ಬೆಂಗಳೂರು: 2020-21ನೇ ಸಾಲಿಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷರಾಗಿ ಕೆ.ಬಿ. ಅರಸಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ರಾಜು ಅವರ ಸ್ಥಾನವನ್ನು ಇವರು ಮುಂದುವರೆಸಿದ್ದಾರೆ.
ಕೆ.ಬಿ. ಅರಸಪ್ಪ ಕಿರು ಪರಿಚಯ
1962ರಲ್ಲಿ ದೊಡ್ಡಬಳ್ಳಾಪುರದಲ್ಲಿ ಜನಿಸಿದ ಶ್ರೀ ಕೆ.ಬಿ. ಅರಸಪ್ಪ ಬಿ.ಕಾಂ ಪದವಿ ಪಡೆದಿದ್ದಾರೆ. ಅವರು 1989ರಲ್ಲಿ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಸಣ್ಣದಾಗಿ ಪ್ರಾರಂಭಿಸಿದ ಎ.ಎಸ್. ಮೆಷಿನ್ ಟೂಲ್ಸ್ & ಸ್ಪೇರ್ಸ್ ಗಣನೀಯ ಉದ್ಯಮವಾಗಿ ಬೆಳೆದಿದೆ. 1992ರಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಮೆ: ರಿಲೈಬಲ್ ಬ್ಯಾಟರೀಸ್ ಎಂಬ ಹೆಸರಿನ ಹೊಸ ಉದ್ಯಮ ಪ್ರಾರಂಭಿಸಿದರು.
ಪೀಣ್ಯಾ ಇಂಡಸ್ಟಿಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಪೀಣ್ಯಾ ಜಿಮ್‌ಖಾನಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಪೀಣ್ಯಾ ಇಂಡಸ್ಟಿಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುವಾಗ ಮೊಟ್ಟಮೊದಲ ಬಾರಿಗೆ ಪೀಣ್ಯಾದಲ್ಲಿ ಮೆಗಾ ವೆಂಡರ್ ಡೆವೆಲಪ್‌ಮೆಂಟ್ ಕಾರ್ಯಕ್ರಮ ಆಯೋಜಿಸಿದ್ದರು. ಪೀಣ್ಯಾ ಜಿಮ್‌ಖಾನಾ ಅಧ್ಯಕ್ಷರಾಗಿ ಮತ್ತು ರೋಟರಿ ಕ್ಲಬ್ ಸದಸ್ಯರಾಗಿ, ಹಾಗೂ 2019-20ನೇ ಸಾಲಿಗೆ ಕಾಸಿಯಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಎರಡು ಅವಧಿಗೆ ಎಫ್‌ಕೆಸಿಸಿಐ ಸಮಿತಿ ಸದಸ್ಯರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ.
ಕಾಸಿಯಾದ ಇತರ ಪದಾಧಿಕಾರಿಗಳು:
- ಎನ್. ಆರ್. ಜಗದೀಶ್ - ಪ್ರಧಾನ ಕಾರ್ಯದರ್ಶಿ
- ಪಿ.ಎನ್. ಜಯಕುಮಾರ್ - ಜಂಟಿ ಕಾರ್ಯದರ್ಶಿ (ನಗರ)
- ಸಿ.ಸಿ. ಹೊಂಡದ್ ಕಟ್ಟಿ - ಜಂಟಿ ಕಾರ್ಯದರ್ಶಿ (ಗ್ರಾಮೀಣ)
- ಎಸ್. ಶಂಕರನ್ - ಖಜಾಂಚಿ