ETV Bharat / state

ಐಎಂಎ ವಂಚನೆ ಪ್ರಕರಣ.. ರೋಷನ್ ಬೇಗ್​ಗೆ ಮತ್ತೆ ಎಸ್ಐಟಿಯಿಂದ ಬುಲಾವ್

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನಿಂದ ಅಮಾನತುಗೊಂಡಿರುವ ಶಾಸಕ ರೋಷನ್​ ಬೇಗ್ ಅವರಿಗೆ ಮತ್ತೆ ತನಿಖೆಗೆ ಹಾಜರಾಗುವಂತೆ ಎಸ್​ಐಟಿಯಿಂದ ನೋಟಿಸ್​ ಕಳುಹಿಸಲಾಗಿದೆ.

ಶಾಸಕ ರೋಷನ್​ ಬೇಗ್
author img

By

Published : Aug 9, 2019, 1:48 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ರೋಷನ್ ಬೇಗ್​ ಅವರಿಗೆ ಎಸ್ಐಟಿ ಅಧಿಕಾರಿಗಳು ಮತ್ತೆ ನೋಟಿಸ್​ ಕಳುಹಿಸಿದ್ದಾರೆ.

ಮನ್ಸೂರ್​ ಖಾನ್​ನಿಂದ ಕೋಟಿ ಹಣ ಪಡೆದಿರುವ ಆರೋಪ ಹೊತ್ತ ಇವರು, ಈ ಹಿಂದೆ ಎರಡು ಬಾರಿ ವಿಚಾರಣೆಗೆ ಹಾಜರಾಗಿ ನಂತರ ಅನಾರೋಗ್ಯದ ನೆಪವೊಡ್ಡಿ ತನಿಖೆಗೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಇದೇ ತಿಂಗಳ ಅಗಸ್ಟ್‌ 13 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚನೆ ನೀಡಿದೆ.

ಸದ್ಯ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್​ ಖಾನ್​ ಪೊಲೀಸರ ವಶದಲ್ಲಿದ್ದು, ತನಿಖೆ ವೇಳೆ ಕೆಲ ರಾಜಕಾರಣಿಗಳು, ಬಿಲ್ಡರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಹೇಳಿದ್ದಾನೆ. ಅವರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿ ತನಿಖೆ ಮುಂದುರಿಸಲಾಗಿದೆ ಎಂದು ತಿಳಿದುಬಂದಿದೆ.

Intro:ಐಎಂಎ ಬಹುಕೋಟಿ ವಂಚನೆ ಪ್ರಕರಣ
ಮಾಜಿ ಶಾಸಕ ರೋಷನ್ ಬೇಗ್ ಗೆ ಮತ್ತೊಮ್ಮೆ ಎಸ್ಐಟಿಯಿಂದ ಬುಲಾವ್

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮನ್ಸೂರ್ ಖಾನ್ ಅನ್ನ ಎಸ್ಐಟಿ ಅಧಿಕಾರಿಗಳು ಡ್ರೀಲ್ ಮಾಡ್ತಿದ್ದಾರೆ. ಹಾಗೆ ಆತ ಸಾವಿರಾರರು ಮಂದಿಗೆ ಕೋಟಿ ಕೋಟಿ ಹಣ ಪಂಗನಾಮ ಹಾಕಿದ ಕಾರಣ ಆ ಹಣ ಎಲ್ಲಿದೆ ಅನ್ನೋದ್ರ ಡಿಟೇಲ್ ಕಲೆ ಹಾಕ್ತಿದ್ದಾರೆ.

ವಿಚಾರಣೆ ವೇಳೆ ಮನ್ಸೂರು ಹಲವಾರು ರಾಜಾಕಾರಣಿಗಳು, ಬಿಲ್ಡರ್, ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನ ಹೇಳಿದ ಕಾರಣ ಈಗಾಗ್ಲೇ ನೋಟಿಸ್ ಜಾರಿ ಗೊಳಿಸಿ ತನಿಖೆ ಮದುವರೆಸಿದ್ದಾರೆ.

ಮತ್ತೊಂದೆಡೆ ಮಾಜಿ ಶಾಸಕ ರೋಷನ್ ಬೇಗ್ ಗೆ ಇದೇ ತಿಂಗಳು 13ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚನೆ ನೀಡಿದೆ ಎರಡು ಬಾರಿ ವಿಚಾರಣೆಗೆ ಹಾಜರಾಗಿ ನಂತ್ರ ಆರೋಗ್ಯ ನೆಪವೊಡ್ಡಿ ಎರಡು ಬಾರಿ ತನಿಖೆಗೆ ಗೈರಾಗಿದ್ರು.ಹೀಗಾಗಿ 13 ನೇ ತಾರೀಖು ತನಿಖೆಗೆ ಹಾಜರಾಗುವಂತೆ ಎಸ್ ಐಟಿ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಸದ್ಯ ಮನ್ಸೂರ್ ನಿಂದ ರೋಷನ್ ಬೇಗ್ ಕೋಟಿ ಹಣ ಪಡೆದಿರುವ ಆರೋಪ ಇದೆ.

Body:KN_BNG_03_IMA_7204498Conclusion:KN_BNG_03_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.