ETV Bharat / state

ಎಚ್ಚರ..! ರಾಜ್ಯಕ್ಕೆ ಎದುರಾಗಲಿದೆ ಮತ್ತೊಂದು ಜಲಕಂಟಕ..!

ರಾಜ್ಯದಲ್ಲಿ ಈಗಾಗಲೇ ನಿರಂತರ ಮಳೆ ಸುರಿಯುತ್ತಿದ್ದು, ಇದಕ್ಕೆ ಮತ್ತಷ್ಟೂ ಇಂಬು ನೀಡುವಂತೆ ಮುಂದಿನ 48 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಸೇರಿದಂತೆ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ವಿಜ್ಞಾನಿ ಸಿ ಎಸ್ ಪಾಟೀಲ್ ಮಾತನಾಡಿದರು
author img

By

Published : Aug 9, 2019, 9:04 PM IST

Updated : Aug 10, 2019, 3:37 PM IST

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹವನ್ನ ಉಂಟು ಮಾಡಿದೆ. ಆದ್ರೆ ಇದರ ಬೆನ್ಮಲ್ಲೇ ರಾಜ್ಯದ ಜನರನ್ನ ಬೆಚ್ಚಿಬೀಳಿಸುವಂತಹ ಸುದ್ದಿಯೊಂದನ್ನ ರಾಜ್ಯ ಹವಾಮಾನ ಇಲಾಖೆ ಇದೀಗ ನೀಡಿದೆ.

ಹವಾಮಾನ ಇಲಾಖೆಯ ವಿಜ್ಞಾನಿ ಸಿ ಎಸ್ ಪಾಟೀಲ್ ಮಾತನಾಡಿದರು

ಹೌದು, ನಾಳೆಗೆ ರಾಜ್ಯದಲ್ಲಿ ಮಳೆಯ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗಿನ ಕುಸಿತ ಕಂಡುಬಂದರೂ ,ಸೋಮವಾರ ಅಥವಾ ಮಂಗಳವಾರದಂದು (12-13 ರಂದು) ಮಳೆಯ ಪ್ರಮಾಣ ಏರಿಕೆಯಾಗಲಿದೆ. ಉತ್ತರ ಬಂಗಾಳ ಕೊಲ್ಲಿಯ ಸಾಗರದಲ್ಲಿ ವಾಯುಭಾರ ಕುಸಿತವಾಗಲಿದ್ದು, ಇದರಿಂದ ಗಾಳಿಯ ವೇಗ, ಹೆಚ್ಚಿ ಅರಬ್ಬೀ ಸಮುದ್ರದ ಕಡೆಯಿಂದ ಬೀಸುವ ಗಾಳಿ ನೀರನ್ನು ಹೊತ್ತು ತಂದು ರಾಜ್ಯಾದ್ಯಂತ ಮಳೆ ಪ್ರಮಾಣ ಹೆಚ್ಚಿಸಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್ ಅವರು ತಿಳಿಸಿದ್ದಾರೆ.

ಮುಂದಿನ 48 ಗಂಟೆಗಳಲ್ಲಿ ( ಅಂದರೆ ಸೋಮವಾರದಿಂದ) ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಇತರೆಡೆ ಭಾರಿಯಿಂದ ಕೂಡಿದ ಭಾರಿ ಮಳೆ ಆಗಲಿದೆ. ಹಾಗೆಯೇ ಈ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಿದ್ದೇವೆ ಎಂದರು.

ಕೆಲವೆಡೆ ಮಳೆ ಪ್ರಮಾಣದಲ್ಲಿ ಇಳಿಕೆ ಸಾಧ್ಯತೆ

ಹಾಗೆಯೇ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವೂ ಕಡಿಮೆಯಾಗಿದ್ದು, ಛತ್ತೀಸಗಢ, ಮಧ್ಯಪ್ರದೇಶ, ಉತ್ತರ ಮಹಾರಾಷ್ಟ್ರ, ಗುಜಾರಾತ್ ಕಡೆಗೆ ಹಾದು ಹೋಗಲಿದೆ. ಹೀಗಾಗಿ ಕರ್ನಾಟಕದ ಸುತ್ತಮುತ್ತ ಮೋಡದ ಪ್ರಮಾಣ ಕಡಿಮೆಯಾಗಿ ಉತ್ತರ ಕರ್ನಾಟಕದಲ್ಲಿ ನಾಳೆಯಿಂದ ಸ್ವಲ್ಪ ಮಟ್ಟಿಗೆ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಆದರೆ 12ನೇ ತಾರೀಖಿನಿಂದ ರಾಜ್ಯದ ಎಲ್ಲೆಡೆ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದರು.

