ETV Bharat / state

ತ್ಯಾಗ, ಬಲಿದಾನ ಮಾಡಿದವರ ಬಗ್ಗೆ ಅರಿವು ಕಡಿಮೆ.. ಆರ್.ವಿ.ಹರೀಶ್ - ಈಸ್ಟ್ ಇಂಡಿಯಾ ಕಂಪನಿ

ಈಸ್ಟ್ ಇಂಡಿಯಾ ಕಂಪನಿ ಮೂಲಕ ಭಾರತಕ್ಕೆ ಬಂದ ಬ್ರಿಟಿಷರು, ನಮ್ಮನ್ನು ಗುಲಾಮರನ್ನಾಗಿಸಿದ್ದರು. ಆ ವೇಳೆ ಮಹಾತ್ಮಗಾಂಧಿ, ನೆಹರು, ಜಿನ್ನಾ ಸೇರಿದಂತೆ ಹಲವಾರು ನಾಯಕರು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಇವತ್ತಿನ ಪೀಳಿಗೆಗೆ ಅದರ ಅರಿವೇ ಇಲ್ಲ ಎಂದು ಆರ್.ವಿ.ಹರೀಶ್ ಬೇಸರ ವ್ಯಕ್ತಪಡಿಸಿದರು.

ಆರ್.ವಿ.ಹರೀಶ್
author img

By

Published : Aug 10, 2019, 7:38 AM IST

ಬೆಂಗಳೂರು : ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಬಗ್ಗೆ ಇವತ್ತಿನ ಪೀಳಿಗೆಗೆ ಅರಿವೇ ಇಲ್ಲ. ಇಂತಹ ನಾಯಕರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜೆಡಿಎಸ್​ನ ಹಿರಿಯ ಮುಖಂಡ ಆರ್ ವಿ ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಕ್ವಿಟ್ ಇಂಡಿಯಾ ಚಳವಳಿಯ 77ನೇ ವರ್ಷದ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಸ್ಟ್ ಇಂಡಿಯಾ ಕಂಪನಿ ಮೂಲಕ ಭಾರತಕ್ಕೆ ಬಂದ ಬ್ರಿಟಿಷರು, ನಮ್ಮನ್ನು ಗುಲಾಮರನ್ನಾಗಿಸಿದ್ದರು. ಆ ವೇಳೆ ಮಹಾತ್ಮಗಾಂಧಿ, ನೆಹರು, ಜಿನ್ನಾ ಸೇರಿದಂತೆ ಹಲವಾರು ನಾಯಕರು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಇವತ್ತಿನ ಪೀಳಿಗೆಗೆ ಅದರ ಅರಿವೇ ಇಲ್ಲ ಎಂದರು.

ಕ್ವಿಟ್ ಇಂಡಿಯಾ ಚಳವಳಿಯ 77ನೇ ವಾರ್ಷಿಕೋತ್ಸವ..

ನೆಹರು ಅವರು ಡಿಸ್ಕವರಿ ಆಫ್ ಇಂಡಿಯಾ ಮೂಲಕ ಆನೇಕ ಕಾರ್ಯಕ್ರಮಗಳನ್ನು ಮಾಡಿದ್ದರು. ಬ್ರಿಟಿಷರು ದೇಶ ಬಿಟ್ಟು ಹೋದ ನಂತರ ಖಜಾನೆಯಲ್ಲಿ ಹಣವಿರಲಿಲ್ಲ. ಎರಡು ದೇಶ ಒಂದಾದಾಗ ಯಾರು ಎಲ್ಲಿ ಬೇಕಾದರೂ ಇರಬಹುದು ಎಂದಿದ್ದರು. ಆಗ ನೆಹರು ಅವರ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ಇತಿಹಾಸದ ಬಗ್ಗೆ ಅರಿವು ಮೂಡಿಸಿದರು.

