ಬೆಂಗಳೂರು : ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯು ವಿದ್ಯಾರ್ಥಿಗಳು ಮೊದಲ ದಿನ ಶಾಲಾ ಬಾಗಿಲು ತಟ್ಟಿದ್ದಾರೆ. ಆದರೆ, ಕೊರೊನಾ ಸೋಂಕಿನ ಭಯ ಇನ್ನೂ ಇರುವ ಹಿನ್ನೆಲೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ.
ಕಳೆದ ಆಗಸ್ಟ್ 23ರಂದು ಹೈಸ್ಕೂಲ್ ಹಾಗೂ ಪಿಯು ಕಾಲೇಜು ಆರಂಭಗೊಂಡಿದ್ದವು. ಇದೀಗ ಎರಡನೇ ಹಂತವಾಗಿ ಪ್ರಾಥಮಿಕ ತರಗತಿಯಾದ 6,7 ಹಾಗೂ 8ನೇ ಭೌತಿಕ ತರಗತಿ ಆರಂಭವಾಗಿವೆ. ಕೋವಿಡ್ ಕಾರಣಕ್ಕಾಗಿ ಪೋಷಕರು ವಿದ್ಯಾರ್ಥಿಗಳನ್ನ ಶಾಲೆಗಳಿಗೆ ಕಳುಹಿಸಲು ಮೊದಲ ದಿನ ಹಿಂದೇಟು ಹಾಕಿದ್ದಾರೆ ಅಂತಿದೆ ಹಾಜರಾತಿಯ ಅಂಕಿ-ಅಂಶ.
ರಾಜ್ಯದಲ್ಲಿ ಒಟ್ಟಾರೆ 37,693 ಶಾಲೆಗಳ ಪೈಕಿ 13,435 ಶಾಲೆಗಳು ಶೇ.35.64ರಷ್ಟು ಭೌತಿಕ ತರಗತಿ ಆರಂಭಿಸಿವೆ. 24,258 ಶಾಲೆಗಳಲ್ಲಿ ಶೇ.64.36ರಷ್ಟು ಶಾಲೆಗಳಲ್ಲಿ ಇನ್ನೂ ತರಗತಿಗಳು ಶುರುವಾಗಿಲ್ಲ. 6ನೇ ತರಗತಿಯಲ್ಲಿ 3,05,137 ( 29.15%) ವಿದ್ಯಾರ್ಥಿಗಳು, 7ನೇ ತರಗತಿಗೆ 2,94,450 (28.05) ಹಾಗೂ 8ನೇ ತರಗತಿಯಲ್ಲಿ 2,35,616 ( 23.22) ವಿದ್ಯಾರ್ಥಿಗಳು ಇಂದು ತರಗತಿಗಳಿಗೆ ಹಾಜರಾಗಿದ್ದಾರೆ.
9-10ನೇ ತರಗತಿಗೆ ಅರ್ಧದಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮನ : ಆಗಸ್ಟ್ 23 ರಿಂದ 9-10ನೇ ತರಗತಿ ಶುರುವಾಗಿದೆ. ಮೊದ ಮೊದಲು ಹಾಜರಾತಿ ಪ್ರಮಾಣ ಕಡಿಮೆ ಇತ್ತು. ಇದೀಗ 9ನೇ ತರಗತಿಗೆ 9,80,794 ವಿದ್ಯಾರ್ಥಿಗಳ ಪೈಕಿ 5,09,597 (ಶೇ.51.96%) ಭೌತಿಕ ತರಗತಿಗೆ ಹಾಜರಾಗಿದ್ದಾರೆ. ಹಾಗೇ 10ನೇ ತರಗತಿಗೆ 9,75,590 ವಿದ್ಯಾರ್ಥಿಗಳ ಪೈಕಿ 5,28,712 ( 54.19%) ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಇದನ್ನೂ ಓದಿ:ಇಂದಿನಿಂದ 6 ರಿಂದ 8ನೇ ತರಗತಿ ಪ್ರಾರಂಭ: ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ ಶಿಕ್ಷಕರು