ETV Bharat / state

ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ: ಸಿಎಂ ಸ್ಪಷ್ಟನೆ

ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ - ಮಂಡ್ಯ ಮತ್ತು ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗಿ - ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸ್ಪಷ್ಟನೆ

basavaraj Bommai
ಸವರಾಜ ಬೊಮ್ಮಾಯಿ
author img

By

Published : Dec 30, 2022, 12:21 PM IST

ಆರ್‌ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಂಡ್ಯ ಮತ್ತು ಬೆಂಗಳೂರು ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಗದಿತ ಕಾರ್ಯಕ್ರಮಗಳು ಅಮಿತ್ ಶಾ ಉಪಸ್ಥಿತಿಯಲ್ಲಿಯೇ ನಡೆಯಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್‌ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಮಿತ್ ಶಾ ಬಂದಿದ್ದಾರೆ. ಅವರ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮೋದಿ ಅವರ ತಾಯಿ ಅಂತ್ಯಸಂಸ್ಕಾರ ಕಾರ್ಯ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಸಲು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ ಅಮಿತ್ ಶಾ ಗುಜರಾತ್ ಪ್ರವಾಸ ಕೈ ಬಿಟ್ಟಿದ್ದು, ರಾಜ್ಯದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪೂರ್ವನಿಗದಿಯಂತೆ ಅಮಿತ್ ಶಾ ಅವರ ಮಂಡ್ಯ ಹಾಗೂ ಬೆಂಗಳೂರು ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ಮೀಸಲಾತಿ ಬಗ್ಗೆ ಇಂದು ವಿಸ್ತೃತ ವರದಿ: ನಿನ್ನೆ ಸಂಜೆ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ನಿನ್ನೆ ಹೆಚ್ಚುವರಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಇದರ ಬಗ್ಗೆ ನಾನು ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಇಂದು ಮಧ್ಯಾಹ್ನ ಈ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನೀಡಲಿದ್ದೇನೆ. ಅಮಿತ್ ಶಾ ಕಾರ್ಯಕ್ರಮದ ನಂತರ ಎಲ್ಲಾ ಜಿಲ್ಲೆಗಳ ಜೊತೆಗೂ ಆ ನಿರ್ಣಯಗಳನ್ನ ಹಂಚಿಕೊಳ್ಳಲಿದ್ದೇನೆ. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಉದ್ದೇಶವೇನು?, ಅದನ್ನ ಯಾವ ರೀತಿ ಅನುಷ್ಠಾನ ಮಾಡುತ್ತಿದ್ದೇವೆ ಎನ್ನುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂಬಂಧ ಪಟ್ಟ ಎಲ್ಲರೊಂದಿಗೂ ಮಾಹಿತಿ ಹಂಚಿಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.

ಗೋವಾ ಸಿಎಂ ಅವರಿಂದ ಜಾಸ್ತಿ ನಿರೀಕ್ಷೆ ಮಾಡಲ್ಲ: ಕಳಸಾ ಬಂಡೂರಿ ವಿಷಯದಲ್ಲಿ ಗೋವಾ ಸಿಎಂ ಅವರ ಕಡೆಯಿಂದ ಜಾಸ್ತಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಈ ದೇಶ ಕಾನೂನಿನಿಂದ ನಡೆಯಲಿದೆ. ದೇಶದಲ್ಲಿ ಅಂತರ ರಾಜ್ಯ ಜಲ ವ್ಯಾಜ್ಯ ಕಾಯ್ದೆ, ಸುಪ್ರೀಂಕೋರ್ಟ್ ಇದೆ. ನ್ಯಾಯಾಧಿಕರಣದ ಆದೇಶ ಆಗಿದೆ, ಕೇಂದ್ರ ಸರ್ಕಾರ ನೋಟಿಫಿಕೇಶನ್ ಕೂಡ ಮಾಡಿದೆ. ಈಗ ನಮ್ಮ ಡಿಪಿಆರ್‌ ಗೆ ಒಪ್ಪಿಗೆ ಕೊಟ್ಟಿದ್ದಾರೆ. ಎಲ್ಲವೂ ಕಾನೂನು ಬದ್ಧವಾಗಿ ಆಗಿದೆ, ಕರ್ನಾಟಕ ಏನೇ ಮಾಡಿದರೂ ಕಾನೂನು ಬದ್ಧವಾಗಿಯೇ ಮಾಡಲಿದೆ. ಈಗ ನಮಗೆ ಡಿಪಿಆರ್ ಒಪ್ಪಿಗೆ ನೀಡಿ ಮುಂದಿನ ಕೆಲಸಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಮುಂದಿನ ಎಲ್ಲ ಕ್ರಮಗಳನ್ನು ಕಾನೂನು ಬದ್ಧವಾಗಿಯೇ ತೆಗೆದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಅಮಿತ್ ಶಾ ಮಂಡ್ಯ ಕಾರ್ಯಕ್ರಮದಲ್ಲಿ ಬದಲಾವಣೆ ಇಲ್ಲ: ಬಿಜೆಪಿ ಸ್ಪಷ್ಟನೆ

