ETV Bharat / state

ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಯಾವುದೇ ಸಂಬಂಧವಿಲ್ಲ: ಸಚಿವ ಅಶ್ವತ್ಥ ನಾರಾಯಣ ಸ್ಪಷ್ಟನೆ - ಸಚಿವ ಅಶ್ವತ್ಥ್ ನಾರಾಯಣ್

ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಿ. ಕ್ರಮ ಕೈಗೊಳ್ಳುವುದಕ್ಕೆ ನಾನು ವಿರೋಧ ಮಾಡುವುದಿಲ್ಲ. ಆದರೆ, ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್​ನವರು ಅನಾವಶ್ಯಕವಾಗಿ ಇಂತಹ ಆರೋಪ ಮಾಡ್ತಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ashwath narayan
ಅಶ್ವತ್ಥ್ ನಾರಾಯಣ್
author img

By

Published : Nov 17, 2022, 2:37 PM IST

ಬೆಂಗಳೂರು: ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಅನ್ನೋ ಹಾಗೆ ಕಾಂಗ್ರೆಸ್ ಮಾತು. ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್​ನವರು ಅನಾವಶ್ಯಕವಾಗಿ ಇಂತಹ ಆರೋಪ ಮಾಡ್ತಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದರು.

ಖಾಸಗಿ ಸಂಸ್ಥೆಯೊಂದು ಮತದಾರರ ಮಾಹಿತಿ ಸಂಗ್ರಹ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ನಿರಾಧಾರವಾದ ಆಪಾದನೆ ಖಂಡಿಸುತ್ತೇನೆ. ಚುನಾವಣಾ ಆಯೋಗದ ಅಡಿ ಅದು ನಡೆಯುತ್ತದೆ. ಹೊಂಬಾಳೆ ಸಂಸ್ಥೆಗೂ ಇದಕ್ಕೂ ಸಂಬಂಧವಿಲ್ಲ. ಅದರಂತೆ ನನ್ನ ಸಹೋದರಿನಿಗೂ ಈ ಚಿಲುಮೆಗೂ ಸಂಬಂಧವಿಲ್ಲ. ಹೊಂಬಾಳೆ ಪ್ರತಿಷ್ಠಿತ ಸಂಸ್ಥೆ. ನಮ್ಮ ನಾಡಿಗೆ, ಸಿನಿಮಾಗೆ ಗೌರವ ತಂದಿರೋರು. ಆರೋಪ ಮಾಡೋರು ನೋಡಿಕೊಂಡು ಮಾತಾಡಲಿ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿ ನೀಡಿ ಮತದಾರರ ಮಾಹಿತಿ ಕಳ್ಳತನ: ಸಿದ್ದರಾಮಯ್ಯ

ಫೋಟೋ ರಿಲೀಸ್ ವಿಚಾರವಾಗಿ ಮಾತನಾಡಿ, ಕೃಷ್ಣಪ್ಪ ಯಾರು ಅಂತ ಗೊತ್ತು. ಸಾಮಾಜಿಕ ಕಾರ್ಯಕ್ರಮದಲ್ಲಿ ಕರೆದಾಗ ಹೋಗಿದ್ದೆ. ನಾನು ಕಾಂಗ್ರೆಸ್ ಅವರನ್ನ ಕೇಳಿ ಹೋಗಬೇಕಾ?. ಕಾರ್ಯಕ್ರಮಕ್ಕೆ ಕರೆದಿದ್ದರು, ಹೋಗಿದ್ದೆ. ಅದು ತಪ್ಪಾ?. ಕಾಂಗ್ರೆಸ್​ನವರು ದೂರು ನೀಡಲಿ. ಚುನಾವಣಾ ಆಯೋಗ ತನಿಖೆ ಮಾಡುತ್ತದೆ. ಕಾಂಗ್ರೆಸ್​ಗೆ ಮಾಹಿತಿ ಕೊರತೆ, ಆಧಾರದ‌ ಕೊರತೆ ಇದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಮತದಾರರ ಮಾಹಿತಿಯನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುತ್ತಿದೆ: ಸುರ್ಜೇವಾಲಾ

ಕಾಂಗ್ರೆಸ್​ನವರು ಮಸಿ ಬಳಿದುಕೊಂಡಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ, ಸುರ್ಜೇವಾಲ ಕಾನೂನು ವಿರುದ್ಧದ ಕೆಲಸ ಮಾಡ್ತಿದ್ದಾರೆ. ಆಧಾರ ಇಟ್ಟುಕೊಂಡು ಮಾತನಾಡಬೇಕು. ಇದರಲ್ಲಿ ನಾನು ಭಾಗಿಯಾಗಿಲ್ಲ. ನನ್ನ ಹೆಸರಿಗೆ ಮಸಿ ಬಳಿಯೋಕೆ ಹೀಗೆ ಮಾಡುತ್ತಿದ್ದಾರೆ. ರವಿ ಅನ್ನೋನು ನನಗೆ ಗೊತ್ತು. ಆಧಾರ ಇದ್ದರೆ ದೂರು ಕೊಡಲಿ. ಕಾಂಗ್ರೆಸ್​ನವರಿಗೆ ನನ್ನನ್ನು ನೋಡಿದ್ರೆ ಭಯ. ಬಿಜೆಪಿಯಲ್ಲಿ ಯಾರು ಸಂಚು ಮಾಡ್ತಿಲ್ಲ, ಒಗ್ಗಟ್ಟಾಗಿ ಇದ್ದೇವೆ ಎಂದರು.

ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು: ಡಿ ಕೆ ಶಿವಕುಮಾರ್​ ಪ್ರಶ್ನೆ

ಮಲ್ಲೇಶ್ವರಂನಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡೋಕೆ ಅವಕಾಶವಿದೆ. 50-100 ವರ್ಷಗಳಿಂದ ನೀರು, ಕೇಬಲ್ ಸರಿ ಮಾಡಿರಲಿಲ್ಲ. 224 ಕ್ಷೇತ್ರದಲ್ಲಿ ಯಾರಾದರೂ ನನ್ನಷ್ಟು ಕೆಲಸ ಮಾಡಿದ್ದಾರಾ ತೋರಿಸಲಿ. ಮಳೆ ಇಲ್ಲದೇ ಹೋದರೆ 2 ತಿಂಗಳಲ್ಲಿ ಕೆಲಸ ಮುಗಿಸುತ್ತೇವೆ. ನನ್ನ ಮೇಲೆ ಬಾರಿ ಆರೋಪ ಮಾಡುತ್ತಿದ್ದಾರೆ. ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀನಿ. ನಾನು ಎಲ್ಲದ್ದಕ್ಕೂ ಸಿದ್ಧ. ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಿ. ಯಾರೇ ತಪ್ಪು ಮಾಡಿದ್ರು ಕ್ರಮ ಆಗಲಿ. ಕ್ರಮ ಕೈಗೊಳ್ಳುವುದಕ್ಕೆ ನಾನು ವಿರೋಧ ಮಾಡುವುದಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.