Intro:ಬೆಂಗಳೂರು : ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಬಗ್ಗೆ ಇವತ್ತಿನ ಪೀಳಿಗೆಗೆ ಅರಿವೆಯೇ ಇಲ್ಲ. ಇಂತಹ ನಾಯಕರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನ ಹಿರಿಯ ಮುಖಂಡ ಆರ್.ವಿ. ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. Body:ಕ್ವಿಟ್ ಇಂಡಿಯಾ ಚಳುವಳಿಯ 77 ನೇ ವರ್ಷದ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಜೆಡಿಎಸ್ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಸ್ಟ್ ಇಂಡಿಯಾ ಕಂಪನಿ ಮೂಲಕ ಭಾರತಕ್ಕೆ ಬಂದ ಬ್ರಿಟಿಷರು, ನಮ್ಮನ್ನು ಗುಲಾಮರನ್ನಾಗಿಸಿದ್ದರು. ಆ ವೇಳೆ ಮಹಾತ್ಮಗಾಂಧಿ, ನೆಹರು, ಜಿನ್ನಾ ಸೇರಿದಂತೆ ಹಲವಾರು ನಾಯಕರು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಇವತ್ತಿನ ಪೀಳಿಗೆಗೆ ಅದರ ಅರಿವೆಯೇ ಇಲ್ಲ. ಗಾಂಧಿಯವರ ಹೋರಾಟ, ಬಲಿದಾನದ ಬಗ್ಗೆ ಕೆಟ್ಟದಾಗಿ ಹೇಳುತ್ತಾರೆ. ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ನೆಹರು ಅವರು ಡಿಸ್ಕವರಿ ಆಫ್ ಇಂಡಿಯಾ ಮೂಲಕ ಆನೇಕ ಕಾರ್ಯಕ್ರಮಗಳನ್ನು ಮಾಡಿದ್ದರು. ಬ್ರಿಟಿಷರು ದೇಶ ಬಿಟ್ಟು ಹೋದ ನಂತರ ಖಜಾನೆಯಲ್ಲಿ ಹಣವಿರರಲಿಲ್ಲ. ಎರಡು ದೇಶ ಒಂದಾದಾಗ ಯಾರು ಎಲ್ಲಿ ಬೇಕಾದರೂ ಇರಬಹುದು ಎಂದಿದ್ದರು. ಆಗ ನೆಹರು ಅವರ ಬಗ್ಗೆ ಅಪಪ್ರಚಾರ ಮಾಡಿದ್ದರು. ದೇಶ ಉಳಿಸಿಕೊಳ್ಳುವ ಸಲುವಾಗಿ ಅಂದು ನೆಹರು ಕೆಲವು ಕಂಟೀಷನ್ ಹಾಕಿದ್ದರು. ಆ ವೇಳೆ ಉಮರ್ ಅಬ್ದುಲ್ಲಾ ತಂದೆ ಶೇಖರ್ ಅಬ್ದುಲ್ ಸಹ ಇದ್ದರು. ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಜನರಿಗೆ ತಿಳಿಯುತ್ತಿಲ್ಲ ಎಂದರು.
ಪುಲ್ವಾಮಾ ದಾಳಿಯಲ್ಲಿ 40 ಜನ ಸತ್ತಿದ್ದಾರೆ. ಅವರ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರ ಮಾತನಾಡುವುದಿಲ್ಲ. ಅದನ್ನು ಮುಚ್ಚಿಕೊಳ್ಳಲು ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಸರ್ಜಿಕಲ್ ಸ್ಟ್ರೈಕ್ ಮಾಡಿದ ನಂತರ ಪುಲ್ವಾಮಾ ದಾಳಿ ನಿಂತಿತೇ?. ಆಗಲೂ ಹತ್ತು ಬಾರಿ ಪುಲ್ವಾಮಾ ದಾಳಿ ಯಾಗಿದೆ. ಹಲವಾರು ಸತ್ತಿದ್ದಾರೆ. ಪುಲ್ವಾಮಾ ಮೇಲೆ ದಾಳಿಯಾದಾಗ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ. ಇನ್ನು ಪಾಕಿಸ್ತಾನ ಮೇಲೆ ಏನು ಮಾಡುತ್ತಾರೆ. ಹಾಗಾಗಿ, ನಮ್ಮ ದೇಶದ ಬಗ್ಗೆ ನಾವು ಮಾತನಾಡಿದರೆ ದೇಶದ್ರೋಹಿಗಳು ಎನ್ನುತ್ತಾರೆ. ಅವರು (ಬಿಜೆಪಿಯವರು) ದೇಶಕ್ಕಾಗಿ ಹೋರಾಟ ಮಾಡಿಲ್ಲ. ಇವತ್ತು ದೇಶದ ಬಗ್ಗೆ ಮಾತನಾಡುತ್ತಿದ್ದಾರೆ. ಯುವಕರು ನಮೋ ಮೋದಿ ಎಂದು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.
ನಮಗೆ ಮಹನೀಯರು ದೇಶ ಉಳಿಸಿಕೊಟ್ಟಿದ್ದಾರೆ. ಮತ್ತೊಂದು ಕ್ರಾಂತಿ ಆಗಬೇಕು. ಆಗುತ್ತದೆ. ಮೊತ್ತೊಬ್ಬ ಗಾಂಧಿ, ಜೆಪಿ, ಪೆರಿಯಾರು ಹುಟ್ಟುತ್ತಾರೆ. ನಾವು ಎಲ್ಲ ಧರ್ಮದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ. ಒಟ್ಟಾಗಿ ಬಾಳಬೇಕಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಭಾರತದ ಚರಿತ್ರೆಯನ್ನು ತ್ಯಾಗ ಬಲಿದಾನ ಮಾಡಿದವರ ಬಗ್ಗೆ ತಿಳಿದುಕೊಂಡು ಅದನ್ನು ರೂಢಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೋರಾಟ ಮಾಡಬೇಕಿದೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.