ನ್ಯಾಯಾಧಿಕರಣದಲ್ಲಿ ಗೋವಾದ ಹಿತ ರಕ್ಷಣೆ ಬಗ್ಗೆಯೂ ಕೇಳಿದ್ದಾರೆ, ನಮ್ಮ ಬೇಡಿಕೆಯನ್ನು ಕೇಳಿದ್ದಾರೆ. ಯಾರಿಗೂ ಧಕ್ಕೆಯಾಗದ ರೀತಿ ನ್ಯಾಯಾಧಿಕರಣ ಆದೇಶ ನೀಡಿದೆ. ಹಾಗಾಗಿ, ಈ ದೇಶದ ಕಾನೂನನ್ನ ಎಲ್ಲರೂ ಗೌರವಿಸಬೇಕು ಎಂದು ಗೋವಾ ಆಕ್ಷೇಪಕ್ಕೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

ಹೀರಾಬೆನ್ ಮೋದಿ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ನಿಧನಕ್ಕೆ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು. ಮೋದಿ ಹಾಗೂ ಹೀರಾಬೆನ್ ಅವರದ್ದು ಆದರ್ಶಮಯ ತಾಯಿ - ಮಗನ ಸಂಬಂಧವಾಗಿತ್ತು. ಪ್ರಧಾನಿಯವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಕೊನೆಯುಸಿರೆಳೆದಿದ್ದಾರೆ. ನಮಗೆಲ್ಲರಿಗೂ ದುಃಖದ ಸಂಗತಿ. ಪ್ರಧಾನಿ ಮೋದಿ ಅವರು ತೋರಿಸಿರುವ ಗೌರವ, ಪ್ರೀತಿ ಅನನ್ಯವಾದದ್ದು. ಹೀರಾಬೆನ್ ಅವರು ಬಹಳ ಸರಳ. ಆದರೆ, ಅಷ್ಟೇ ವಿಶೇಷ ಎಂದು ನರೇಂದ್ರ ಮೋದಿಯವರು ಹಲವು ಬಾರಿ ಹೇಳಿದ್ದಾರೆ. ಅವರು ನರೇಂದ್ರ ಮೋದಿಯವರಿಗೆ ಆದರ್ಶ, ತತ್ವ ನಿಷ್ಠೆ, ದೇಶಭಕ್ತಿಯನ್ನು ತುಂಬಿದ್ದಾರೆ. ಅವೆಲ್ಲಾ ಗುಣಗಳನ್ನು ಮೋದಿಯವರಲ್ಲಿ ನೋಡುತ್ತಿದ್ದೇವೆ ಎಂದರು.

ಮೋದಿಯವರು ಸಂತಾಪ ಸಂದೇಶದಲ್ಲಿ ತಾಯಿಯನ್ನು ಕರ್ಮಯೋಗಿ ಎಂದು ಬಣ್ಣಿಸಿದ್ದರು. ಮೋದಿ ಸಹ ಕರ್ಮಯೋಗಿಯಾಗಿದ್ದಾರೆ. ತಾಯಿ ಅವರ ಕೊನೆಯ ಕರ್ಮಗಳನ್ನು ಮಗನಾಗಿ ಮಾಡಿದ್ದಾರೆ. ತಾಯಿಯ ಅಂತ್ಯಕ್ರಿಯೆ ಬಳಿಕ ಪ್ರಧಾನಿಯವರು ಯಥಾಪ್ರಕಾರ ತಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಭಗವಹಿಸಲಿದ್ದಾರೆ. ಇದು ನರೇಂದ್ರ ಮೋದಿಯವರ ಕರ್ತವ್ಯ ಪ್ರಜ್ಞೆಯನ್ನು ಬಿಂಬಿಸುತ್ತದೆ. ತಾಯಿ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಪ್ರಧಾನಿ ಮೋದಿ ಹಾಗೂ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ:ತಾಯಿಯ ಅಂತಿಮ ದರ್ಶನ ಪಡೆದ ಪ್ರಧಾನಿ.. ಅಮ್ಮನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಮೋದಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.