ETV Bharat / state

ಶಾಲಾ- ಕಾಲೇಜು ಆರಂಭ, ಆನ್​ಲೈನ್ ಶಿಕ್ಷಣದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ: ಸಚಿವ ಸುರೇಶ್ ಕುಮಾರ್

ಶಾಲಾ-ಕಾಲೇಜುಗಳ ಆರಂಭ ಹಾಗೂ ಆನ್​ಲೈನ್​ ತರಗತಿಗಳ ಬಗ್ಗೆ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Minister Suresh Kumar
ಸಚಿವ ಸುರೇಶ್ ಕುಮಾರ್
author img

By

Published : Jul 8, 2020, 11:29 AM IST

ಬೆಂಗಳೂರು: ಶಾಲಾ-ಕಾಲೇಜುಗಳ ಆರಂಭ ಹಾಗೂ ಆನ್​ಲೈನ್​ ತರಗತಿಗಳ ಬಗ್ಗೆ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲವೆಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯಗಳನ್ನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಜನೆ ಪರ ಕೈಗೊಳ್ಳಲು ಸಮರ್ಥವಾಗಿದೆ. ಪೋಷಕರು, ವಿದ್ಯಾರ್ಥಿಗಳು ಈ ಕುರಿತು ಯಾವುದೇ ಆತಂಕ ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಸರ್ಕಾರ ತಾನಾಗಿಯೇ ಯಾವುದೇ ನಿರ್ಣಯವನ್ನು ಅಧಿಕೃತವಾಗಿ ಪ್ರಕಟಿಸುವ ಮುನ್ನ ಯಾವುದೇ ಸುದ್ದಿಯನ್ನು ನಿಜ ಎಂದು ನಂಬಬೇಡಿ. ಆನ್​​ಲೈನ್ ಶಿಕ್ಷಣದ ಕುರಿತು ತಜ್ಞರ ಸಮಿತಿ ವರದಿ ಅಥವಾ ಬೇರೆ ಬೇರೆ ಆಯಾಮಗಳಲ್ಲಿ ಸರ್ಕಾರದ ಹಂತದಲ್ಲಿ ನಡೆಯುವ ಚರ್ಚೆಗಳು ಎಂದಿಗೂ ಅಂತಿಮ ನಿರ್ಣಯವಾಗಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.