ETV Bharat / state

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್​​​ ದಿವಾಳಿ ಪ್ರಕರಣ:ಆರ್‌ಬಿಐ ಮತ್ತು ಬ್ಯಾಂಕ್​ಗೆ ಹೈಕೋರ್ಟ್​ ನೋಟಿಸ್ - ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್​​​ ದಿವಾಳಿ ಪ್ರಕರಣ

ಐದು ಲಕ್ಷಕ್ಕಿಂತ ಕಡಿಮೆ ಠೇವಣಿಯಿಟ್ಟವರಿಗೆ ಮರು ಪಾವತಿಗೆ ಮಂಜೂರು ಮಾಡಿದ್ದ ಹಣ - ಮೊದಲ ಕಂತು ಪಾವತಿಸಿದ್ದ ಬ್ಯಾಂಕ್ ​- ಹಣ ಪಾವತಿಸಲು ನಿರಾಕರಿಸುತ್ತಿರುವ ಸಹಕಾರಿ ಸಂಸ್ಥೆ

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ಠೇವಣಿದಾರರಿಗೆ ಮರು ಪಾವತಿಗೆ ಮಂಜೂರಾಗಿದ್ದ ಹಣ ಹಿಂದಿರುಗಿಸುವಂತೆ ಆರ್‌ಬಿಐಗೆ ನೋಟಿಸ್
Notice to RBI to return money sanctioned for repayment to depositors in Shree Gururaghavendra Co-operative Bank
author img

By

Published : Dec 28, 2022, 3:27 PM IST

ಬೆಂಗಳೂರು: ನಗರದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ಐದು ಲಕ್ಷಕ್ಕಿಂತ ಕಡಿಮೆ ಠೇವಣಿಯಿಟ್ಟವರಿಗೆ ಮರು ಪಾವತಿ ಮಾಡಲು ಮಂಜೂರು ಮಾಡಿದ್ದ 729 ಕೋಟಿ ಹಣವನ್ನು ದಿ ಡೆಪಾಸಿಟ್ ಇನ್‌ಶ್ಯೂರೆನ್ಸ್ ಅಂಡ್​​ ಗ್ಯಾರಂಟಿ ಕಾರ್ಪೋರೇಷನ್‌ಗೆ (ಡಿಐಸಿಜಿ) ಹಿಂದಿರುಗಿಸುವ ವಿಚಾರದ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಬ್ಯಾಂಕಿನ ಆಡಳಿತಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಠೇವಣಿದಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ವಿಭಾಗೀಯ ಪೀಠ ಪ್ರತಿವಾದಿಗಳಾದ ಆರ್‌ಬಿಐ, ಅದರ ಅಧೀನ ಸಂಸ್ಥೆಯಾದ ಡಿಐಸಿಜಿ ಮತ್ತು ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ಆಡಳಿತಾಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು 2023ರ ಜ.3ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಬಿ.ವಿ. ಮಲ್ಲಾರೆಡ್ಡಿ ಹಾಜರಾಗಿ, ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಠೇವಣಿದಾರರು ದಿವಾಳಿ ಎದ್ದಿದ್ದಾರೆ. ಇದರಿಂದ ಬ್ಯಾಂಕಿನಲ್ಲಿ 5 ಲಕ್ಷ ರೂ.ಗಿಂತ ಕಡಿಮೆ ಠೇವಣಿಯಿಟ್ಟ ಠೇವಣಿದಾರರಿಗೆ ಹಣ ಹಿಂದಿರುಗಿಸಲು ಡಿಐಜಿಸಿ 729 ಕೋಟಿ ರೂ. ಅನ್ನು ಬ್ಯಾಂಕಿಗೆ ಮಂಜೂರು ಮಾಡಿತ್ತು. ಅದರಂತೆ ಆ ಹಣವನ್ನು 5 ಲಕ್ಷ ರೂ.ಗಿಂತ ಕಡಿಮೆ ಹಣ ಠೇವಣಿಯಿಟ್ಟಿದ್ದ ಠೇವಣಿದಾರರಿಗೆ ಪಾವತಿಸಲಾಗಿದೆ.

ನಂತರ ಡಿಐಜಿಸಿ ಕಾಯ್ದೆಯ ಸೆಕ್ಷನ್ 26 ಪ್ರಕಾರ ಆದೇಶ ಹೊರಡಿಸಿ, 729 ಕೋಟಿ ರೂ. ಅನ್ನು ಐದು ಕಂತುಗಳಲ್ಲಿ ಮರು ಪಾವತಿಸಬೇಕು. 2022ರ ಡಿ.31ರೊಳಗೆ ಮೊದಲ ಕಂತು ಪಾವತಿಸಬೇಕು ಎಂಬುದಾಗಿ ಸೂಚಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅದರಂತೆ ಇದೀಗ ಬ್ಯಾಂಕ್ ಇದೇ ಡಿಸೆಂಬರ್ ಅಂತ್ಯದೊಳಗೆ ಮೊದಲ ಕಂತಿನ ಹಣವಾಗಿ ಸುಮಾರು 145 ಕೋಟಿ ಹಣವನ್ನು ಡಿಐಸಿಜಿಗೆ ಪಾವತಿಸಬೇಕಿದೆ. ಸದ್ಯ ಬ್ಯಾಂಕಿನ ಬಳಿ 450 ಕೋಟಿ ರೂ. ಹಣ ಲಭ್ಯವಿದೆ. ಅದರಲ್ಲಿ 145 ಕೋಟಿ ರೂ ಹಣವನ್ನು ಡಿಐಸಿಜಿಗೆ ಪಾವತಿಸಿದರೆ, 300 ಕೋಟಿ ರೂ. ಉಳಿಯುತ್ತದೆ. ಇದೇ ಕಾರಣ ಮುಂದಿಟ್ಟುಕೊಂಡು ಬ್ಯಾಂಕಿನ ಆಡಳಿತಾಧಿಕಾರಿ ಐದು ಲಕ್ಷಕ್ಕೂ ಅಧಿಕ ಠೇವಣಿಯಿಟ್ಟ ಠೇವಣಿದಾರರಿಗೆ ಹಣ ಮರು ಪಾವತಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ಆ ಠೇವಣಿದಾರರು ಸಂಕಷ್ಟಕ್ಕೆ ಗುರಿಯಾಗಿದ್ದು, ಐದು ಕಂತುಗಳಲ್ಲಿ ಹಣ ಮರು ಪಾವತಿಸಲು ಡಿಐಸಿಜಿ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಡಿಐಸಿಜಿ ಆದೇಶಕ್ಕೆ ತಡೆ ನೀಡಬೇಕೆಂಬ ಮಧ್ಯಂತರ ಮನವಿ ಕುರಿತು ತಕ್ಷಣವೇ ಆದೇಶ ಹೊರಡಿಸಲು ನಿರಾಕರಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಬ್ಯಾಂಕ್, ಡಿಐಸಿಜಿ ಮತ್ತು ಆರ್‌ಬಿಐ ವಾದ ಆಲಿಸದೇ ಮಧ್ಯಂತರ ಮನವಿ ಪುರಸ್ಕರಿಸಲಾಗದು. ಸದ್ಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಅವರ ವಾದ ಮಂಡಿಸಿದ ನಂತರ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ಚಾಮರಾಜನಗರ: ವೆಂಕಟರಮಣಸ್ವಾಮಿ ದೇವಾಲಯಕ್ಕೆ ಅಣ್ಣಾವ್ರ ಕುಟುಂಬ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.