ETV Bharat / state

ಬೆಂಗಳೂರಿನ ಶಬ್ದ ಮಾಲಿನ್ಯ ಗಣನೀಯ ಏರಿಕೆ; ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ! - ಶಬ್ಧ ಮಾಲಿನ್ಯ ಪ್ರಮಾಣ

ರಾಜಧಾನಿ ಬೆಂಗಳೂರಿನ ಶಬ್ಧ ಮಾಲಿನ್ಯ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

noise pollution rate increasing in Bangalore
ಬೆಂಗಳೂರಿನ ಶಬ್ಧ ಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಏರಿಕೆ; ಜನರ ಆರೋಗ್ಯದ ಮೇಲೆ ಬೀಳಲಿದೆ ವ್ಯತಿರಿಕ್ತ ಪರಿಣಾಮ!
author img

By

Published : Feb 24, 2021, 7:08 PM IST

ಬೆಂಗಳೂರು : ದಿನೇ ದಿನೆ ನಗರದ ಶಬ್ಧ ಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೌದು, ದೇಶದಲ್ಲೇ ಅತಿ ಹೆಚ್ಚು ಶಬ್ಧ ಮಾಲಿನ್ಯವಿರುವ ನಗರಗಳ ಪೈಕಿ ಬೆಂಗಳೂರು ಕೂಡಾ ಒಂದಾಗಿದ್ದು, ಕಳೆದ ವರ್ಷ ನಿಗದಿತ ಮಟ್ಟ ಮೀರಿ ಅಧಿಕ ಪ್ರಮಾಣದಲ್ಲಿ ಶಬ್ಧಮಾಲಿನ್ಯ ದಾಖಲಾಗಿದೆ. ನಗರದಲ್ಲಿ ಶಬ್ಧಮಾಲಿನ್ಯವನ್ನು ನಿರಂತರವಾಗಿ ಮಾನಿಟರ್ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತಿದೆಯಾದರೂ ಯಾವುದೇ ಪರಿಣಾಮ ಬೀರಿಲ್ಲ.

ನಗರದ ವಾಣಿಜ್ಯ, ವಸತಿ ಹಾಗೂ ಸೂಕ್ಷ್ಮ ಪ್ರದೇಶಗಳಿಗಿಂತ ಕೈಗಾರಿಕಾ ಪ್ರದೇಶದಲ್ಲೇ ಕಡಿಮೆ ಪ್ರಮಾಣದಲ್ಲಿ ಶಬ್ಧದ ಪ್ರಮಾಣ ದಾಖಲಾಗಿದೆ. ಪರಿವೇಷ್ಟಕ ವಾಯುವಿನ ಗುಣಮಟ್ಟ ಮಾಪನದಿಂದ ಈ ವಿಷಯ ಬೆಳಕಿಗೆ ಬಂದಿದೆ. ಮಾಪನ ಕೇಂದ್ರದ ಅಂಕಿ - ಅಂಶಗಳ ಪ್ರಕಾರ, ವಸತಿ ಪ್ರದೇಶಗಳಲ್ಲಿ ಹಗಲಿನಲ್ಲಿ 55 ಡೆಸಿಬಲ್, ರಾತ್ರಿ 45 ಡೆಸಿಬಲ್​​ನಷ್ಟು ಶಬ್ಧ ಇರಬೇಕು. ಆದರೆ, ಹೆಚ್ಚುತ್ತಿರುವ ವಾಹನ ದಟ್ಟಣೆ, ಕಾಮಗಾರಿ ನಿರ್ಮಾಣದಿಂದಾಗಿ ಈ ಬ್ಯಾಕ್​ಗೌಂಡ್​​​ ಶಬ್ಧಮಾಲಿನ್ಯ ನಿಗದಿತ ಪ್ರಮಾಣಕ್ಕಿಂತ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ ಏರಿಕೆ ಪ್ರಮಾಣ:

ಪ್ರದೇಶಗಳುಹಗಲುರಾತ್ರಿ
ವಾಣಿಜ್ಯ ಪ್ರದೇಶಶೇ.0.9 - ಶೇ.8.6ಶೇ 11.6- ಶೇ. 18.4
ವಸತಿ ಪ್ರದೇಶಶೇ.0.9- ಶೇ.18.2ಶೇ.28.4 - ಶೇ.44
ಸೂಕ್ಷ್ಮ ಪ್ರದೇಶಶೇ.17.8 - ಶೇ.32.8ಶೇ.35.0 - ಶೇ.73.2

ನಗರದಲ್ಲಿ ಶಬ್ಧದ ಗರಿಷ್ಠ ಪ್ರಮಾಣ ಎಲ್ಲೆಲ್ಲಿ? ಎಷ್ಟು?

ಮೈಸೂರು ರಸ್ತೆಯ ಆರ್​ವಿಸಿಇ ಕಾಲೇಜು ಸಮೀಪ ಹಗಲಿನ ಮಿತಿಗಿಂತ ಶೇ 17.8 ರಾತ್ರಿ ವೇಳೆಯೇ ಶೇ 35 ಹೆಚ್ಚು ಶಬ್ಧವಿದೆ. ಅದೇ ರೀತಿ ಪ್ರಮುಖ 8 ಸ್ಥಳಗಳಲ್ಲಿ ರಾತ್ರಿ ಸಮಯದಲ್ಲೇ ಶಬ್ಧದ ಪ್ರಮಾಣ ಹೆಚ್ಚಾಗಿದೆ.

