ETV Bharat / state

ಅಮುಲ್ ಜೊತೆ ನಂದಿನಿ ವಿಲೀನವಿಲ್ಲ, 100 ವರ್ಷವಾದರೂ ನಂದಿನಿ ಅಸ್ತಿತ್ವ ಇರಲಿದೆ: ಸಿಎಂ ಬೊಮ್ಮಾಯಿ

100 ವರ್ಷ ಕಳೆದರೂ ನಂದಿನಿ ಅಸ್ತಿತ್ವ ಇರಲಿದೆ - ವಿಪಕ್ಷಗಳು ಊಹಾಪೋಹದಿಂದ ಟೀಕೆ ಮಾಡುತ್ತಿದ್ದಾರೆ - ಎನ್​ಎಸ್​ಎಸ್​ನ ಕ್ಯಾಲೆಂಡರ್ ಬಿಡುಗಡೆ ವೇಳೆ ಸಿಎಂ ಬೊಮ್ಮಾಯಿ ಸ್ಪಷ್ಟನೆ

No  collaboration of Nandini with Amul Basavaraj Bommai
ಅಮುಲ್ ಜೊತೆ ನಂದಿನಿ ವಿಲೀನವಿಲ್ಲ
author img

By

Published : Jan 1, 2023, 3:33 PM IST

Updated : Jan 1, 2023, 9:05 PM IST

ಅಮುಲ್ ಜೊತೆ ನಂದಿನಿ ವಿಲೀನವಿಲ್ಲ ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಇನ್ನೂ 100 ವರ್ಷವಾದರೂ ನಮ್ಮ ರಾಜ್ಯದ ನಂದಿನಿ ಬ್ರಾಂಡ್ ಹಾಗೆಯೇ ಇರಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದು ಪರಸ್ಪರ ತಾಂತ್ರಿಕ ಸಹಾಯದ ಕುರಿತೇ ಹೊರತು ಅಮುಲ್ ಮತ್ತು ನಂದಿನಿ ವಿಲೀನ ಮಾಡುವ ಉದ್ದೇಶ ಇದರಲ್ಲಿಲ್ಲ. ನಂದಿನಿಯದ್ದು ಪ್ರತ್ಯೇಕ ಅಸ್ತಿತ್ವ, ಅದು ಹಾಗೆಯೇ ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ಆರ್‌ಟಿ ನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ನಂದಿನಿ ಜೊತೆ ಅಮುಲ್ ವಿಲೀನವಾಗಲಿದೆ ಎಂಬ ಪ್ರತಿಪಕ್ಷಗಳ ಆರೋಪ ಬಹಳ ತಪ್ಪು ಕಲ್ಪನೆಯಿಂದ ಕೂಡಿದ್ದಾಗಿದೆ. ಊಹೆ ಮಾಡಿ ಟೀಕೆ ಮಾಡೋರಿಗೆ ಏನು ಹೇಳೋದು? ಅಮಿತ್ ಶಾ ಮಾತನಾಡಿದ್ದು ಬಹಳ ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರದಿಂದ ನಂದಿನಿ ಮತ್ತು ಅಮುಲ್ ಹೋಗಬೇಕು. ತಾಂತ್ರಿಕವಾಗಿ ಪರಸ್ಪರ ಸಹಾಯ ಮಾಡಬೇಕು ಎಂಬುದು ಅವರ ಮಾತಿನ ಉದ್ದೇಶವಾಗಿತ್ತು.

ಅವರ ಹೇಳಿಕೆ ವಿಲೀನ ಮಾಡೋದಾಗಲಿ ಇನ್ನೊಂದು ಮಾಡೋದಾಗಲಿ ಅಲ್ಲ. ನಂದಿನ ಅಸ್ತಿತ್ವ ಇದ್ದೇ ಇರುತ್ತದೆ, ಇನ್ನೂ 100 ವರ್ಷವಾದರೂ ಇದ್ದೇ ಇರುತ್ತದೆ. ನಂದಿನಿ ಶಾಶ್ವತವಾಗಿ ಇದ್ದೇ ಇರಲಿದೆ. ಅಮುಲ್ ಅವರದ್ದು ಅವರಿಗೆ ಇರುತ್ತದೆ, ನಮ್ಮ ನಂದಿನ ನಮಗೆ ಇರುತ್ತದೆ. ಕೆಲವು ಏರಿಯಾಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದರೆ ಲಾಭ ಇರುತ್ತದೆ. ಕೆಲ ಭಾಗದಲ್ಲಿ ತಾಂತ್ರಿಕ, ಆಡಳಿತ ವಿಚಾರಗಳನ್ನು ಶೇರ್ ಮಾಡಿಕೊಂಡು ಕೆಲಸ ನಿರ್ವಹಿಸಬಹುದು ಅಂತ ಅಮಿತ್ ಶಾ ಹೇಳಿರೋದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದರು.

