ETV Bharat / state

ರೈತರ ಪಂಪ್ ಸೆಟ್​ಗೆ ಮೀಟರ್ ಅಳವಡಿಕೆ ಇಲ್ಲ: ಸಚಿವ ಸುನೀಲ್ ಕುಮಾರ್

ಎಸ್ಸಿ,ಎಸ್ಟಿ ಸಮುದಾಯದವರಿಗೆ ಅಮೃತ್ ಜ್ಯೋತಿ ಯೋಜನೆಯಡಿ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ ಅದನ್ನು ವಾಪಸ್​ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸುನೀಲ್​ ಕುಮಾರ್​ ಹೇಳಿದರು.

author img

By

Published : Sep 6, 2022, 9:17 PM IST

KN_BNG_01_
ಸುನಿಲ್ ಕುಮಾರ್

ಬೆಂಗಳೂರು: ಎಸ್ಕಾಂಗಳ ದುಃಸ್ಥಿತಿ ಸಿದ್ದರಾಮಯ್ಯ ಅವರ ಪಾಪದ ಕೂಸಾಗಿದೆ ಎಂದು ಇಂಧನ‌ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.

ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2013-2019 ತನಕ ಅವರೇ ಆರ್ಥಿಕ ಸಚಿವರಾಗಿದ್ದರು. ಅವರು ಇದ್ದಾಗ ರಾಜ್ಯದ ಮೇಲೆ 1ಲಕ್ಷ ಕೋಟಿಗೂ ಹೆಚ್ಚು ಹೊರೆ ಹಾಕಿದ್ದಾರೆ. 5 ವರೇ ಸಾವಿರ ಕೋಟಿ ಇಲಾಖೆ ಮೇಲೆ ಹೊರೆ ಹೊರೆಸಿದ್ದರು. ಐಪಿ ಸೆಟ್​ಗೆ, ವಿದ್ಯುತ್​​ಗೆ ಸಬ್ಸಿಡಿ ರೂಪದಲ್ಲಿ 3,471 ಕೋಟಿ ರೂ. ಬಾಕಿ ಉಳಿಸಿದ್ದರು.

ಆರ್ಥಿಕ ಇಲಾಖೆ ಆ ಹಣವನ್ನು ಇಂಧನ ಇಲಾಖೆಗೆ ಕೊಟ್ಟೇ ಇಲ್ಲ. ಇದನ್ನು ಅರಿತ ಸಿಎಂ ಬೊಮ್ಮಾಯಿ 8,064 ಕೋಟಿ ರೂ. ನಮ್ಮ‌ ಇಲಾಖೆಗೆ ಕೊಟ್ಟರು. ಅದರಿಂದ ಹಿಂದಿನ ಸಾಲದ ಹೊರೆಯನ್ನು ಸರಿ ದೂಗಿಸಿದೆವು. ಅವತ್ತು ಇಲಾಖೆಗೆ ಸಿದ್ದರಾಮಯ್ಯ ಹೇರಿದ ಪಾಪದ ಕೂಸನ್ನು ನಾವು ಈಗ ಸರಿ ದೂಗಿಸುತ್ತಿದ್ದೇವೆ.

ಸಿದ್ದರಾಮಯ್ಯ ಸುಳ್ಳನ್ನೇ ವಿಜೃಂಭಿಸುತ್ತಿದ್ದಾರೆ: ಎಸ್ಸಿ,ಎಸ್ಟಿ ಸಮುದಾಯದವರಿಗೆ ಅಮೃತ್ ಜ್ಯೋತಿ ಯೋಜನೆಯಡಿ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೇ, ಈ ಬಗ್ಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸುಳ್ಳುನ್ನು ವಿಜೃಂಭಿಸುತ್ತಿದ್ದಾರೆ. ಇದು ಬಿಜೆಪಿಯ ಬದ್ಧತೆಯ ಯೋಜನೆ. ಅದನ್ನು ವಾಪಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಯೋಜನೆಯಿಂದ 39 ಲಕ್ಷ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ. 4 ಲಕ್ಷ ಪಲಾನುಭವಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. 15,000 ಫಲಾನುಭವಿಗಳಿಗೆ ಡಿಟಿಪಿ‌ ಮೂಲಕ ಹಣ ಜಮೆ ಮಾಡಲಾಗಿದೆ ಎಂದರು