Intro:ಮುಂದಿನ ಮೂರು ದಿನಗಳಲ್ಲಿ ರಾಜ್ಯಕ್ಕೆ ಎದುರಾಗಲಿದೆ ಮತ್ತೊಂದು ಜಲಕಂಟಕ!

ಬೆಂಗಳೂರು- ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಧಾರಕಾರ ಮಳೆ, ಪ್ರವಾಹ ಉಂಟುಮಾಡಿದೆ. ಆದ್ರೆ ಈ ರೆಡ್ ಅಲರ್ಟ್ ಮುಂದಿನ ಇಪ್ಪತ್ನಾಲ್ಕು ಗಂಟೆಗಳಿಗೆ ಕೊನೆಯಾಗಲಿದೆ. ಆದ್ರೆ ಇದರ ಬೆನ್ಮಲ್ಲೇ ರಾಜ್ಯದ ಜನ ಬೆಚ್ಚಿಬೀಳಿಸುವಂತಹ ಸುದ್ದಿಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಸೋಮವಾರ ಅಥವಾ ಮಂಗಳವಾರದಂದು (12-13 ರಂದು) ಮತ್ತೊಂದು ವಾಯುಭಾರ ಕುಸಿತ ಉಂಟಾಗಲಿದೆ. ಉತ್ತರ ಬಂಗಾಳಕೊಲ್ಲಿಯ ಸಾಗರದಲ್ಲಿ ವಾಯುಭಾರ ಕುಸಿತವಾಗಲಿದೆ. ಇದರಿಂದ ಗಾಳಿಯ ವೇಗ ಹೆಚ್ಚಿ, ಅರಬ್ಬೀ ಸಮುದ್ರದ ಕಡೆಯಿಂದ ಬೀಸುವ ಗಾಳಿ ನೀರನ್ನು ಹೊತ್ತು ತಂದು ರಾಜ್ಯಾದ್ಯಂತ ಮಳೆಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್ ಅವರು ತಿಳಿಸಿದರು. ಕರಾವಳಿ, ಮಲೆನಾಡು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ನಾಳೆಯಿಂದ ಮಳೆಪ್ರಮಾಣದಲ್ಲಿ ಇಳಿಕೆ
ಒಂದು ವಾರ ಆರ್ಭಟಿಸಿದ್ದ ಮಳೆರಾಯ ನಾಳೆ ಕೊಂಚ ತಣ್ಣಗಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ನಾಳೆ ಬೆಳಗ್ಗೆ 8-30 ಕ್ಕೆ ಕರಾವಳಿ ,ಮಲೆನಾಡು ಜಿಲ್ಲೆಗಳಿಗೆ ನೀಡಿರುವ ರೆಡ್ ಅಲರ್ಟ್ ಕೊನೆಯಾಗಲಿದೆ. ಹಾಗೆಯೇ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪ್ರಮಾಣವೂ ಕಡಿಮೆಯಾಗಿದ್ದು, ಛತ್ತೀಸಘಡ, ಮಧ್ಯಪ್ರದೇಶ, ಉತ್ತರ ಮಹಾರಾಷ್ಟ್ರ, ಗುಜಾರಾತ್ ಕಡೆಗೆ ಹಾದು ಹೋಗಿದೆ. ಹೀಗಾಗಿ ಕರ್ನಾಟಕದ ಸುತ್ತಮುತ್ತ ಮೋಡದ ಪ್ರಮಾಣ ಕಡಿಮೆಯಾಗಿದ್ದು, ಮಳೆ ಪ್ರಮಾಣ ನಾಳೆಯಿಂದ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ನಾಳೆಯಿಂದ ಕಡಿಮೆ ಆಗಲಿದೆ ಎಂದರು.

ಸೌಮ್ಯಶ್ರೀ
Kn_Bng_04_Havamana_varadhi_special_story_7202707 Body:..Conclusion:..
Last Updated : Aug 10, 2019, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.