ETV Bharat / state

ಪ್ಯಾರಾ ಬ್ಯಾಡ್ಮಿಂಟನ್​​ ಒಲಿಂಪಿಕ್​ ಆಟಗಾರರ ಕನಸು ಛಿದ್ರಗೊಳಿಸಿದ ಕಿಲ್ಲರ್ ಕೊರೊನಾ

ಮಾಹಾಮಾರಿ ಕೊರೊನಾ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದು, ಪ್ರತಿಯೊಂದು ಕ್ಷೇತ್ರದ ಮೇಲೂ ತನ್ನ ಅಡ್ಡಪರಿಣಾಮ ಬೀರಿದೆ. ಅದರಲ್ಲಿ ಕ್ರೀಡಾ ಕ್ಷೇತ್ರ ಕೂಡ ಹೊರತಾಗಿಲ್ಲ. ಒಲಿಂಪಿಕ್​​ನಲ್ಲಿ ಗೆದ್ದು ಪದಕ ಪಡೆದು ದೇಶಕ್ಕೆ ಕೀರ್ತಿ ತರಬೇಕೆಂದು ಪ್ರತಿಯೊಬ್ಬ ಕ್ರೀಡಾಪಟುಗಳ ಆಸೆಯಾಗಿರುತ್ತದೆ. ಆದರೆ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್​​ ಕೊರೊನಾದಿಂದ ಮುಂದೂಡಿಕೆಯಾಗಿದ್ದು, ಇದು ಕ್ರೀಡಾಪಟುಗಳಲ್ಲಿ ನಿರಾಶೆ ಮೂಡಿಸಿದೆ.

Para badminton player Anand Kumar
ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್ ಕುಮಾರ್
author img

By

Published : May 27, 2020, 12:54 PM IST

ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದ ಒಲಿಂಪಿಕ್​ ಮುಂದೂಡಿಕೆಯಾಗಿದ್ದು, ಪ್ಯಾರಾ ಬ್ಯಾಡ್ಮಿಂಟನ್​ ಒಲಿಂಪಿಕ್​​ ಕ್ರೀಡಾಪಟುಗಳನ್ನು ಸಾಕಷ್ಟು ನಿರಾಶೆಗೊಳಿಸಿದೆ ಎಂದು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್ ಕುಮಾರ್

ಮಾಹಾಮಾರಿ ಕೊರೊನಾ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದು, ಪ್ರತಿಯೊಂದು ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ. ಅದರಲ್ಲಿ ಕ್ರೀಡಾ ಕ್ಷೇತ್ರ ಕೂಡ ಹೊರತಾಗಿಲ್ಲ. ಒಲಿಂಪಿಕ್​​ನಲ್ಲಿ ಗೆದ್ದು ಪದಕ ಪಡೆದು ದೇಶಕ್ಕೆ ಕೀರ್ತಿ ತರಬೇಕೆಂದು ಪ್ರತಿಯೊಬ್ಬ ಕ್ರೀಡಾಪಟುಗಳ ಆಸೆಯಾಗಿರುತ್ತದೆ. ಆದರೆ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್​​ ಕೊರೊನಾದಿಂದ ಮುಂದೂಡಿಕೆಯಾಗಿದ್ದು, ಇದು ಕ್ರೀಡಾಪಟುಗಳಲ್ಲಿ ನಿರಾಶೆ ಮೂಡಿಸಿದೆ.

Para badminton player Anand Kumar
ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್ ಕುಮಾರ್

ಕ್ರೀಡಾಪಟುಗಳಿಗೆ ಫಿಟ್ನೆಸ್ ತುಂಬಾ ಮುಖ್ಯ, ಒಬ್ಬ ಸಾಮಾನ್ಯ ಮನುಷ್ಯ ಮನೆಯಲ್ಲೇ ವರ್ಕೌಟ್​ ಮಾಡಿ ಫಿಟ್ನೆಸ್ ಕಾಪಾಡಿಕೊಳ್ಳಬಹುದು. ಆದರೆ ಸ್ಪೋರ್ಟ್ಸ್ ಮ್ಯಾನ್​​ಗಳಿಗೆ ಅದು ಸಾಧ್ಯವಿಲ್ಲ. ಆದರೆ ಈ ಬಾರಿ ಕೊರೊನಾದಿಂದ ಕ್ರಿಡಾಪಟುಗಳಿಗೆ ಸಾಕಷ್ಟು ತೊಂದರೆಯಾಗಿದೆ. ಒಲಿಂಪಿಕ್​​ ಇದ್ದ ಸಂಬಂಧ ಆಟಗಾರರು ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು.

Para badminton player Anand Kumar
ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್ ಕುಮಾರ್

ಕೊರೊನಾದಿಂದ ಸ್ಪೋರ್ಟ್ಸ್ ಮ್ಯಾನ್​​ಗಳಿಗೆ ಸಾಕಷ್ಟು ತೊಂದರೆ ಆಗಿದೆ. ಆದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟ ಆಡುವ ಆಟಗಾರರಿಗೆ ಸರ್ಕಾರ ವಿಶೇಷವಾಗಿ ರಿಯಾಯಿತಿ ಕೊಟ್ಟು ಅವರ ತಯಾರಿಗೆ ಸಂಬಂಧಪಟ್ಟ ಅಸೋಸಿಯೇಷನ್​​ಗಳು ಸರ್ಕಾರದ ಗಮನಕ್ಕೆ ತಂದು ಆಟಗಾರರು ಇರವಲ್ಲೆ ಅವರ ತಯಾರಿಗೆ ಅವಕಾಶ ಮಾಡಿಕೊಡಬೇಕು ಎಂದು ಈಟಿವಿ ಭಾರತ ಮೂಲಕ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಆನಂದ್ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದರ ಜೊತೆಗೆ ಕರ್ನಾಟಕದಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಪಟುಗಳು ತರಬೇತಿ ಪಡೆಯಲು ಸರ್ಕಾರ ಯಾವುದೇ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಪ್ಯಾರಾ ಅಥ್ಲೆಟಿಕ್ಸ್ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕ ಗೆದ್ದು ದೇಶಕ್ಕೆ ಹೆಸರು ತಂದಿದ್ರು ಸರ್ಕಾರ ನಮ್ಮನ್ನೇ ಸರಿಯಾಗಿ ಗುರುತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.