ದೇವನಹಳ್ಳಿ: ಸ್ನೇಹಿತರ ಜೊತೆ ಈಜಲು ಹೋದ ಯುವಕ ಕಲ್ಲು ಕ್ವಾರಿಯ ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಜ್ಯೋತಿಪುರ ರಾಜೀವ್ ನಗರ ಸಮೀಪದ ಕಲ್ಲು ಕ್ವಾರಿಯ ಕುಂಟೆಯಲ್ಲಿ ನಡೆದಿದೆ.

ಕುಂಟೆಯಲ್ಲಿ ಈಜಲು 5 ಯುವಕರ ತಂಡ ಹೋಗಿದ್ದು, ಯಲ್ಲಪ್ಪ (16) ಎಂಬ ಯುವಕ ಸಾವನ್ನಪ್ಪಿದ್ದಾನೆ. ಮೃತ ಯುವಕ ಬೈರದೇನಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಯುವಕನನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಮೃತ ಯುವಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.