ಮೊದಲ ನಿಯಮಾವಳಿಯಲ್ಲಿ ಸುವಿಧಾ ಆಪ್ ಮೂಲಕ ಅರ್ಜಿ ಡೌನ್‌ಲೋಡ್ ಮಾಡಿ ಅರ್ಜಿ ತುಂಬಿಸಬೇಕು ಎಂದಿತ್ತು. ಗ್ರಾಮೀಣ ಭಾಗದ ಸಮುದಾಯದ ಫಲಾನುಭವುಗಳಿಗೆ ಅದು ಕಷ್ಟಸಾಧ್ಯವಾಗಿದೆ. ಇನ್ನು ಫಲಾನುಭವಿಗಳು ಸಲ್ಲಿಸಿದ ಅರ್ಜಿಯನ್ನು ಎಲ್ 2 ಅಧಿಕಾರಿ ಎಲ್1 ಗೆ ಕಳಿಸಿ ಬಳಿಕ ಅವರು ಅದನ್ನು ಇಲಾಖೆಗೆ ಕಳಿಸಬೇಕಿತ್ತು ಎಂದಿತ್ತು. ಈ ಪ್ರಕ್ರಿಯೆಯನ್ನು ನಾವು ತಿದ್ದುಪಡಿ ಮಾಡಿದ್ದೇವೆ ಎಂದು ತಿಳಿಸಿದರು.

ರೈತರ ಪಂಪ್ ಸೆಟ್ ಮೀಟರ್ ಅಳವಡಿಸುವ ಯೋಚನೆ ಇಲ್ಲ: ರಾಜ್ಯದ ರೈತರ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವ ಯೋಚನೆ ಇಲ್ಲ. ಅದು ನಮ್ಮ ಕಾರ್ಯಸೂಚಿಯಲ್ಲೂ ಇಲ್ಲ. ಆದರೆ ಸಿದ್ದರಾಮಯ್ಯ ಮೀಟರ್ ಅಳವಡಿಸುವ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

5,875 ಕೋಟಿ ರೂ. ವಿದ್ಯತ್ ಮಾರಾಟದಲ್ಲಿ ಆದಾಯ: ಕಳೆದ ಒಂದು ವರ್ಷದಲ್ಲಿ ಹೆಚ್ಚುವರಿ ವಿದ್ಯತ್ ನ ಮಾರಾಟದಿಂದ ಸುಮಾರು 5,875 ಕೋಟಿ ರೂ. ಆದಾಯ ಗಳಿಸಿದ್ದೇವೆ ಎಂದು ತಿಳಿಸಿದರು. 13,118 ಮಿ.ಯು. ವಿದ್ಯುತ್ ಮಾರಾಟ ಮಾಡಿದ್ದೇವೆ.

ಶೀಘ್ರ ಕುಸುಮ್ ಸಿ ಯೋಜನೆ ಜಾರಿ: ಶೀಘ್ರದಲ್ಲೇ ಕುಸುಮ್ ಸಿ ಯೋಜನೆ ಜಾರಿಗೊಳಿಸಲಿದ್ದೇವೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. ಸೋಲಾರ್ ವಿದ್ಯುತ್​ನ್ನು ಫೀಡರ್ ಮೂಲಕ ರೈತರ ಐಪಿಸೆಟ್​ಗಳಿಗೆ ಕೊಡಲಾಗುವುದು. 2.50 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ. ಆ ಮೂಲಕ 1000 ಮೆಗಾ ವ್ಯಾಟ್ ವಿದ್ಯುತ್ ಕೊಡಲಿದ್ದೇವೆ‌ ಎಂದರು.

ಇದನ್ನೂ ಓದಿ: ಅಧಿಕಾರ ಇದ್ದಾಗ ಕೆಲಸ ಮಾಡದ ಸಿಎಂ.. ಕಾಂಗ್ರೆಸ್ ವಿರುದ್ಧ ವೃಥಾ ಆರೋಪ: ಡಿಕೆಶಿ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.