ETV Bharat / state

ಸಿಎಂ ಕುರ್ಚಿ ಖಾಲಿಯಿಲ್ಲ, ಮುಂದಿನ 2 ವರ್ಷ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿ : ಬಿ.ಎನ್.ಬಚ್ಚೇಗೌಡ

ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನಾಯಕತ್ವ ಬದಲಾವಣೆ ಮಾಡುವುದರ ಬಗ್ಗೆ ಹೈಕಮಾಂಡ್ ಯಾವುದೇ ತಲೆಕೆಡಿಸಿಕೊಂಡಿಲ್ಲ. ಮಂತ್ರಿ ಮಂಡಲದ ಒಬ್ಬ ಸಚಿವ ದೆಹಲಿಗೆ ಹೋಗಿ ಬಂದಾಕ್ಷಣ ಇದೆಲ್ಲ ಆಗುವ ಕೆಲಸವಲ್ಲ ಎಂದು ತಿಳಿಸಿದರು.

ಸಂಸದ ಬಿ.ಎನ್.ಬಚ್ಚೇಗೌಡ.
ಸಂಸದ ಬಿ.ಎನ್.ಬಚ್ಚೇಗೌಡ.
author img

By

Published : Jun 3, 2021, 2:07 AM IST

ಹೊಸಕೋಟೆ: ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನ ಖಾಲಿ ಇಲ್ಲ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನಾಯಕತ್ವ ಬದಲಾವಣೆ ಮಾಡುವ ವಿಚಾರವಾಗಿ ಹೈಕಮಾಂಡ್ ಯಾವುದೇ ತಲೆಕೆಡಿಸಿಕೊಂಡಿಲ್ಲ ಎಂದು ಸಂಸದ ಬಿಎನ್ ಬಚ್ಚೇಗೌಡ ತಿಳಿಸಿದ್ದಾರೆ.

ಹೊಸಕೋಟೆ ನಗರದ ಕೊರೊನಾ ವಾರಿಯರ್ಸ್‌ಗಳಿಗೆ ನಗರಸಭೆ ಆವರಣದಲ್ಲಿ 25 ಕೆ.ಜಿ ಅಕ್ಕಿ , ದಿನಸಿ ಪದಾರ್ಥಗಳು , ತರಕಾರಿಗಳು , ಹಣ್ಣುಗಳು , ಒಂದು ಕೋಳಿ ಹಾಗೂ 25 ಕೋಳಿ ಮೊಟ್ಟೆಗಳನ್ನು ಒಳಗೊಂಡ ದಿನಸಿ ಪದಾರ್ಥಗಳ ಕಿಟ್​ಗಳನ್ನು ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ ಅವರ ಜೊತೆಯಲ್ಲಿ ವಿತರಿಸಿ ಮಾತನಾಡಿದತರು.

ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನಾಯಕತ್ವ ಬದಲಾವಣೆ ಮಾಡುವುದರ ಬಗ್ಗೆ ಹೈಕಮಾಂಡ್ ಯಾವುದೇ ತಲೆಕೆಡಿಸಿಕೊಂಡಿಲ್ಲ. ಮಂತ್ರಿ ಮಂಡಲದ ಒಬ್ಬ ಸಚಿವ ದೆಹಲಿಗೆ ಹೋಗಿ ಬಂದಾಕ್ಷಣ ಇದೆಲ್ಲ ಆಗುವ ಕೆಲಸವಲ್ಲ ಎಂದು ತಿಳಿಸಿದರು.

ಸಂಸದ ಬಚ್ಚೇಗೌಡರಿಂದ ಕೊರೊನಾ ವಾರಿಯರ್ಸ್​ಗೆ ದಿನಸಿ ಕಿಟ್​

ಮಾತು ಮುಂದುವರಿಸಿ ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ಸಹ ಪೌರಕಾರ್ಮಿಕರು ಹಾಗೂ ಆಶಾಕಾರ್ಯಕರ್ತರಿಗೆ ಆಹಾರ ಪದಾರ್ಥಗಳ ಕಿಟ್​ಗಳನ್ನು ವಿತರಣೆ ಮಾಡಿದ್ದೆವು. ಈ ಬಾರಿಯೂ ಎರಡೆನೇ ಅಲೆ ಸಂದರ್ಭದಲ್ಲಿ ಸಹ ಕೊರೊನಾ ವಾರಿಯರ್ಸ್​ಗಳಿಗೆ ಸುಮಾರು ಮೂರು ಸಾವಿರ ರೂಪಾಯಿ ಮೌಲ್ಯದ ಪೌಷ್ಠಿಕ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದ್ದೆವೆ.

ಹೊಸಕೋಟೆ ತಾಲೂಕಿನಲ್ಲಿ ಕೊರೊನಾ ನಿರ್ವಹಣೆ ಮಾಡುವಲ್ಲಿ ಶಾಸಕ ಶರತ್ ಬಚ್ಚೇಗೌಡ ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ತಾಲೂಕಿನಲ್ಲಿ ಅತ್ಯಂತ ಉತ್ತಮವಾಗಿ ಚಿಕಿತ್ಸೆ ನೀಡುವ ಹೈಟೆಕ್ ಆಸ್ಪತ್ರೆಗಳೂ ಸಹ ಇರುವುದರಿಂದ ಬಹಳ ಸಹಕಾರಿಯಾಗಿದೆ. ಸರ್ಕಾರ ಸಹ ಕೊರೊನಾ ನಿರ್ವಹಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಅನಾವಶ್ಯಕವಾಗಿ ಸರ್ಕಾರಗಳನ್ನು ಟೀಕಿಸುವ ಕೆಲಸ ಯಾರೂ ಮಾಡಬಾರದು ಎಂದು ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.

ಇನ್ನು ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸುವ ಬದಲು ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಲಾಕ್ ಡೌನ್ ಸಡಿಲಿಕೆ ತೆರವು ಮಾಡಬೇಕು, ಇದರಿಂದ ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಬಡ ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದರು.

ಇದನ್ನು ಓದಿ: ರಾಜ್ಯದಲ್ಲಿಂದು 16 ಸಾವಿರ ಮಂದಿಗೆ ಕೋವಿಡ್: 463 ಮಂದಿ ಸೋಂಕಿಗೆ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.