ETV Bharat / state

ಶೀಘ್ರದಲ್ಲೇ ಆಲಮಟ್ಟಿಗೆ ಕೃಷ್ಣ ಭಾಗ್ಯ ಜಲನಿಗಮ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸ್ಥಳಾಂತರ : ಗೋವಿಂದ ಕಾರಜೋಳ

ಕೆಲವು ತಾಂತ್ರಿಕ ಕಾರಣಗಳಿಂದ ಕೃಷ್ಣ ಜಲ ಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸ್ಥಳಾಂತರ ಕಾರ್ಯ ವಿಳಂಬವಾಗಿತ್ತು. ಶೀಘ್ರದಲ್ಲಿ ಸ್ಥಳಾಂತರ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ..

Minister Govinda Karajola spoke in the assembly
ಸಚಿವ ಗೋವಿಂದ ಕಾರಜೋಳ
author img

By

Published : Mar 15, 2022, 4:55 PM IST

ಬೆಂಗಳೂರು : ಕೃಷ್ಣ ಭಾಗ್ಯ ಜಲನಿಗಮ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಶೀಘ್ರದಲ್ಲೇ ಆಲಮಟ್ಟಿಗೆ ಸ್ಥಳಾಂತರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ಪ್ರಶ್ನೋತ್ತರ ವೇಳೆ ಶಾಸಕ ದೇವಾನಂದ್ ಚೌಹಾಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ತಾಂತ್ರಿಕ ಕಾರಣಗಳಿಂದ ಕೃಷ್ಣ ಜಲ ಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸ್ಥಳಾಂತರ ಕಾರ್ಯ ವಿಳಂಬವಾಗಿತ್ತು. ಶೀಘ್ರದಲ್ಲಿ ಸ್ಥಳಾಂತರ ಮಾಡಲಾಗುವುದು ಎಂದರು.

ಇದಕ್ಕೂ ಮುನ್ನ ಶಾಸಕ ಶಿವಾನಂದ ಪಾಟೀಲ್ ಮಾತನಾಡಿ, ಪ್ರಸ್ತುತ ಬೆಂಗಳೂರಿನಲ್ಲಿರುವ ಎಂಡಿ ಕಚೇರಿಯನ್ನು ಆಲಮಟ್ಟಿಗೆ ಹಸ್ತಾಂತರ ಮಾಡಲು ಇರುವ ಸಮಸ್ಯೆಗಳೇನಾದರೂ ಏನು?. ವ್ಯವಸ್ಥಾಪಕರು ದೊಡ್ಡವರೋ ಅಥವಾ ಸರ್ಕಾರ ದೊಡ್ಡದೋ ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪಿಸಿದ ಸಚಿವ ಗೋವಿಂದ ಕಾರಜೋಳ, ಸರ್ಕಾರಕ್ಕಿಂತ ಯಾರೂ ದೊಡ್ಡವರಲ್ಲ. ಅಧಿಕಾರಿಗಳು ಸರ್ಕಾರ ಹೇಳಿದ್ದನ್ನು ಮಾಡಬೇಕು. ಕೆಲವು ಕಾರಣಗಳಿಂದ ಇದು ವಿಳಂಬವಾಗಿತ್ತು. ಶೀಘ್ರದಲ್ಲೇ ಸ್ಥಳಾಂತರ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.

ಕಡೆಗಣಿಸಿಲ್ಲ : ನಮ್ಮ ಸರ್ಕಾರ ನೀರಾವರಿ ಯೋಜನೆಗಳನ್ನು ಎಲ್ಲಿಯೂ ಕಡೆಗಣಿಸಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆಗೆ 2021-22ರಲ್ಲಿ 1,862 ಕೋಟಿ ರೂ., ಪ್ರಸ್ತಕ ಸಾಲಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ರೂ. ಅನುದಾನವನ್ನು ಒದಗಿಸಿದ್ದೇವೆ. ಈ ಯೋಜನೆಗೆ ಹೆಚ್ಚುವರಿ ಅನುದಾನವನ್ನು ಎಷ್ಟು ನೀಡಲಿದ್ದೇವೆ ಎಂಬುದನ್ನು ಬಜೆಟ್ ಮೇಲೆ ಉತ್ತರಿಸುವ ವೇಳೆ ಮುಖ್ಯಮಂತ್ರಿಗಳು ತಿಳಿಸುತ್ತಾರೆ. ಕಾದು ನೋಡಿ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಇನ್ನಾದರೂ ಪಾಠ ಕಲಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ: ಶಾಸಕ ಅಭಯ ಪಾಟೀಲ್​​

ಈ ಹಂತದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಿಜಯಪುರ ಜಿಲ್ಲೆಯ ಗುತ್ತಿ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ರೂ. ಅನುದಾನ ಕೊಡುವುದಾಗಿ ಘೋಷಣೆ ಮಾಡಿದ್ದರು. ಈ ಹಣ ಎಲ್ಲಿಗೆ ಹೋಯಿತು, ಯಾವ ದಿಕ್ಕಿಗೆ ನೀರು ಹರಿಯುತ್ತದೆ, ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಸದನಕ್ಕೆ ಸುಳ್ಳು ಹೇಳಬಾರದು ಎಂದು ಹೇಳಿದರು.

ಆಗ ಶಾಸಕ ದೇವಾನಂದ್ ಚೌಹಾಣ್ ಅವರು ಗುತ್ತಿ ಏತ ನೀರಾವರಿ ಯೋಜನೆಯ ನೀರು ಪೂರೈಕೆ ಮಾಡುವ 8 ಮೋಟಾರ್​​ಗಳ ಪೈಕಿ 5 ಕೆಟ್ಟು ಹೋಗಿವೆ. ರೈತರು ಈ ಸಂಬಂಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಎಂಟು ಮೋಟಾರ್​ಗಳನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ಮೋಟಾರ್ ಅಳವಡಿಸಲು 42 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಟೆಂಡರ್ ಸಹ ಕರೆಯಲಾಗಿದೆ. ಒಂದೊಂದು ಮೋಟಾರ್ 2,700 ಹೆಚ್‍ಪಿ ಸಾಮರ್ಥ್ಯ ಹೊಂದಿದೆ. ಪದೇಪದೆ ಮೋಟಾರ್​​ಗಳನ್ನು ಅಳವಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಹೊಸ ಮೋಟಾರ್ ಅಳವಡಿಸುತ್ತಿದ್ದೇವೆ ಎಂದು ತಿಳಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.