೂಲಕ ಗೆಲುವಿನ ನಗು ಬೀರಿದ್ದಾರೆ. 1994ರವರೆಗೆ ಸತತ ಏಳು ಬಾರಿ ಎಸ್.ಬಂಗಾರಪ್ಪ ಅವರು, ಸೊರಬವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ 2008ರಲ್ಲಿ ಒಮ್ಮೆ ಬಂಗಾರಪ್ಪ ಕುಟುಂಬದ ಹೊರತಾಗಿ ಹಾಲಪ್ಪ ಈ ಕ್ಷೇತ್ರದ ಶಾಸಕರಾಗಿದ್ದರು. ಈ ಹಿಂದಿನ ಅಣ್ಣ-ತಮ್ಮಂದಿರ ನಡುವಿನ ಎರಡೂ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರು.

ಸಹೋದರರ ನಡುವೆ ಜಿದ್ದಾಜಿದ್ದಿ: ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಕುಟುಂಬ ಭಿನ್ನ ಪಕ್ಷಗಳಲ್ಲಿ ಗುರುತಿಸಿಕೊಂಡಿದೆ. ಸೊರಬದಲ್ಲಿ ಅವರ ಮಕ್ಕಳಾದ ಕುಮಾರ್​ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರು 2004 ರಿಂದಲೂ ಅಧಿಕಾರಕ್ಕಾಗಿ ಸೆಣಸಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಇಬ್ಬರೂ ಪ್ರತ್ಯೇಕವಾಗಿ ಒಬ್ಬರ ವಿರುದ್ಧ ಒಬ್ಬರು ಚುನಾವಣಾ ಅಖಾಡದಲ್ಲಿದ್ದರು. ಈ ಬಾರಿಯ ಚುನಾವಣೆಯಲ್ಲೂ ಪ್ರತಿಸ್ಪರ್ಧಿಗಳಾಗಿದ್ದು, ಪಕ್ಷಗಳು ಬೇರೆಯಾಗಿವೆ. ಕುಮಾರ್​ ಬಿಜೆಪಿಯಿಂದ, ಮಧು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದಾರೆ. ಸದ್ಯ ಮಧು ಬಂಗಾರಪ್ಪ 20,621 ಮತಗಳ ಮುನ್ನಡೆ ಸಾಧಿಸಿದ್ಧಾರೆ.

ಗಣಿ ಧಣಿಗಳ ಮಧ್ಯೆ ಫೈಟ್​: ಗಣಿ ಧಣಿಗಳ ಊರಾದ ಬಳ್ಳಾರಿಯಲ್ಲೂ ಕುಟುಂಬಸ್ಥರ ಮಧ್ಯೆ ಪೈಪೋಟಿ ಇದೆ. ರೆಡ್ಡಿ ಸಹೋದರರು ರಾಜಕೀಯವಾಗಿ ಪ್ರತ್ಯೇಕವಾಗಿ ಕಣದಲ್ಲಿದ್ದಾರೆ. ಮಾಜಿ ಸಚಿವ ಕರುಣಾಕರ್​ ರೆಡ್ಡಿ ಮತ್ತು ಸೋಮಶೇಖರ್​ ರೆಡ್ಡಿ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯಿಂದ ಹೊರನಡೆದಿರುವ ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಮಾತೃ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಇದಷ್ಟೇ ಅಲ್ಲ, ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಹೋದರ ಸೋಮಶೇಖರ್​ ರೆಡ್ಡಿ ವಿರುದ್ಧವೇ ಪತ್ನಿ ಲಕ್ಷ್ಮಿಅರುಣಾರನ್ನು ಕಣಕ್ಕಿಳಿಸಿದ್ದಾರೆ. ಆದರೆ ಅವರು ಬಳ್ಳಾರಿ ಸಿಟಿ ಕ್ಷೇತ್ರದಲ್ಲಿ ಗೆಲ್ಲಲು ವಿಫಲರಾಗಿದ್ದಾರೆ. ಸೋಮಶೇಖರ ರೆಡ್ಡಿ ಇಲ್ಲ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಸದ್ಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿ ಜನಾರ್ದನರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸಾಹುಕಾರರ ಸವಾಲ್: ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬ ರಾಜಕಾರಣದಲ್ಲಿ ದೊಡ್ಡ ಪ್ರತಿಸ್ಪರ್ಧಿಯಾಗಿದೆ. ಸಾಹುಕಾರ್​​ ಸಹೋದರರಾದ ಸತೀಶ್​ ಜಾರಕಿಹೊಳಿ, ರಮೇಶ್​ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್​ ಜಾರಕಿಹೊಳಿ ಪ್ರತ್ಯೇಕ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲು ಕಾಂಗ್ರೆಸ್​ನಲ್ಲಿದ್ದ ರಮೇಶ್​ ಜಾರಕಿಹೊಳಿ ಬಿಜೆಪಿ ಸೇರಿ ಮಂತ್ರಿಯೂ ಆಗಿದ್ದರು. ಜೆಡಿಎಸ್​ನಲ್ಲಿದ್ದ ಬಾಲಚಂದ್ರ ಜಾರಕಿಹೊಳಿ ಈಗ ಬಿಜೆಪಿಯಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ಕಾಂಗ್ರೆಸ್​ನಲ್ಲಿದ್ದು ಪ್ರಭಾವ ಬೀರಿದ್ದಾರೆ. ಇನ್ನೊಬ್ಬ ಸಹೋದರ ಲಖನ್​ ಜಾರಕಿಹೊಳಿ ಪಕ್ಷೇತರಾಗಿದ್ದು, ವಿಧಾನಪರಿಷತ್​ ಸದಸ್ಯರಾಗಿದ್ದಾರೆ. ಸದ್ಯ ರಮೇಶ್​ ಜಾರಕಿಹೊಳಿಗೆ 2ನೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಿದ್ದಾರೆ.

