ETV Bharat / state

ವಿಧಾನ ಪರಿಷತ್ತಿಗೂ ಈ ಬಾರಿ 7 ಅಭ್ಯರ್ಥಿಗಳ ಅವಿರೋಧ ಆಯ್ಕೆ ಸಂಭವ!

author img

By

Published : Jun 18, 2020, 4:36 AM IST

Updated : Jun 18, 2020, 7:08 AM IST

ಚುನಾವಣೆ ನಡೆಯದೇ ವಿಧಾನ ಪರಿಷತ್ತಿಗೂ ಈ ಬಾರಿ 7 ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗುವ ಸಂಭವ ಇದೆ.

unanimous selection of candidates to Legislative Council, MLC election, No MLC election, MLC election news, MLC election latest news, ಎಂಎಲ್​ಸಿ ಚುನಾವಣೆ, ನೋ ಎಂಎಲ್​ಸಿ ಚುನಾವಣೆ, ಎಂಎಲ್​ಸಿ ಚುನಾವಣೆ ಸುದ್ದಿ,
ಸಂಗ್ರಹ ಚಿತ್ರ

ಬೆಂಗಳೂರು : ರಾಜ್ಯಸಭೆಗೆ ನಾಲ್ಕು ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಂತೆ ರಾಜ್ಯ ವಿಧಾನ ಪರಿಷತ್ತಿಗೂ ಈ ಬಾರಿ 7 ಸ್ಥಾನಗಳಿಗೆ ಯಾವುದೇ ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ 7 ಸ್ಥಾನಗಳಿಗೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರ ಸಂಖ್ಯಾವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪಕ್ಷದಿಂದ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ರಾಜ್ಯ ವಿಧಾನಸಭೆಯಲ್ಲಿನ ಶಾಸಕರ ಸಂಖ್ಯಾವಾರು ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಮತ್ತು ಜೆಡಿಎಸ್ ಒಬ್ಬರು ಸದಸ್ಯರನ್ನು ಮೇಲ್ಮನೆಗೆ ಆಯ್ಕೆ ಮಾಡಬಹುದಾಗಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು 28 ಮತಗಳ ಅಗತ್ಯವಿದೆ. ಈ ಬಾರಿ ಮೂರೂ ಪಕ್ಷಗಳಲ್ಲಿ ಹೆಚ್ಚುವರಿ ಮತಗಳು ಇದ್ದರೂ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ವಿನ ಅಭ್ಯರ್ಥಿ ಕಣಕ್ಕಿಳಿಸಲು ಯಾವ ಪಕ್ಷವೂ ಆಸಕ್ತಿ ತೋರುತ್ತಿಲ್ಲ. ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಈ ಸಾರಿ ಅವಿರೋಧ ಆಯ್ಕೆ ನಡೆಯಲಿ ಎನ್ನುವ ಭಾವನೆಯನ್ನು ಆಡಳಿತ ಮತ್ತು ಪ್ರತಿಪಕ್ಷಗಳು ತಾಳಿದಂತಿದೆ.

ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಪಾಲಿನ ಇಬ್ಬರು ಅಭ್ಯರ್ಥಿಗಳನ್ನು (ಬಿಕೆ ಹರಿಪ್ರಸಾದ್, ನಜೀರ್ ಅಹ್ಮದ್ ) ಅಧಿಕೃತವಾಗಿ ಘೋಷಣೆ ಮಾಡಿದೆ. ಜೆಡಿಎಸ್ ಸಹ ಒಬ್ಬ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆ. ಅದರಂತೆ ಬಿಜೆಪಿ ಸಹ ತನ್ನ ಶಾಸಕರ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಅಭ್ಯರ್ಥಿಗಳ ಸ್ಪರ್ಧೆ ಪ್ರಕಟಿಸಿದರೆ ಮೇಲ್ಮನೆಗೆ ಚುನಾವಣೆ ಇಲ್ಲದೇ ಸರ್ವಾನುಮತದ ಆಯ್ಕೆಯಾಗುತ್ತದೆ.

ಬೆಜೆಪಿಯು ಐದು ಅಭ್ಯರ್ಥಿ ಕಣಕ್ಕಿಳಿಸಿದರೆ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಮೂರನೇ ಅಭ್ಯರ್ಥಿ ಜತೆ ನಾಲ್ಕನೇ ಅಭ್ಯರ್ಥಿ ನಿಲ್ಲಿಸಿದರೆ ಮಾತ್ರ ಚುನಾವಣೆ ನಡೆಯುವ ಸಂಭವ ಇದೆ. ಆದರೆ ಸದ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಮೂರು ಪಕ್ಷಗಳು ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿ ಬೇರೆ ಪಕ್ಷದ ಶಾಸಕರ ಮತಕ್ಕೆ ಕೈಹಾಕುವ ದುಸ್ಸಾಹಸ ಮಾಡುವುದು ವಿರಳವೆನ್ನಲಾಗುತ್ತದೆ.

ಕುತೂಹಲದ ನಡೆ...

ನಾಮತ್ರ ಸಲ್ಲಿಕೆಗೆ ಜೂ.18 ರಂದು ಕಡೆಯದಿನವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಬುಧವಾರ ತಡರಾತ್ರಿಯವರೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಬಿಜೆಪಿಯಲ್ಲಿ ಆಪರೇಷನ್ ಕಮಲದ ಸಂದರ್ಭದಲ್ಲಿ ಭರವಸೆ ನೀಡಿದಂತೆ ವಿಧಾನಸಭೆ ಉಪ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವ ಹೆಚ್ ವಿಶ್ವನಾಥ್, ಎಂಟಿ ಬಿ ನಾಗರಾಜ್ ಮತ್ತು ಉಪಚುನಾವಣೆಯಲ್ಲಿ ಟಿಕೆಟ್ ನೀಡದೇ ಇರುವ ಸಚಿವ ಆರ್ ಶಂಕರ್​ಗೆ ಮೇಲ್ಮನೆಗೆ ಟಿಕೆಟ್ ಬೇಕಾಗಿರುವುದು ಪಕ್ಷದ ಆಂತರಿಕ ವಲಯದಲ್ಲಿ ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಿದೆ.

ಜೆಡಿಎಸ್​ನಲ್ಲಿ ಈ ತಿಂಗಳು ನಿವೃತ್ತರಾಗುತ್ತಿರುವ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿಗೆ ರಾಜ್ಯಸಭೆ ಬದಲು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಕೋಲಾರ ಜಿಲ್ಲೆಯ ಮೂಲದ ಶ್ರೀಮಂತ ಉದ್ದಿಮೆದಾರ ಗೋವಿಂದರಾಜ ಅವರಿಗೆ ಟಿಕೆಟ್ ನೀಡಲು ಮಾಜಿ ಸಿಎಂ ಕುಮಾರಸ್ವಾಮಿ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Last Updated : Jun 18, 2020, 7:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.