ಬೆಂಗಳೂರು: ಇಷ್ಟು ದಿನ ಪೊಲೀಸ್ ಠಾಣೆ, ಅಗ್ನಿಶಾಮಕ ದಳ, ಎಸಿಬಿ, ಸಿಐಡಿ, ಕೆಎಸ್ಆರ್ಪಿ, ಹೋಮ್ ಗಾರ್ಡ್, ಸಿಸಿಬಿಗೆ ಕೊರೊನಾ ಕಂಟಕವಾಗಿತ್ತು. ಆದರೆ ಸದ್ಯ ನಗರದ ಮಡಿವಾಳದ ಎಫ್ಎಸ್ಎಲ್ ಕೇಂದ್ರಕ್ಕೂ ಕೊರೊನಾ ಸೋಂಕು ತಟ್ಟಿದೆ.
ಮಡಿವಾಳ ಎಫ್ಎಸ್ಎಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸದ್ಯ ವಿಧಿ ವಿಜ್ಞಾನಾಲಯವನ್ನು ಸ್ಯಾನಿಟೈಸ್ ಮಾಡಿ ಕೊರೊನಾ ಸೋಂಕಿತರನ್ನ ಸಂಬಂಧಿಸಿದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪ್ರಾಥಮಿಕ ಸಂಪರ್ಕದಲ್ಲಿರುವವರ ಮಾಹಿತಿ ಕಲೆಹಾಕಿ ಕ್ವಾರಂಟೈನ್ ಇರುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಇಂದಿನಿಂದ ಮೂರು ದಿವಸಗಳ ಕಾಲ ಎಫ್ಎಸ್ಎಲ್ ಕೇಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ.
ನಗರದಲ್ಲಿ ಏನೇ ಕ್ರೈಂ ಚಟುವಟಿಕೆಗಳು ನಡೆದಾಗ ಎಫ್ಎಸ್ಎಲ್ ರಿಪೋರ್ಟ್ ಅಗತ್ಯವಾಗಿರುತ್ತದೆ. ಸದ್ಯ ಕೊರೊನಾ ವಕ್ಕರಿಸಿದ ಕಾರಣ ಸಿಬ್ಬಂದಿ ಯಾವುದೇ ಚಟುವಟಿಕೆ ನಡೆಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.