ಬೇರೆ ಪಕ್ಷದಲ್ಲಿ ಅಪ್ಪ- ಮಗ: ಚಿಕ್ಕಬಳ್ಳಾಪುರದಲ್ಲಿ ಅಪ್ಪ ಮಗ ಬೇರೆ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಹಿರಿಯ ರಾಜಕಾರಣಿ, ಸಂಸತ್​ ಸದಸ್ಯ ಬಚ್ಚೇಗೌಡ ಅವರು ಬಿಜೆಪಿಯಲ್ಲಿದ್ದಾರೆ. ಅವರ ಪುತ್ರ ಶರತ್​ ಬಚ್ಚೇಗೌಡ 2019 ರ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ನೀಡದ ಕಾರಣ ಸೆಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬಳಿಕ ಕಾಂಗ್ರೆಸ್​ ಸೇರಿ, ಈ ಬಾರಿ ಹೊಸಕೋಟೆಯಿಂದ ಕಣದಲ್ಲಿದ್ದಾರೆ. ತಂದೆ ಬಿಜೆಪಿಯಲ್ಲಿದ್ದರೆ, ಮಗ ಕಾಂಗ್ರೆಸ್​ನಲ್ಲಿದ್ದು ರಾಜಕಾರಣ ನಡೆಸುತ್ತಿದ್ದಾರೆ. ಇಲ್ಲಿ ಶರತ್​ ಕಾಂಗ್ರೆಸ್​ನಿಂದ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.

ಅಪ್ಪ ಕಾಂಗ್ರೆಸ್​ ಮಗಳು ಬಿಜೆಪಿ: ಕಾಂಗ್ರೆಸ್​ ಕಟ್ಟಾಳು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕುಟುಂಬ ಅಚ್ಚರಿ ರಾಜಕಾರಣಕ್ಕೆ ಕಾರಣವಾಗಿದೆ. ಕಾಗೋಡು ಅವರ ಪುತ್ರಿ ಡಾ.ರಾಜನಂದಿನಿ ಅವರು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಬೇಳೂರು ಗೋಪಾಲಕೃಷ್ಣ ಅವರಿಗೆ ಮಣೆ ಹಾಕಿದ್ದರಿಂದ ಸೆಡ್ಡು ಹೊಡೆದು ಬಿಜೆಪಿ ಸೇರಿದ್ದಾರೆ. ಇತ್ತ ತಂದೆ ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್​ನಲ್ಲಿದ್ದಾರೆ.

ಇದನ್ನೂ ಓದಿ: ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ, ಬಳ್ಳಾರಿ ನಗರದಲ್ಲಿ ಪತ್ನಿ ಲಕ್ಷೀ ಅರುಣಾ ಮುನ್ನಡೆ

Last Updated : May 13, 2023, 2:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.