ಬೆಂಗಳೂರು: ಮಾರಕ ಕೊರೊನಾ ವೈರಸ್ ಭೀತಿ ದಿನೇ ದಿನೇ ನಗರದಲ್ಲೂ ಹೆಚ್ಚಾಗುತ್ತಲೇ ಇದೆ. ಸದ್ಯ ಸಿಲಿಕಾನ್ ಸಿಟಿಯ ಪೊಲೀಸರಲ್ಲೂ ಈ ಭಯ ಕಾಡಿ ಹಿಂದೊಮ್ಮೆ ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ ಮಾಡುವ ಸಂಖ್ಯೆ ಕಡಿಮೆ ಮಾಡಿದ್ರು. ಆದರೆ ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ ಮಾಡುವಾಗ ಯಾವುದೇ ರೀತಿಯ ಸೋಂಕು ತಗುಲಲ್ಲ ಅನ್ನೋ ವರದಿಯನ್ನ ರಾಜೀವ್ ಗಾಂಧಿ ಎದೆರೋಗ ಸಂಸ್ಥೆ ಸ್ಪಷ್ಟನೆ ನೀಡಿದೆ.
ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದ ಬಳಿಕ ನಗರದಲ್ಲಿ ಯಾವುದೇ ಕಾರಣಕ್ಕೂ ಡಿಡಿ ಕೇಸ್ ಚೆಕ್ ಮಾಡುವುದನ್ನ ನಿಲ್ಲಿಸುವುದಿಲ್ಲ. ನಗರದಲ್ಲಿ ಮದ್ಯಪಾನ ಮಾಡಿಕೊಂಡು ವಾಹನ ಚಲಾವಣೆ ಮಾಡುವವರನ್ನ ತಡೆದು ಸಂಚಾರಿ ಪೊಲೀಸರು ಆಲ್ಕೋಮೀಟರ್ ಮೂಲಕ ಚೆಕ್ ಮಾಡ್ತಾರೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಕುಡಿದ ವ್ಯಕ್ತಿ ಆಲ್ಕೋ ಮೀಟರ್ನಲ್ಲಿರುವ ಪೈಪ್ಗೆ ಬಾಯಿ ಇಟ್ಟು ಊದಬೇಕಾಗುತ್ತೆ. ಇದರಿಂದ ವೈರಸ್ ಹರಡುತ್ತದೆ ಎಂದು ಜನರು ಪೊಲೀಸರ ಬಳಿ ತಮ್ಮ ಅಳಲು ತೋಡಿಕೊಂಡಿದ್ರು. ಆದರೆ ಇದು ಹರಡಲ್ಲ. ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ಗೆ ಒಪ್ಪದೆ ನೆಪ ಹೇಳಬೇಡಿ. ಎಲ್ಲವನ್ನೂ ವೈಜ್ಞಾನಿಕವಾಗಿಯೇ ಮಾಡುತ್ತಿದ್ದೇವೆ ಭಾಸ್ಕರ್ ರಾವ್ ಹೇಳಿದ್ದಾರೆ.