ಇದನ್ನ ದೊಡ್ಡ ಸುದ್ದಿ ಮಾಡಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ. ಅಮಿತ್ ಶಾ ಸಹ ಹೇಳಿದ್ದು ಇದನ್ನೇ. ನಂದಿನಿ ಪ್ರತ್ಯೇಕವಾಗಿ ಆಗಿ ತನ್ನ ಐಡೆಂಟಿಟಿ ಮೆಂಟೇನ್ ಮಾಡುತ್ತದೆ ಎಂದು ಸಿಎಂ ವಿವರಣೆ ನೀಡಿದರು.

ಸಂಪುಟ ವಿಸ್ತರಣೆ ವಿಚಾರಕ್ಕೆ ನಿರಾಕರಣೆ: ಸಂಪುಟ ವಿಸ್ತರಣೆ ಹಾಗೂ ಅಮಿತ್ ಶಾ ಜೊತೆಯ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದರು. ಎರಡು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ತೆರೆ ಬೀಳಲಿದೆ ಎನ್ನಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲೂ ಸಿಎಂ ಸಿದ್ಧರಿಲ್ಲ.

ಸಿಎಂಗೆ ಶುಭಾಶಯ ಕೋರಿದ ಹಿರಿಯ ಅಧಿಕಾರಿಗಳು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ರಾಜ್ಯದ ಹಿರಿಯ ಅಧಿಕಾರಿಗಳು ಹೊಸವರ್ಷದ ಶುಭಾಶಾಯ ಕೋರಿದರು. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಎನ್​ಎಸ್​ಎಸ್​ನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

ಮಂಡ್ಯದಲ್ಲಿ ಶಾ ಹೇಳಿಕೆ: ಗುಜರಾತ್​ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಟ್ಟಿಗೆ ಕೆಲಸ ಮಾಡಬೇಕು. ಹೀಗೆ ಮಾಡುವುದರಿಂದ ಎಲ್ಲಾ ಹಳ್ಳಿಗಳಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡುವ ಸಾಮರ್ಥ್ಯ ಹೆಚ್ಚಾಗಲಿದೆ. ಎನ್​ಡಿಡಿ ಮೂಲಕ ಪ್ರತಿ ಪಂಚಾಯತ್​ನಲ್ಲಿ ಪ್ರೈಮರಿ ಡೈರಿ ಸ್ಥಾಪನೆ ಮಾಡಬೇಕಿದೆ. ಎರಡು ಲಕ್ಷ ಪ್ರೈಮರಿ ಡೈರಿ ನಿರ್ಮಾಣ ಮಾಡುವ ಮೂಲಕ ಹಾಲನ್ನು ರಫ್ತು ಮಾಡಬಹುದು ಎಂದು ಅಮಿತ್​ ಶಾ ಮಂಡ್ಯದಲ್ಲಿ 2,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮೆಗಾ ಡೈರಿ ಉದ್ಘಾಟನೆ ವೇಳೆ ಹೇಳಿದ್ದರು.

ವಿರೋಧ: ಶಾ ಅವರು ಅಮೂಲ್ ಹಾಗೂ ನಂದಿನಿ ಒಟ್ಟಿಗೆ ಕೆಲಸ ಮಾಡಬೇಕು ಎಂದು ಹೇಳಿದ್ದಕ್ಕೆ ತೀವ್ರವಾದ ಟೀಕೆಗಳು ವ್ಯಕ್ತವಾದವು. ಪ್ರತಿಪಕ್ಷ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಹೆಚ್​ ಡಿ ಕುಮಾರಸ್ವಾಮಿ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ವಿರೋಧಗಳು ವ್ಯಕ್ತವಾಗಿದ್ದವು. ಬ್ಯಾಂಕಿಂಗ್​ ವಿಭಾಗದಲ್ಲಿ ಮಾಡಿದ ವಿಲೀನದಿಂದ ಕರ್ನಾಟಕಕ್ಕೆ ಅನ್ಯಾಯವಾಗಿ ಅದೇ ರೀತಿ ಕೆಎಂಎಫ್​ನಲ್ಲೂ ಆಗಲಿದೆ. ವಿಲೀನದಿಂದ ಗುಜರಾತ್​ನ ಬಂಡವಾಳ ಶಾಹಿದಾರರ ಗುಲಾಮರಾಗಬೇಕಾಗುತ್ತದೆ ಎಂದೆಲ್ಲಾ ಟೀಕೆಗಳು ಕೇಳಿಬಂದಿವೆ.

ಇದನ್ನೂ ಓದಿ: ಅಮುಲ್ ಜೊತೆ ನಂದಿನಿ ವಿಲೀನ ದುರದೃಷ್ಟಕರ: ಟಿ. ವೆಂಕಟರಮಣಯ್ಯ

Last Updated : Jan 1, 2023, 9:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.