ಪ್ರಮುಖ 8 ಪ್ರದೇಶಗಳು:

ಪ್ರಮುಖ 8 ಪ್ರದೇಶಗಳುಹಗಲುರಾತ್ರಿ
ಮೈಸೂರು ರಸ್ತೆಯ ಆರ್​ವಿಸಿಇ ಕಾಲೇಜುಶೇ.17.8ಶೇ.35
ನಿಮ್ಹಾನ್ಸ್ಶೇ.32.8ಶೇ.73.2
ಬಿಟಿಎಂ ಲೇಔಟ್ಶೇ.18.2ಶೇ.44
ದೊಮ್ಮಲೂರುಶೇ.12ಶೇ.28.7
ಎಸ್.ಜಿ.ಹಳ್ಳಿಶೇ.7.3ಶೇ.28.4
ಮಾರತಹಳ್ಳಿಶೇ.3.8ಶೇ.19.6
ಯಶವಂತಪುರಶೇ.8.6ಶೇ.18.4
ಚರ್ಚ್ ಸ್ಟ್ರೀಟ್ಶೇ.0.9ಶೇ.11.6

ಟ್ರಾಫಿಕ್​​ನಿಂದಲೇ ಶೇ. 40ರಷ್ಟು ಮಾಲಿನ್ಯ:

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಈ ಬಗ್ಗೆ ಮಾಹಿತಿ ನೀಡಿ, ಶಬ್ಧಮಾಲಿನ್ಯ ಕುರಿತು ನಿರಂತರ ಮಾಪನ ಮಾಡಲಾಗುತ್ತಿದೆ. ಶಬ್ಧ ನಿಯಮ-2000 ಪ್ರಕಾರ ಇದನ್ನು ನಿಯಂತ್ರಿಸಲಾಗುತ್ತಿದೆ. ನಗರದಲ್ಲಿ 88 ಲಕ್ಷಕ್ಕೂ ಅಧಿಕ ವಾಹನಗಳಿವೆ. ಹೀಗಾಗಿ, ಶಬ್ಧಮಾಲಿನ್ಯದಲ್ಲಿ ಏರಿಕೆ ಕಂಡಿದೆ. ಶೇ.40ರಷ್ಟು ವಾಯುಮಾಲಿನ್ಯಕ್ಕೆ ಸಂಚಾರ ದಟ್ಟಣೆಯೇ ಕಾರಣ ಎಂದರು.

ಓದಿ: ದೊಡ್ಡ ಪಿಡುಗಾದ ಶಬ್ದಮಾಲಿನ್ಯ: ಪ್ರಾಣಿ - ಪಕ್ಷಿಗಳ ಮೇಲೆ ಬೀರುತ್ತಿದೆ ತೀವ್ರ ಪರಿಣಾಮ

ಶಬ್ಧದ ಗುಣಮಟ್ಟ ಅಳೆಯಲು ಪೊಲೀಸ್ ಇಲಾಖೆಗೆ 108 ನಾಯ್ಸ್ ಮೀಟರ್ ಕೊಡಲಾಗಿದೆ. 44 ನಾಯ್ಸ್ ಮೀಟರ್​ಗಳನ್ನು ಕೆಎಸ್​ಪಿಸಿಬಿ ಅಧಿಕಾರಿಗಳಿಗೆ ಕೊಡಲಾಗಿದೆ. ತರಬೇತಿಯನ್ನೂ ಕೊಡಲಾಗಿದೆ. ಶಬ್ದದ ಗರಿಷ್ಠಮಟ್ಟ ಮೀರಿರುವ ವಾಹನಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ, ಆರ್​ಟಿಒ, ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳಲಿದೆ ಎಂದರು.

ಆರೋಗ್ಯದ ಮೇಲೆ ಪರಿಣಾಮ:

ಇನ್ನು ಶಬ್ಧಮಾಲಿನ್ಯ ಹೆಚ್ಚಿದಂತೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀಳಲಿದೆ. ಕಿವಿಗಳಿಗೆ ಅಷ್ಟೇ ಅಲ್ಲದೆ ದೇಹದ ಎಲ್ಲಾ ಭಾಗಗಳ ಮೇಲೂ ಶಬ್ಧಮಾಲಿನ್ಯ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಏಕಾಗ್ರತೆಗೆ ಅಡಚಣೆ, ಸಿಟ್ಟು-ಕೋಪ ಹೆಚ್ಚು ಮಾಡುವುದಲ್ಲದೆ, ನೆಮ್ಮದಿ ಕೆಡಿಸುವುದರ ಜೊತೆಗೆ ಆರೋಗ್ಯವೂ ಹಾಳಾಗಲಿದೆ ಎಂದು ಹಿರಿಯ ವೈದ್ಯರಾದ ಡಾ. ಗುರುಮೂರ್ತಿ ಈಟಿವಿ ಭಾರತ್​​ಗೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.