ETV Bharat / state

ಆಂಧ್ರ ಸರ್ಕಾರದ ನಿಯಮ ಪಾಲಿಸುತ್ತಾ ಕರ್ನಾಟಕ.. ಶಾಲೆ ಆರಂಭ ಕುರಿತು ನಾಳೆ ಸಭೆ

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಡಿಡಿಪಿಐ ಹಾಗೂ ಬಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆಯು ನಿನ್ನೆ ನಡೆಯಬೇಕಿತ್ತು. ಆದರೆ, ತಾಂತ್ರಿಕ ಸಮ್ಯಸೆಯಿಂದ ನಾಳೆಗೆ ಅಂದರೆ ಬುಧವಾರಕ್ಕೆ ಮುಂದೂಡಲಾಗಿದೆ‌..

Education Minister Suresh Kumar
ಶಿಕ್ಷಣ ಸಚಿವ ಸುರೇಶ್ ಕುಮಾರ್
author img

By

Published : Nov 3, 2020, 7:42 PM IST

ಬೆಂಗಳೂರು : ರಾಜ್ಯದಲ್ಲಿ ಶಾಲೆ ಆರಂಭ ಯಾವಾಗ.? ಈ ಪ್ರಶ್ನೆ ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಶಾಲಾ-ಕಾಲೇಜು ಆರಂಭದ ಕುರಿತು ಆಯಾ ರಾಜ್ಯಕ್ಕೆ ಸಂಪೂರ್ಣ ಅಧಿಕಾರ ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಸೋಂಕು ಇಳಿಕೆಯತ್ತ ಸಾಗಿದ್ದು, ಶಾಲೆ ಆರಂಭದ ಸಿದ್ಧತೆಯ ಕುರಿತು ಸಭೆಗಳು ಆರಂಭವಾಗಿದೆ. ಇತ್ತ ನವೆಂಬರ್ 17ರಿಂದ ಪದವಿ ಕಾಲೇಜುಗಳು ಆರಂಭವಾಗಲಿದ್ದು, ಶಾಲೆ ಆರಂಭದ ಕುರಿತು ನಾಳೆ ಸಭೆ ನಡೆಯಲಿದೆ.

ನಾಳೆ ಸಮಗ್ರ ಶಿಕ್ಷಣ ಅಭಿಯಾನದಲ್ಲಿ ಬೆಳಗ್ಗೆ 11:30ಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಹಾಗೂ ಆಯಾ‌ ಜಿಲ್ಲಾ ಉಪ ನಿರ್ದೇಶಕರು, ಬಿಇಒ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪೆರನ್ಸ್ ನಡೆಸಲಿದ್ದಾರೆ. ಬಳಿಕ ರಾಜ್ಯದಲ್ಲಿ ಶಾಲೆ ಪುನಾರಂಭ ಯಾವಾಗ ಎಂಬುದು ಸಭೆಯಲ್ಲಿ ಅಂತಿಮವಾಗುವ ಸಾಧ್ಯತೆ ಇದೆ.

ಈಗಾಗಲೇ ಇತರೆ ರಾಜ್ಯಗಳಲ್ಲಿ ಶಾಲಾರಂಭ ಮಾಡಲಾಗಿದೆ. ಕಳೆದ 18 ದಿನಗಳಿಂದ ರಾಜ್ಯದಲ್ಲಿ ಕೊರೊನಾ‌ ಪ್ರಕರಣ ಕೂಡ ಕಡಿಮೆಯಾಗುತ್ತಿದ್ದು, ಶಿಕ್ಷಣ ಇಲಾಖೆಯೇ ರಚಿಸಿರೋ ತಜ್ಞರ ಸಮಿತಿಯಿಂದ ಸಂಪೂರ್ಣ ಎಸ್‌ಒಪಿ ನೀಡಲಾಗಿದೆ. ಯಾವ ರೀತಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ಡಿಡಿಪಿಐ ಹಾಗೂ ಬಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆಯು ನಿನ್ನೆ ನಡೆಯಬೇಕಿತ್ತು. ಆದರೆ, ತಾಂತ್ರಿಕ ಸಮ್ಯಸೆಯಿಂದ ನಾಳೆಗೆ ಅಂದರೆ ಬುಧವಾರಕ್ಕೆ ಮುಂದೂಡಲಾಗಿದೆ‌.

ಆಂಧ್ರಪ್ರದೇಶದಲ್ಲಿ ನವೆಂಬರ್ 2ರಿಂದ ಶಾಲೆ ಶುರು

9,10, 11 ಮತ್ತು12 ತರಗತಿಗಳಿಗೆ ಶಾಲೆ ಆರಂಭವಾಗಿದೆ. ನವೆಂಬರ್ 23 ರಿಂದ 6, 7, 8ನೇ ತರಗತಿಗಳಿಗೆ 1 ರಿಂದ 5ನೇ ತರಗತಿಗೆ ಡಿ.14 ರಿಂದ ಶಾಲೆ ಆರಂಭವಾಗಲಿದೆ. ಒಂದು ಕೊಠಡಿಯಲ್ಲಿ ಕೇವಲ 16 ವಿದ್ಯಾರ್ಥಿಗಳು ಮಾತ್ರ ಪಾಠ ಕೇಳಲು ಅವಕಾಶ ಕಲ್ಪಿಸಲಾಗಿದೆ. ಒಂದು ತಿಂಗಳು ಸಮ-ಬೆಸ ಮಾದರಿಯಲ್ಲಿ ಶಾಲೆ ನಡೆಯಲಿದೆ.

ಅರ್ಧ ದಿನ ಮಾತ್ರ ಶಾಲೆ ಇರಲಿದ್ದು, ಮಧ್ಯಾಹ್ನ ಊಟಕ್ಕೆ ಮಕ್ಕಳು ಮನೆಗೆ ಹೋಗಬಹುದು. ಇನ್ನು ಶಾಲೆಯಲ್ಲಿ 750ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆ, ವಾರದಲ್ಲಿ ಕೇವಲ 2 ದಿನ ಪಾಠ, 750ಕ್ಕೂ ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ ವಾರಕ್ಕೆ 3 ದಿನ ಪಾಠ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.